ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೂಡಿಗೆರೆಯ ಬಿಳಗುಳದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜೂನ್ 28: ಮೂಡಿಗೆರೆಯ ಬಿಳಗುಳ ಗ್ರಾಮದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು, ಪದೇ ಪದೇ ಚಿರತೆ ಕಾಣಿಸಿಕೊಳ್ಳುತ್ತಿರುವುದರಿಂದ ಜನರು ಆತಂಕಗೊಂಡಿದ್ದಾರೆ.

ಪೋಷಕರ ಪಕ್ಕದಲ್ಲಿ ಮಲಗಿದ್ದ ಮಗುವನ್ನು ಮನೆಗೆ ನುಗ್ಗಿ ಹೊತ್ತೊಯ್ದ ಚಿರತೆಪೋಷಕರ ಪಕ್ಕದಲ್ಲಿ ಮಲಗಿದ್ದ ಮಗುವನ್ನು ಮನೆಗೆ ನುಗ್ಗಿ ಹೊತ್ತೊಯ್ದ ಚಿರತೆ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಬಿಳಗುಳ ಗ್ರಾಮದಲ್ಲಿ ಡಿಎಫ್ ಓ ಕುಮಾರ್ ಅವರ ಮನೆ ಮುಂದೆಯೇ ಚಿರತೆ ಕಾಣಿಸಿಕೊಂಡಿದೆ. ಡಿಎಫ್ ಓ ಮನೆ ಹಾಗೂ ವಿಜಯ ಬ್ಯಾಂಕ್ ಮುಂಭಾಗ ಚಿರತೆ ಓಡಾಡಿದ್ದು, ಅದರ ಹೆಜ್ಜೆ ಗುರುತುಗಳು ಪತ್ತೆ ಆಗಿವೆ.

again Leopard appeared in chikkamagaluru

ಎಚ್.ಡಿ.ಕೋಟೆ ಗ್ರಾಮಸ್ಥರಿಗೆ ತಲೆನೋವಾದ ಹುಲಿ -ಚಿರತೆ ಉಪಟಳಎಚ್.ಡಿ.ಕೋಟೆ ಗ್ರಾಮಸ್ಥರಿಗೆ ತಲೆನೋವಾದ ಹುಲಿ -ಚಿರತೆ ಉಪಟಳ

ಬೆಳಗಿನ ಜಾವ ಚಿರತೆ ಓಡಾಟ ನಡೆಸಿರುವುದಾಗಿ ತಿಳಿದುಬಂದಿದೆ. ಹತ್ತು ದಿನದ ಹಿಂದೆ ಕೂಡ ಇದೇ ಜಾಗದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಹೀಗೆ ಜನವಸತಿ ಪ್ರದೇಶದಲ್ಲೇ ಮತ್ತೆ ಮತ್ತೆ ಚಿರತೆ ಓಡಾಡುತ್ತಿರುವುದರಿಂದ ಮೂಡಿಗೆರೆ ಪಟ್ಟಣ, ಬಿಳಗುಳ ಸುತ್ತಮುತ್ತಲಿನ ಜನರಲ್ಲಿ ಆತಂಕ ಹೆಚ್ಚಾಗಿದೆ. ಕೂಡಲೇ ಚಿರತೆ ಸೆರೆ ಹಿಡಿಯಬೇಕು ಎಂದು ಸ್ಥಳೀಯರು ಒತ್ತಾಯ ಹೇರಿದ್ದಾರೆ.

English summary
Again leopard appeared in bilagula at chikkamagaluru. Leopard foot prints seen here, Before 10 days also leopard appeared in same place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X