ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಲ್ದೂರು: ಅಕ್ರಮವಾಗಿ ಬೀಟೆ ಮರ ಕಡಿದು ಸಾಮಿಲ್‌ಗೆ ಸಾಗಿಸಿದ ಅರಣ್ಯ ಅಧಿಕಾರಿ ಸಸ್ಪೆಂಡ್

ಅರಣ್ಯವನ್ನು ಉಳಿಸಿ ಬೆಳೆಸಬೇಕಾದ ಅಧಿಕಾರಿಗಳೇ ಅಕ್ರಮವಾಗಿ ಬೀಟೆ ಮರವನ್ನು ಕಡಿದು ಸಾಮಿಲ್‌ಗೆ ಸಾಗಿಸಿರುವ ಘಟನೆ ಆಲ್ದೂರು ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಫೆಬ್ರವರಿ, 02: ಅರಣ್ಯವನ್ನು ಉಳಿಸಿ ಬೆಳೆಸಬೇಕಾದ ಅಧಿಕಾರಿಗಳೇ ಅಕ್ರಮವಾಗಿ ಬೀಟೆ ಮರವನ್ನ ಕಡಿದು ಸಾಮಿಲ್‌ಗೆ ಸಾಗಿಸಿರುವ ಘಟನೆ ಆಲ್ದೂರು ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ. ಅಕ್ರಮವಾಗಿ ಮರವನ್ನು ಕಡಿದು ಸಾಗಿಸಿದ ಆರೋಪ ಮೇಲ್ನೋಟಕ್ಕೆ ಸಾಬೀತಾಗಿದ್ದು, ಈ ಹಿನ್ನೆಲೆ ಉಪವಲಯ ಅರಣ್ಯ ಅಧಿಕಾರಿ ದರ್ಶನ್ ಎಂಬುವರನ್ನು ಡಿ.ಎಫ್.ಓ. ಕ್ರಾಂತಿ ಅಮಾನತ್ತು ಮಾಡಿ ಆದೇಶೀಸಿದ್ದಾರೆ.‌

ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಬಸರವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿ ಆನಿಗನಹಳ್ಳಿ ಗ್ರಾಮದ ಮೀಸಲು ಅರಣ್ಯ ಪ್ರದೇಶದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಐದು ಬೀಟೆ ಮರಗಳನ್ನು ಕಡಿಯಲಾಗಿತ್ತು. ಸ್ಥಳೀಯರು ವಲಯ ಅರಣ್ಯಾಧಿಕಾರಿ ಹಾಗೂ ಡಿ.ಎಫ್.ಓ.ಗೆ ದೂರು ನೀಡಿದ್ದರು. ಇದೆ ವೇಳೆ ಮರ ಕಡಿದವರು ಗ್ರಾಮಸ್ಥರ ಜೊತೆ ಮಾತನಾಡಿದ ಆಡಿಯೋ ಕೂಡ ವೈರಲ್ ಆಗಿತ್ತು. ಆಡಿಯೋದಲ್ಲಿ ಮರ ಕಡಿದವರು, "ದರ್ಶನ್ ಫಾರೆಸ್ಟರ್ ಹೇಳಿದ್ದಕ್ಕೆ ಮರ ಕಡಿದೆವು," ಎಂದು ಮಾತನಾಡಿದ್ದರು.

Aldur: Tree theft: Forest officer suspended

ಸಿ.ಟಿ.ರವಿ ವಿರುದ್ದ ಸ್ಪರ್ಧಿಸಿದರೆ 1 ಕೋಟಿ ನೀಡುತ್ತೇನೆ: ಚಿಕ್ಕಗಳೂರಿನಲ್ಲಿ ಸಿದ್ದರಾಮಯ್ಯಗೆ ಆಫರ್ ನೀಡಿದ ಅಭಿಮಾನಿಸಿ.ಟಿ.ರವಿ ವಿರುದ್ದ ಸ್ಪರ್ಧಿಸಿದರೆ 1 ಕೋಟಿ ನೀಡುತ್ತೇನೆ: ಚಿಕ್ಕಗಳೂರಿನಲ್ಲಿ ಸಿದ್ದರಾಮಯ್ಯಗೆ ಆಫರ್ ನೀಡಿದ ಅಭಿಮಾನಿ

ಬೀಟೆ ಮರ ಕಳ್ಳತನ ಆರೋಪ

ಸುಮಾರು 20ರಿಂದ 25 ಮೀಟರ್ ಬೀಟೆ ಮರವನ್ನು ಕಡಿದು ಸ್ವಲ್ಪ ಮರವನ್ನು ಹಾಸನ ಜಿಲ್ಲೆ ಬೇಲೂರಿನ ಸಾಮಿಲ್‌ಗೆ ರವಾನಿಸಿದ್ದರು. ಮತ್ತೊಂದಷ್ಟು ಮರವನ್ನು ಮನೆಗೆ ಪೀಠೋಪಕರಣ ಮಾಡಲು ಕಾರ್ಪೆಂಟರ್ ಮನೆಗೆ ಕಳುಹಿಸಿದ್ದರು. ವಿಷಯ ತಿಳಿದ ಕೂಡಲೇ ಅರಣ್ಯ ಅಧಿಕಾರಿಗಳಿಗೆ ತನಿಖೆಗೆ ಮುಂದಾಗಿದ್ದು, ಅಧಿಕಾರಿಯು ಮರವನ್ನು ಸಾಗಿಸಿರುವುದು ಅಕ್ರಮವಾಗಿ ಮೇಲ್ನೋಟಕ್ಕೆ ಸಾಬೀತಾಗಿದೆ. ಜೊತೆಗೆ ಅಕ್ರಮವಾಗಿ ಮರ ಕಡಿದ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದರ್ಶನ್ ಫಾರೆಸ್ಟರ್ ಹೇಳಿದ್ದಕ್ಕೆ ಮರ ಕಡಿದು ಸಾಗಿಸಿದೆವು ಎಂದು ಒಪ್ಪಿಕೊಂಡಿದ್ದಾರೆ.

ಅರಣ್ಯ ಅಧಿಕಾರಿ ಅಮಾನತ್ತು

ಇದನ್ನು ಆಧರಿಸಿ ಹರೀಶ್, ಪ್ರದೀಪ್, ಮಂಜು ಹಾಗೂ ಬೇಲೂರಿನ ಮರದ ಸಾಮಿಲ್‌ನ ಮಾಲೀಕ ಸಿರಾಜ್ ಎನ್ನುವ ನಾಲ್ವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಅರಣ್ಯವನ್ನು ರಕ್ಷಿಸಬೇಕಾದ ಅಧಿಕಾರಿಯೇ ಮರಗಳನ್ನು ಕಡಿಸಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಫಾರೆಸ್ಟರ್ ದರ್ಶನ್ ಮೇಲೆ ಕ್ರಮ ಕೈಗೊಂಡು ಅಮಾನತ್ತು ಮಾಡಿದ್ದಾರೆ.

English summary
Tree theft in Aldur: Forest officer suspended by forest department, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X