• search
  • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಲೆನಾಡಿನಲ್ಲಿ ರಾಫ್ಟಿಂಗ್: ಖುಷಿಯಲ್ಲಿ ಮಿಂದೆದ್ದ ಪ್ರವಾಸಿಗರು

By ಚಿಕ್ಕಮಗಳೂರು ಪ್ರತಿನಿಧಿ
|

ಚಿಕ್ಕಮಗಳೂರು, ಸೆಪ್ಟೆಂಬರ್.11: ಎದೆಗೆ ಬಿಗಿದಪ್ಪುವ ಲೈಫ್​ ಜಾಕೇಟ್​, ತಲೆಗೊಂದು ಹೆಲ್ಮೆಟ್​, ಜೊತೆಗೊಂದು ಹುಟ್ಟುಗೋಲು ಇದು ರಾಫ್ಟಿಂಗ್​ಗೆ ನೀರಿಗಿಳಿಯುವ ಮುನ್ನ ನಮ್ಮ ಕೈಸೇರುವ ಹತಾರಗಳು. ಇವೆಲ್ಲಾ ಇದ್ರೇನೆ ಈ ಸಾಹಸಮಯ ಕ್ರೀಡೆಗೊಂದು ಗತ್ತು. ಜೊತೆಗೆ ನಮ್ಮ ಜೀವಕ್ಕೂ ಸೇಫ್ಟಿ.

ಅಷ್ಟಕ್ಕೂ ಈ ರಾಫ್ಟಿಂಗ್ ವಿಚಾರ ಇಲ್ಲೇಕೆ ಎನ್ನುತ್ತೀರಾ? ಅದಕ್ಕೂ ಕಾರಣವಿದೆ. ಕಾಫಿನಾಡು ಚಿಕ್ಕಮಗಳೂರಿನ ಕುದುರೆಮುಖದಲ್ಲಿ ಹುಟ್ಟಿ ಭೋರ್ಗರೆವ ಭದ್ರೆ ಮಲೆನಾಡಿನಲ್ಲಿ ಸುಮಾರು 350 ಕಿ. ಮೀ ಹರಿಯುತ್ತಿದ್ದು, ಕಳಸಾ ಸಮೀಪದ ಬಾಳೆಹೊಳೆ ಬಳಿ ನದಿಯಲ್ಲಿ 'ಏಸ್​ ಪೆಟ್ಲೆಸ್​ ಸಂಸ್ಥೆ' ರಾಫ್ಟಿಂಗ್ ಕ್ರೀಡೆ ನಡೆಸುತ್ತಿದೆ.

ಇಲ್ಲಿ ಸುಮಾರು 8 ಕಿ.ಮೀ.ದೂರ ನದಿಯಲ್ಲಿ ವೇಗವಾಗಿ ಚಲಿಸುವಾಗ ಸಿಗುವ ಅಲೆಗಳು ಅದ್ಭುತ ಅನಿಸುತ್ತದೆ. ಈ ವೇಳೆ ಬಲಾಢ್ಯ ಆನೆಯನ್ನು ಪಳಗಿಸಿದ ಅನುಭವದ ಜೊತೆ ಭೋರ್ಗರೆವ ಭದ್ರೆಯ ಮೇಲೆ ಎಲ್ಲರೂ ಸವಾರಿ ಮಾಡಿದಂತಾಗುತ್ತದೆ.

ಮಕ್ಕಳಿಗೆ ಸಿಹಿಸುದ್ದಿ: ಶಾಲೆಯಲ್ಲಿ ಪ್ರತಿದಿನ ಆಟ ಆಡೋದು ಕಡ್ಡಾಯ

ಅದರಲ್ಲೂ ಸಂಸ್ಥೆ ಅತ್ಯಾಧುನಿಕ ಸುರಕ್ಷತಾ ವಸ್ತುಗಳನ್ನು ಒಳಗೊಂಡಿರುವುದರಿಂದ ಯಾವುದೇ ಭಯಪಡುವ ಅವಶ್ಯಕತೆ ಇರುವುದಿಲ್ಲ. ಅಲ್ಲದೇ ಅನುಭವವುಳ್ಳ ತಜ್ಞರು ಇರುವುದರಿಂದ ಯಾವುದೇ ಆತಂಕಪಡುವ ಅವಶ್ಯಕತೆಯೂ ಇರುವುದಿಲ್ಲ.

ಹೀಗೆ ಸಾಹಸಮಯ ಜಲಕ್ರೀಡೆಗೆ ತಯಾರಾಗಿ ರಬ್ಬರ್​ ಬೋಟ್ ​ಮೇಲೆ ಕುಳಿತುಕೊಂಡು ಪ್ರಕೃತಿ ಸೌಂದರ್ಯ ಸವಿದವರ ಬಗ್ಗೆ ಲೇಖನ ಇಲ್ಲಿದೆ ನೋಡಿ ....

ಪ್ರವಾಸಿಗ ಪಾಟೀಲ್ ಅನುಭವ

ಪ್ರವಾಸಿಗ ಪಾಟೀಲ್ ಅನುಭವ

ನೀರಿಗಿಳಿಯುತ್ತಿದ್ದಂತೆ ರಭಸವಾಗಿ ಹರಿಯುವ ನದಿಯಲ್ಲಿ ಭೋರ್ಗರೆವ ಅಲೆಗಳು ಎದುರಾಗುತ್ತವೆ. ಆಗ ಆ ಅಲೆಗಳಿಗೆ ಸವಾಲು ಹಾಕಿ ಹುಟ್ಟು ಹಾಕುವುದೇ ಸಖತ್​ ಮೋಜು. ಇದರ ಜೊತೆಗೆ ಗೈಡ್​ ಹೇಳುವ ಕಮಾಂಡ್ ಗಳನ್ನು ಫಾಲೋ ಮಾಡುತ್ತಾ ಸಾಗುತ್ತಿದ್ದರೆ ಅದರ ಮಜವೇ ಬೇರೆ.

ಇನ್ನು ಈ ಬಾರಿ ಮಲೆನಾಡು ಭಾಗದಲ್ಲಿ ಹೆಚ್ಚು ಮಳೆಯಾದ ಕಾರಣ ಭದ್ರಾ ನದಿ ಮೈದುಂಬಿ ಹರಿಯುತ್ತಿದೆ. ಇಂತಹ ಪ್ರಕೃತಿ ಸೌಂದರ್ಯವನ್ನು ಸವೆಯುತ್ತಾ ಬಳುಕುವ ಭದ್ರೆಯ ಜೊತೆ ರಾಪಿಡ್​ಗಳಲ್ಲಿ ಸಾಗುತ್ತಿದ್ರೆ ಅದರ ರೋಮಾಂಚನವೇ ಬೇರೆ ಎನ್ನುತ್ತಾರೆ ಪ್ರವಾಸಿಗ ಪಾಟೀಲ್.

ಸುದ್ದಿಯ ಜಂಜಾಟ ಮರೆತು ಕೆಸರುಗದ್ದೆಯಲ್ಲಿ ಮಿಂದೆದ್ದ ಕೊಡಗಿನ ಪತ್ರಕರ್ತರು

 ನಿಮ್ಮೊಂದಿಗೆ ರಾಫ್ಟಿಂಗ್​ ಪರಿಣಿತರ ತಂಡ

ನಿಮ್ಮೊಂದಿಗೆ ರಾಫ್ಟಿಂಗ್​ ಪರಿಣಿತರ ತಂಡ

ಭದ್ರೆಯಲ್ಲಿ ಪ್ರವಾಸಿಗರು ಯಾವುದೇ ಆತಂಕವಿಲ್ಲದೇ ರಾಫ್ಟಿಂಗ್ ಮಾಡ್ತಾರೆ. ಅದ್ರಲ್ಲೂ ಮಹಿಳೆಯರು ಈ ರಾಫ್ಟಿಂಗ್​ನಲ್ಲಿ ಭಾಗವಹಿಸಿ ಸಖತ್​ ಮಜಾ ಅನುಭವಿಸಬಹುದು. ನೀರಿಗಿಳಿದಾಗ ಪ್ರತಿ ಬೋಟ್​ನಲ್ಲಿ ಅನುಭವಿ ಗೈಡ್ ​ಗಳು ಇರ್ತಾರೆ.

ಈ ಗೈಡ್ ಗಳು ನೀಡುವ ಮಾಹಿತಿಯಂತೆ ನೀರಿಗೆ ಧುಮುಕಿ ಪ್ರವಾಹದೊಂದಿಗೆ ಸರಸವಾಡೋ ಕ್ಷಣವಂತೂ ಮೈ ಜುಮ್ಮೆನಿಸುತ್ತದೆ. ಈ ವೇಳೆ ಕೆಲವೊಮ್ಮೆ ಆಯ ತಪ್ಪಿ ನೀರಿಗೆ ಬೀಳುವ ಸಾಧ್ಯತೆಯೂ ಇರುತ್ತದೆ. ಆಗ ರಾಫ್ಟಿಂಗ್​ ಪರಿಣಿತರ ತಂಡ ನಿಮ್ಮೊಂದಿಗಿರುತ್ತದೆ. ಕ್ಷಣಾರ್ಧದಲ್ಲಿ ಅವರು ರಕ್ಷಿಸುತ್ತಾರೆ.

ಕೊಡಗಿನ ಮಳೆಯಲ್ಲಿ ಆಟಿ-ನಾಟಿ ಕೂಡುಕೂಟದ ಸಂಭ್ರಮ

ಜೂನ್​ ನಿಂದ ನವೆಂಬರ್​ ವರೆಗೆ

ಜೂನ್​ ನಿಂದ ನವೆಂಬರ್​ ವರೆಗೆ

ಮಳೆಗಾಲ ಶುರುವಾಗುತ್ತಿದ್ದಂತೆ ಕಾಫಿನಾಡಿನ ಭದ್ರೆಯ ಒಡಲಲ್ಲಿ ರಾಫ್ಟಿಂಗ್​ ನಡೆಸಲಾಗುತ್ತದೆ. ಜೂನ್​ ನಿಂದ ನವಂಬರ್​ ವರೆಗೆ ಇಲ್ಲಿ ಈ ಸಾಹಸ ಕ್ರೀಡೆ ನಡೆಸಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ಮಳೆಗಾಲದಲ್ಲಿ ರಾಫ್ಟಿಂಗ್​ ಮಾಡುತ್ತಾರೆ.

ಸರಿಸುಮಾರು ಎರಡು ಗಂಟೆಗಳ ಕಾಲವಿರುವ ರಾಫ್ಟಿಂಗ್​ನಲ್ಲಿ 8 ಕಿಮೀ. 4 ಕಿಮೀ ಹಾಗೂ 15 ಕಿ ಮೀ ಎಂದು ವಿಂಗಡಣೆ ಮಾಡಲಾಗಿರುತ್ತದೆ. ಪ್ರತಿ ಕಿಮೀಗೂ ಬೇರೆ ಬೇರೆಯಾದ ದರ ನಿಗದಿ ಮಾಡಲಾಗಿರುತ್ತದೆ. ಈ ಸಾಹಸ ಕ್ರೀಡೆಯಲ್ಲಿ ಸಾಕಷ್ಟು ಜನ ಪಾಲ್ಗೊಂಡು ಸಖತ್​ ಮಜಾ ಮಾಡ್ತಾರೆ ಎನ್ನುತ್ತಾರೆ ಅನ್ನೋದು ವಿಶೇಷ.

 ಸಖತ್ ಖುಷಿ

ಸಖತ್ ಖುಷಿ

ಇನ್ನು ಭೋರ್ಗರೆವ ಈ ನದಿಯಲ್ಲಿ ರಾಪ್​ ತಿರುಗಿಸುವುದು, ಮುಳುಗಿಸುವುದು, ಅಲೆಗಳಿಗೆ ವಿರುದ್ಧವಾಗಿ ರಾಫ್ಟಿಂಗ್​ ಮಾಡುವುದು ಕ್ರೀಡೆಯ ಪ್ರಮುಖ ಭಾಗ. ಚಿಕ್ಕಮಗಳೂರು ಸುತ್ತಮುತ್ತ ಹತ್ತಾರು ಪ್ರವಾಸಿತಾಣಗಳಿದ್ದು, ಇಲ್ಲಿಗೆ ಬರುವ ಪ್ರವಾಸಿಗರಿಗೆ ರಾಫ್ಟಿಂಗ್​ ಮತ್ತಷ್ಟು ಥ್ರಿಲ್ ನೀಡುತ್ತದೆ ಅನ್ನೋದು ಸ್ಥಳೀಯರ ಅಭಿಪ್ರಾಯ.

ನದಿಯಲ್ಲಿ ರಾಫ್ಟಿಂಗ್​ ಮಾಡುವ ವೇಳೆ ನದಿಯ ನೀರು ಸಮತಟ್ಟಾಗಿರುವ ಜಾಗದಲ್ಲಿ ದೋಣಿ ಕೆಳಗಿಳಿಸಲಾಗುತ್ತದೆ. ಆಗ ತಣ್ಣಗೆ ಕೊರೆಯುವ ನದಿಯಲ್ಲಿ ಈಜಾಡುತ್ತಿದ್ದರೆ ಅದರ ಮಜಾನೇ ಬೇರೆ. ಈಜಾಡಿದ ನಂತರ ಮತ್ತೆ ಬೋಟ್​ ಏರಿ ರಾಫ್ಟಿಂಗ್​ ಮಾಡುವ ಥ್ರಿಲ್​ ಸಖತ್​ ಖುಷಿ ಕೊಡುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
'Ace Petless Institute' arranged rafting sports in the river near Balehole in kalasa. This adventure sport is held here from June to November. Come on, let's see how that sports happened.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more