ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾರ್ಮಾಡಿ ಘಾಟ್‌ನಲ್ಲಿ ವಾಹನ ಸಂಚಾರ ಬಂದ್; ವಿವರಗಳು

|
Google Oneindia Kannada News

ಚಿಕ್ಕಮಗಳೂರು, ಜುಲೈ 23; ಭಾರೀ ಮಳೆ ಹಿನ್ನಲೆಯಲ್ಲಿ ಚಾರ್ಮಾಡಿ ಘಾಟ್‌ ರಸ್ತೆಯಲ್ಲಿ ವಾಹನ ಸಂಚಾರ ರದ್ದುಗೊಳಿಸಲಾಗಿದೆ. ಚಿಕ್ಕಮಗಳೂರು ಜಿಲ್ಲಾಡಳಿತ ಈ ಕುರಿತು ಆದೇಶ ಹೊರಡಿಸಿದ್ದು, ವಾಹನ ಸವಾರರು ಈ ಕುರಿತು ಮಾಹಿತಿ ತಿಳಿದಿರಬೇಕಿದೆ.

ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ. ಎನ್. ರಮೇಶ್ ಶುಕ್ರವಾರ ಈ ಕುರಿತು ಆದೇಶ ಹೊರಡಿಸಿದ್ದಾರೆ. ಸಂಜೆ 7 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಯಾವುದೇ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ.

ಶಿರಾಡಿ ಘಾಟ್ ಮತ್ತೆ ಓಪನ್; ಬೃಹತ್ ವಾಹನ‌ ಸಂಚಾರಕ್ಕೆ ನಿಷೇಧ ಶಿರಾಡಿ ಘಾಟ್ ಮತ್ತೆ ಓಪನ್; ಬೃಹತ್ ವಾಹನ‌ ಸಂಚಾರಕ್ಕೆ ನಿಷೇಧ

ಬೆಳಗ್ಗೆ 6 ರಿಂದ ಸಂಜೆ 7 ಗಂಟೆಯ ತನಕ ಸಾಮಾನ್ಯ ಸರ್ಕಾರಿ ಬಸ್, 6 ಚಕ್ರದ ಲಾರಿ, 4 ಚಕ್ರದ ವಾಹನಗಳು, ಟೆಂಪೋ ಟ್ರಾವೆಲರ್, ಕಾರು, ಜೀಪು, ಅಂಬ್ಯುಲೆನ್ಸ್, ವ್ಯಾನ್, ಮಿನಿ ವ್ಯಾನ್ ಹಾಗೂ ಎರಡು ಚಕ್ರದ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ಪುಷ್ಯ ಮಳೆ ರೌದ್ರ ನರ್ತನ; ಜಲಾಶಯಗಳ ನೀರಿನ ಮಟ್ಟ ಪುಷ್ಯ ಮಳೆ ರೌದ್ರ ನರ್ತನ; ಜಲಾಶಯಗಳ ನೀರಿನ ಮಟ್ಟ

 All Vehicle Banned In Charmadi Ghat From 7 Pm To 6 Am

ದಿನದ 24 ಗಂಟೆಯೂ ಸ್ಲೀಪರ್ ಮತ್ತು ರಾಜಹಂಸ ಬಸ್, ಮಲ್ಟಿ ಆಕ್ಸೆಲ್ ವಾಹನ, ಬುಲೆಟ್ ಟ್ಯಾಂಕರ್, ಭಾರೀ ಗಾತ್ರದ ವಾಹನಗಳು, ಟ್ರಕ್ ಟ್ರೈಲರ್, ಶಿಪ್ ಕಾರ್ಗೋ ಕಂಟೈನರ್ಸ್, ಲಾಂಗ್ ಚಾಸಿಸ್ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ ಎಂದು ತಿಳಿಸಲಾಗಿದೆ.

ರಾಜ್ಯದಲ್ಲಿ ಇನ್ನೂ 3 ದಿನ ಮಳೆ ಹೆಚ್ಚು: 9 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ! ರಾಜ್ಯದಲ್ಲಿ ಇನ್ನೂ 3 ದಿನ ಮಳೆ ಹೆಚ್ಚು: 9 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ!

ಚಾರ್ಮಾಡಿಯಲ್ಲಿ ಗುಡ್ಡ ಕುಸಿತ; ಭಾರೀ ಮಳೆಯ ಕಾರಣದಿಂದಾಗಿ ಶಿರಾಡಿ ಘಾಟ್‌ನಲ್ಲಿ ಗುಡ್ಡ ಕುಸಿದಿತ್ತು. ದಕ್ಷಿಣ ಕನ್ನಡ-ಚಿಕ್ಕಮಗಳೂರು ಸಂಪರ್ಕಿಸುವ ಚಾರ್ಮಾಡಿ ಘಾಟ್‌ನ 6ನೇ ತಿರುವಿನಲ್ಲಿ ಕುಸಿತ ಉಂಟಾಗಿದ್ದು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಶಿರಾಡಿ ಘಾಟ್ ಬಂದ್ ಬಳಿಕ ಚಾರ್ಮಾಡಿಯಲ್ಲಿ ವಾಹನ ಸಂಚಾರ ಹೆಚ್ಚಾಗಿತ್ತು. ಇದರಿಂದಾಗಿ ರಸ್ತೆ ಮೇಲೆ ಒತ್ತಡ ಕೂಡಾ ಹೆಚ್ಚಾಗಿತ್ತು. ಈಗ ಅಧಿಕಾರಿಗಳು ವಾಹನ ಸಂಚಾರ ಬಂದ್ ಮಾಡಿ ಆದೇಶ ಹೊರಡಿಸಿದ್ದಾರೆ.

English summary
Due to heavy rain all vehicle banned in Charmadi ghat road from evening 7 to morning 6 am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X