ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಮಗಳೂರು; ಶಾಲೆಯಲ್ಲಿ 69 ಮಂದಿಗೆ ಕೋವಿಡ್ ಸೋಂಕು

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಡಿಸೆಂಬರ್ 05; ಜಿಲ್ಲೆಯಲ್ಲಿ ಅನೇಕ ದಿನಗಳಿಂದ ಕ್ಷೀಣಿಸಿದ್ದ ಕೋವಿಡ್ ಸೋಂಕು ಮತ್ತೇ ಸ್ಫೋಟಗೊಂಡಿದ್ದು, ಒಂದೇ ದಿನ ನರಸಿಂಹರಾಜಪುರ ತಾಲ್ಲೂಕು ಬಾಳೆಹೊನ್ನೂರು ನವೋದಯ ಶಾಲೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದು ಜನತೆಯಲ್ಲಿ ಆತಂಕ ಸೃಷ್ಟಿಸಿದೆ.

ಬಾಳೆಹೊನ್ನೂರು ಸೀಗೋಡಿನಲ್ಲಿರುವ ಜವಾಹರ್ ನವೋದಯ ವಿದ್ಯಾಲಯದ 59 ವಿದ್ಯಾರ್ಥಿಗಳು ಮತ್ತು 4 ಮಂದಿ ಶಿಕ್ಷಕರು ಮತ್ತು 6 ಮಂದಿ ಸಿಬ್ಬಂದಿ ಸೇರಿದಂತೆ 69 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಸೋಂಕಿತ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳನ್ನು ನವೋದರ ವಿದ್ಯಾಲಯದಲ್ಲಿ ಐಸೋಲೇಶನ್ ಮಾಡಲಾಗಿದೆ.

15 ವರ್ಷದ ಮಕ್ಕಳಿಗೆ ತಪ್ಪಾಗಿ ಕೋವಿಡ್ 19 ಲಸಿಕೆ, ಆಸ್ಪತ್ರೆಗೆ ದಾಖಲು15 ವರ್ಷದ ಮಕ್ಕಳಿಗೆ ತಪ್ಪಾಗಿ ಕೋವಿಡ್ 19 ಲಸಿಕೆ, ಆಸ್ಪತ್ರೆಗೆ ದಾಖಲು

ಶಿಕ್ಷಕರೊಬ್ಬರಲ್ಲಿ ಮೊದಲು ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು, ವಿದ್ಯಾರ್ಥಿಗಳಲ್ಲಿ ಸೋಂಕಿನ ಯಾವುದೇ ಲಕ್ಷಣ ಕಂಡು ಬಂದಿರಲಿಲ್ಲ, ಶಿಕ್ಷಕರಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 457 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳ ಸ್ವ್ಯಾಬ್ ಸಂಗ್ರಹಿಸಿ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳಿಸಿತ್ತು.

60 Tested Positive For Covid 19 At Chikkamagaluru School

ಕೊರೊನಾ ಹಾಟ್‌ಸ್ಪಾಟ್ ಆದ ರಾಜ್ಯದ ಶಾಲಾ- ಕಾಲೇಜುಗಳು; ಮೂರನೇ ಅಲೆ ಆರಂಭವೇ?ಕೊರೊನಾ ಹಾಟ್‌ಸ್ಪಾಟ್ ಆದ ರಾಜ್ಯದ ಶಾಲಾ- ಕಾಲೇಜುಗಳು; ಮೂರನೇ ಅಲೆ ಆರಂಭವೇ?

ಭಾನುವಾರ ಪ್ರಯೋಗಾಲಯದ ವರದಿ ಬಂದಿದ್ದು 457 ಮಂದಿಯಲ್ಲಿ 59 ವಿದ್ಯಾರ್ಥಿ ಗಳು, 4ಜನ ಶಿಕ್ಷಕರು 6 ಮಂದಿ ಸಿಬ್ಬಂದಿಗಳಲ್ಲಿ ಸೋಂಕು ಪತ್ತೆಯಾಗಿದೆ. ಭಾರೀ ಪ್ರಮಾಣದ ಸೋಂಕಿತರು ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯರು, ಸಿಬ್ಬಂದಿಗಳು ಶಾಲೆಗೆ ಭೇಟಿ ನೀಡಿ ಸೋಂಕಿತರನ್ನು ಶಾಲೆಯಲ್ಲಿಯೇ ಐಸೋಲೇಶನ್‍ಗೆ ಒಳಪಡಿಸಿದ್ದಾರೆ. ಜವಾಹರ್ ನವೋದಯ ವಿದ್ಯಾಲಯವನ್ನು ಸೀಲ್‍ಡೌನ್ ಮಾಡಿದ್ದಾರೆ.

ಜೀನೋಮ್ ಸೀಕ್ವೆನ್ಸಿಂಗ್: ಕೊರೊನಾ ಪಾಸಿಟಿವ್ ಬಂದಿರುವ ಎಲ್ಲರ ಮಾದರಿ ಕಳುಹಿಸಿ ಎಂದ ಕೇಂದ್ರಜೀನೋಮ್ ಸೀಕ್ವೆನ್ಸಿಂಗ್: ಕೊರೊನಾ ಪಾಸಿಟಿವ್ ಬಂದಿರುವ ಎಲ್ಲರ ಮಾದರಿ ಕಳುಹಿಸಿ ಎಂದ ಕೇಂದ್ರ

ಕಳೆದ ಕೆಲವು ತಿಂಗಳಿಂದ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಇಳಿಕೆಯಾಗಿತ್ತು. ಸಾರ್ವಜನಿಕರು ನಿರ್ಲಕ್ಷ್ಯವಹಿಸಿದ್ದರು. ಕೋವಿಡ್ ಸೋಂಕಿನ ಬಗ್ಗೆ ಅಸಡ್ಡೆ ವಹಿಸಿದ್ದು ಒಂದೇ ಭಾರೀ ಈ ಮಟ್ಟದಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಜನತೆ ಆತಂಕಕ್ಕೊಳಗಾಗಿದ್ದಾರೆ.

Recommended Video

Omicron Alert : ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾದ ಸೌತ್ ಆಫ್ರಿಕಾದ‌ 10 ಮಂದಿ | Oneindia Kannada

ಆರೋಗ್ಯ ಇಲಾಖೆ ಹೇಳಿಕೆ; ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣಾಧಿಕಾರಿ ಡಾ. ಉಮೇಶ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. "ಸೀಗೋಡು ಜವಾಹರ್ ನವೋದಯ ವಿದ್ಯಾಲಯದ 69 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಶಾಲೆಯ 457 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, 59 ವಿದ್ಯಾರ್ಥಿಗಳು ಮತ್ತು 10 ಸಿಬ್ಬಂದಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಶಾಲೆಯಲ್ಲಿ ಐಸೋಲೇಶನ್‍ಗೆ ಒಳಪಡಿಸಲಾಗಿದೆ. ವೈದ್ಯರು, ನರ್ಸ್ ಸೇರಿದಂತೆ 15 ಮಂದಿ ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ" ಎಂದು ಹೇಳಿದ್ದಾರೆ.

English summary
69 including students testes positive for Covid 19 at Jawahar Navodaya Vidyalaya, Balehonnur Chikkamagaluru district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X