ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಂಚ ಕೇಳಿದ ಸಚಿವ ಅಶೋಕ್ ಪಿಎ; ದೂರು ದಾಖಲು

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜನವರಿ 26 : ಕಂದಾಯ ಸಚಿವ ಆರ್. ಅಶೋಕ ಪಿಎ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಬ್ ರಿಜಿಸ್ಟ್ರಾರ್ ಬಳಿ ಲಂಚ ಕೇಳಿದ ಪಿಎ ವಿರುದ್ಧ ದೂರು ನೀಡಲಾಗಿದೆ.

ಶೃಂಗೇರಿ ಸಬ್ ರಿಜಿಸ್ಟ್ರಾರ್ ಚೆಲುವರಾಜ್ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಅಶೋಕ ಪಿಎ ಗಂಗಾಧರ್ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ದೂರನ್ನು ಸಲ್ಲಿಸಿದ್ದಾರೆ.

ಸಚಿವ ಅಶೋಕ್ ಪಿಎ ಲಂಚ ಕೇಳಿದ ಆರೋಪ; ಪೊಲೀಸರಿಗೆ ದೂರು ನೀಡುತ್ತೇನೆಂದ ಚೆಲುವರಾಜ್ಸಚಿವ ಅಶೋಕ್ ಪಿಎ ಲಂಚ ಕೇಳಿದ ಆರೋಪ; ಪೊಲೀಸರಿಗೆ ದೂರು ನೀಡುತ್ತೇನೆಂದ ಚೆಲುವರಾಜ್

ದೂರಿನಲ್ಲಿ ಚೆಲುವರಾಜ್ ಜನವರಿ 24ರಂದು ಚಿಕ್ಕಮಗಳೂರು ಪ್ರವಾಸವನ್ನು ಸಚಿವ ಆರ್. ಅಶೋಕ ಕೈಗೊಂಡಿದ್ದರು. ಈ ವೇಳೆ ಅಶೋಕ್ ಪಿಎ ಗಂಗಾಧರ್ ಹಣ ಕೇಳಿದ್ದಾರೆ ಎಂದು ಆರೋಪ ಮಾಡಿದ್ದಾರೆ.

 ಲಂಚ ನೀಡಿದ ಆರೋಪ: ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್‌ ಉಪಾಧ್ಯಕ್ಷನಿಗೆ ಜೈಲು ಶಿಕ್ಷೆ ಲಂಚ ನೀಡಿದ ಆರೋಪ: ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್‌ ಉಪಾಧ್ಯಕ್ಷನಿಗೆ ಜೈಲು ಶಿಕ್ಷೆ

Asking For Bribe Complaint Aganist Revenue Minister PA R Ashok

ಸಚಿವರ ಪಿಎ ವಿರುದ್ಧ ದೂರು ನೀಡಿರುವ ಕಾರಣ ತನಗೆ ಸಹ ಸೂಕ್ತ ರಕ್ಷಣೆ ನೀಡಬೇಕು ಎಂದು ಚೆಲುವರಾಜ್ ದೂರಿನಲ್ಲಿ ಮನವಿ ಮಾಡಿದ್ದಾರೆ. ಸಚಿವರ ಪಿಎ ವಿರುದ್ಧ ಕೇಳಿ ಬಂದಿರುವ ಲಂಚದ ಆರೋಪ ಪ್ರತಿಪಕ್ಷಗಳಿಗೆ ಅಸ್ತ್ರವಾಗುವ ನಿರೀಕ್ಷೆ ಇದ್ದು, ಜನವರಿ 28ರಿಂದ ವಿಧಾನ ಮಂಡಲ ಅಧಿವೇಶನ ಆರಂಭವಾಗಲಿದೆ.

ಲಂಚ ತಗೊಂಡು ಬಿಲ್ಡಿಂಗ್ ನಿಂದ ಜಿಗಿದು ಕಾಲು ಮುರಿದುಕೊಂಡ ಪೇದೆ ಲಂಚ ತಗೊಂಡು ಬಿಲ್ಡಿಂಗ್ ನಿಂದ ಜಿಗಿದು ಕಾಲು ಮುರಿದುಕೊಂಡ ಪೇದೆ

ಕಂದಾಯ ಸಚಿವ ಆರ್. ಅಶೋಕ ಶೃಂಗೇರಿಗೆ ಭೇಟಿ ನೀಡಿದಾಗ ಚೆಲುವರಾಜ್ ಅವರನ್ನು ಭೇಟಿಯಾಗಲು ಹೋಗಿದ್ದರು. ಆಗ ಗಂಗಾಧರ್ ಕೊಠಡಿಯೊಂದಕ್ಕೆ ಕರೆದುಕೊಂಡು ಹೋಗಿ ಲಂಚ ಕೇಳಿದ್ದಾರೆ ಎಂದು ಚೆಲುವರಾಜ್ ಆರೋಪಿಸಿದ್ದಾರೆ. ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Recommended Video

ಗಣರಾಜ್ಯೋತ್ಸವಕ್ಕೆ ಸಾರ್ವಜನಿಕರಿಗೆ ಪ್ರವೇಶಕ್ಕೆ ಬ್ರೇಕ್- ರಾಜಧಾನಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ | Oneinda Kannada

ಗಂಗಾಧರ್ ಸಚಿವ ಅಶೋಕ್ ಅವರ ಪಿಎ ನಾ? ಅಥವ ಬೇರೆ ವ್ಯಕ್ತಿಯೇ ಎಂಬುದು ಇನ್ನೂ ತಿಳಿದುಬಂದಿಲ್ಲ. ಸಚಿವರು ಸಹ ಈ ಘಟನೆ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

English summary
Sringeri sub register Cheluvaraj field the complaint against revenue minister R. Ashoka PA Gangadhar for asking for bribe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X