ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾರ್ಮಾಡಿಯಲ್ಲಿ ಅದೇ ರಾಗ ಅದೇ ಹಾಡು: ಕಣ್ಣು ಹಾಯಿಸಿದಷ್ಟು ದೂರ ಟ್ರಾಫಿಕ್ ಜಾಮ್

|
Google Oneindia Kannada News

ಚಿಕ್ಕಮಗಳೂರು, ಸೆ 9: ಜಿಲ್ಲೆಯ ಮೂಡಿಗೆರೆ ತಾಲೂಕು ವ್ಯಾಪ್ತಿಗೆ ಬರುವ ಚಾರ್ಮಾಡಿ ಘಾಟ್ ನಲ್ಲಿ ಭಾರೀ ಟ್ರಾಫಿಕ್ ಜಾಮ್ ಆಗಿ ಪ್ರಯಾಣಿಕ ಹೈರಾಣನಾಗಿದ್ದಾನೆ. ಭಾನುವಾರ (ಸೆ 9) ಬೆಳಗ್ಗೆಯಿಂದ ಜಾಮ್ ಆಗಿರುವ ಘಾಟ್ ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮತ್ತು ಲಾರಿ ಕೆಟ್ಟು ನಿಂತ ಪರಿಣಾಮ ಬೆಳಗ್ಗೆ 4 ಗಂಟಿಯಿಂದ ಟ್ರಾಫಿಕ್ ಜಾಮ್ ಉಂಟಾಗಿದ್ದು, ಚಾರ್ಮಾಡಿಯ ಮೂರನೇ ತಿರುವಿನಿಂದ ವಾಹನಗಳು ಸುಮಾರು ಹತ್ತು ಕಿ.ಮೀ.ನಷ್ಟು ದೂರ ಸಾಲುಗಟ್ಟಿ ನಿಂತಿವೆ.

ಡಿಸಿಗಳ ನಡುವೆ ಕಮ್ಯೂನಿಕೇಶನ್ ಗ್ಯಾಪ್: ಶಿರಾಡಿ ಘಾಟ್ ಪ್ರಯಾಣಿಕ ಸುಸ್ತೋಸುಸ್ತುಡಿಸಿಗಳ ನಡುವೆ ಕಮ್ಯೂನಿಕೇಶನ್ ಗ್ಯಾಪ್: ಶಿರಾಡಿ ಘಾಟ್ ಪ್ರಯಾಣಿಕ ಸುಸ್ತೋಸುಸ್ತು

ಶಿರಾಡಿ ಘಾಟ್ ಬಂದ್ ಆದಾಗಿನಿಂದ ತೀವ್ರ ವಾಹನ ದಟ್ಟಣೆಗೊಳಗಾಗಿರುವ ಚಾರ್ಮಾಡ್ ಘಾಟ್, ರಾಜಧಾನಿಯಿಂದ ಕರಾವಳಿ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ಕೊಂಡಿಯಾಗಿದೆ. ಕೆಲವು ದಿನಗಳ ಹಿಂದೆ, ಲಘು ವಾಹನ ಸಂಚಾರಕ್ಕೆ ಶಿರಾಡಿ ಘಾಟ್ ನಲ್ಲಿ ಅನುವು ಮಾಡಿಕೊಡಲಾಗಿತ್ತು.

Again heavy traffic jam in Charmadi, nearly ten kilometers vehicle queued in both the sides

ಭಾರೀ ಮಳೆಯಿಂದಾಗಿ ಚಾರ್ಮಾಡಿ ಘಾಟ್ ನ ಎರಡನೇ ಹಾಗೂ ಮೂರನೇ ತಿರುವಿನಲ್ಲಿ ಗುಡ್ಡ ಕುಸಿದ ಪರಿಣಾಮ ಕೆಲವು ದಿನಗಳ ಕಾಲ ಘಾಟಿಯನ್ನು ಬಂದ್ ಮಾಡಲಾಗಿತ್ತು. ಇದಾದ ನಂತರ ಭಾರೀ ವಾಹನಗಳು ನಿಷೇಧದ ನಡುವೆಯೂ ಸಂಚರಿಸುತ್ತಿವೆ.

ಈಗ ಶಿರಾಡಿ ಘಾಟ್ ಪರಿಸ್ಥಿತಿ ಹೇಗಿದೆ? ಇಲ್ಲಿದೆ ಸಂಪೂರ್ಣ ವಿವರಈಗ ಶಿರಾಡಿ ಘಾಟ್ ಪರಿಸ್ಥಿತಿ ಹೇಗಿದೆ? ಇಲ್ಲಿದೆ ಸಂಪೂರ್ಣ ವಿವರ

ಆಗಸ್ಟ್ ತಿಂಗಳ ಅಂತ್ಯದಲ್ಲಿ ಚಾರ್ಮಾಡಿ ಘಾಟ್‌ ನಲ್ಲಿ ಲಾರಿಯೊಂದು ಕೆಟ್ಟು ಹೋಗಿ, ಘಾಟ್ ಆರಂಭದಿಂದ ಅಣ್ಣಪ್ಪಸ್ವಾಮಿ ದೇವಾಲಯದವರೆಗೆ ಅಂದರೆ ಸುಮಾರು ಹತ್ತು ಕಿ.ಮೀವರೆಗೆ ಟ್ರಾಫಿಕ್‌ ಜಾಮ್‌ ಉಂಟಾಗಿದ್ದನ್ನು ಸ್ಮರಿಸಿಕೊಳ್ಳಬಹುದಾಗಿದೆ.

English summary
Again heavy traffic jam in Charmadi ghat (Mudigere Tq, Chikkamagaluru district). Nearly ten kilometers vehicle queued in both the sides.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X