ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಮಗಳೂರು: 22 ವರ್ಷದ ಬಳಿಕ ತಾಯಿ ಮಡಿಲು ಸೇರಿದ ಮಗಳು; ಅಮ್ಮನನ್ನು ತಬ್ಬಿ ಕಣ್ಣೀರು

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜನವರಿ 4: ಆಕೆ ಕಳೆದ 9 ವರ್ಷಗಳ ಹಿಂದೆ ತನ್ನ ತಾಯಿಯನ್ನು ತೊರೆದು ಕಾಣೆಯಾಗಿದ್ದಳು, ತಾಯಿಯ ಮಡಿಲು ಸೇರಬೇಕೆಂಬ ಹಂಬಲ ಅವಳಲ್ಲಿಯೂ ಇತ್ತು, ಮಗಳನ್ನು ಕಾಣಬೇಕು ಎಂಬ ಆತುರ ಆ ಹೆತ್ತ ತಾಯಿಗೂ ಇತ್ತು.

ಆದರೆ ಅದಕ್ಕೆ ಕಾಲ ಕೂಡಿ ಬಂದಿದ್ದು ಬರೋಬ್ಬರಿ 22 ವರ್ಷದ ಬಳಿಕ. ಮಂಗಳವಾರ ಆ ದಿನ ಕೂಡಿ ಬಂದಿದ್ದು, ಈ ಮನಕಲಕುವ ಘಟನೆಗೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುದ್ರೆಮನೆ ಗ್ರಾಮ ಸಾಕ್ಷಿಯಾಗಿತ್ತು.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುದ್ರೆಮನೆ ಗ್ರಾಮದ ಅಂಜಲಿ 9ನೇ ವಯಸ್ಸಿನಲ್ಲಿ ನಾಪತ್ತೆಯಾಗಿದ್ದರು. ಆದರೆ ತಂದೆ- ತಾಯಿ ಮಗಳು ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರಲಿಲ್ಲ.

A Mother and Daughter Join After 22 Years in Mudigere

ಅಂಜಲಿ ಕೇರಳದಲ್ಲಿ ಮನೆ ಕೆಲಸ ಮಾಡಿಕೊಂಡು ಅಲ್ಲಿಯೇ ಜೀವನ ನಿರ್ವಹಣೆ ಮಾಡುತ್ತಿದ್ದರು. ಬಳಿಕ ಕೇರಳದ ನೆಲ್ಲಮಣಿಯ ಸಾಜಿ ಎಂಬುವರೊಂದಿಗೆ ವಿವಾಹವಾಗಿದ್ದರು. ಕಳೆದ 3 ವರ್ಷದಿಂದ ಮಗಳು ಅಂಜಲಿ ಎಲ್ಲಾ ಕಡೆ ತಾಯಿಗಾಗಿ ಹುಡುಕಾಡಿದ್ದಾರೆ. ಕೊನೆಗೂ ಮೂಡಿಗೆರೆಯ ಮುದ್ರೆಮನೆಯಲ್ಲಿ ತಾಯಿ ಪತ್ತೆಯಾಗಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಅಂಜಲಿ ತಂದೆ ಕಾಳಿಮುತ್ತು ಮೃತಪಟ್ಟಿದ್ದಾರೆ ಎಂದು ಆಕೆಯ ತಾಯಿ ಮಾಹಿತಿ ನೀಡಿದ್ದಾರೆ. ತಾಯಿ ಕಣ್ಣಿಗೆ ಬೀಳುತ್ತಿದ್ದಂತೆ ಅಂಜಲಿ ಓಡಿ ಹೋಗಿ ಅಪ್ಪಿಕೊಂಡಿದ್ದಾರೆ. ಹೆತ್ತವ್ವನನ್ನು ಕಂಡ ಖುಷಿಯಲ್ಲಿ ಮಗಳು ಮತ್ತು ಕಾಣೆಯಾಗಿದ್ದ ಮಗಳನ್ನು ಕಂಡ ತಾಯಿ ಒಬ್ಬರನ್ನೊಬ್ಬರು ಗಟ್ಟಿಯಾಗಿ ತಬ್ಬಿಕೊಂಡು ಕಣ್ಣೀರಿಟ್ಟಿದ್ದಾರೆ.

ಆನೆ ಸಾಕಾಲು ಬಂದವರ ಜೊತೆ ಕೇರಳ ಸೇರಿದ್ದ ಬಾಲಕಿ
ಮೂಲತಃ ತಮಿಳುನಾಡು ಮೂಲದವರಾದ ಅಂಜಲಿ ಕುಟುಂಬ ಕಳೆದ 40 ವರ್ಷದ ಹಿಂದೆ ಮೂಡಿಗೆರೆಗೆ ಬಂದಿದ್ದರು. ಮೂಡಿಗೆರೆ ತಾಲೂಕಿನ ಮುತ್ತಿಗೆಪುರದಲ್ಲಿ ವಾಸವಾಗಿದ್ದು, ನಂತರ ಹೊಟ್ಟೆಪಾಡಿಗಾಗಿ ಕುಟುಂಬದ ಅಲೆದಾಟ ಸಾಮಾನ್ಯವಾಗಿತ್ತು. ಅಂಜಲಿ ಅವರ ತಾಯಿಗೆ 11 ಮಕ್ಕಳಲ್ಲಿ ಈಕೆ ಒಂಭತ್ತನೇ ಮಗಳು.

A Mother and Daughter Join After 22 Years in Mudigere

ಆಗ ಮೂಡಿಗೆರೆಯಲ್ಲಿ ಟಿಂಬರ್ ವ್ಯಾಪಾರ ಉತ್ತುಂಗದಲ್ಲಿದ್ದ ಕಾಲ, ಅಲ್ಲಿ ಆನೆಗಳಿಗೆ ಮುಖ್ಯ ಕೆಲಸ. ಆನೆಗಳನ್ನು ನೋಡಿಕೊಳ್ಳಲು ಕೇರಳದಿಂದ ಬಂದಿದ್ದ ಅಪರಿಚಿತ ವ್ಯಕ್ತಿಯ ಜೊತೆಗೆ ಈ ಬಾಲಕಿ ಹೋಗಿದ್ದಳು. ಬಳಿಕ ಅವರಿವರ ಮನೆಯಲ್ಲಿ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಅಂಜಲಿ ಅಲ್ಲಿಯೇ ಒಬ್ಬರ ಜೊತೆಗೆ ಮದುವೆಯಾಗಿದ್ದು, ಮೂರು ಮಕ್ಕಳ ತಾಯಿಯಾಗಿದ್ದಳು. ಈಗ ಹೆತ್ತಮ್ಮನನ್ನು ಸತತ ಪ್ರಯತ್ನದಿಂದ ಹುಡುಕಿ ಮಡಿಲು ಸೇರಿದ್ದಾಳೆ.

ಅಂಜಲಿ ಪತಿಯ ಪ್ರಯತ್ನದಿಂದ ಕನಸು ನನಸು
ಅಂಜಲಿ ಮದುವೆಯಾದ ಬಳಿಕ ಕಳೆದ ನಾಲ್ಕು ವರ್ಷದಿಂದ ತನ್ನ ತಾಯಿಯನ್ನು ನೋಡುವ ಹಂಬಲವನ್ನು ಬೆಂಬಿಡದೇ ತನ್ನ ಪತ್ನಿಯ ಜೊತೆಗೆ ಹೇಳಿಕೊಂಡಿದ್ದಾಳೆ. ಪತ್ನಿಯ ಆಸೆ ತೀರಿಸಲು ಮುಂದಾದ ಪತಿ ಕೇರಳದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಈ ಬಯಕೆಯನ್ನು ಹಂಚಿಕೊಂಡಿದ್ದಾರೆ.

ಮಂಗಳೂರಿನ ಮುಸ್ತಾಫ್ ಎಂಬುವರಿಗೆ ಕೇರಳದಲ್ಲಿದ್ದ ಅವರ ಸ್ನೇಹಿತರು ಈ ಸಂದೇಶವನ್ನು ಕಳುಹಿಸಿದ್ದಾರೆ. ಬಳಿಕ ಇದು ಮೂಡಿಗೆರೆಯ ಫಿಶ್ ಮೋಣು ಅವರ ಬಳಿ ವಿಚಾರಿಸಿದಾಗ ಅವರ ಸತತ ಪ್ರಯತ್ನದಿಂದ ಇಂದು ತಾಯಿ- ಮಗಳು ಒಂದಾಗಿದ್ದಾರೆ.

Recommended Video

ತಜ್ಞರ ಜೊತೆ ಮಹತ್ವದ ಸಭೆ ಮಾಡಲಿರುವ ಮುಖ್ಯ ಮಂತ್ರಿ! | Oneindia Kannada

English summary
The mother and daughter have joined after 22-years in the Mudremane village of Mudigere Taluk in Chikkamagaluru district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X