ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಮಗಳೂರು: ಹರಿಹರಪುರ ಮಠದಲ್ಲಿ 27 ಅಡಿ ಎತ್ತರದ ಆಂಜನೇಯ ಮೂರ್ತಿ ಅನಾವರಣ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಮೇ 2: ಕಾಫಿನಾಡಿನಲ್ಲಿ ನೆಲೆ ನಿಂತಿರುವ 27 ಅಡಿ ಎತ್ತರಕ್ಕೆ ಕೈಮುಗಿದು, ಮಂಡಿಯೂರಿ ಕುಳಿತಿರುವ ಆಂಜನೇಯನ ನೋಡುವುದುಕ್ಕೆ ಎರಡು ಕಣ್ಣು ಸಾಲದು. ಈ ಆಂಜನೇಯ ನಿಂತಿರುವುದು ಐದು ಲಕ್ಷ ಪುಸ್ತಕಗಳ ಮೇಲೆ ಅನ್ನೋದು ಇನ್ನೂ ಗಮನಾರ್ಹವಾಗಿದೆ.

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರ ಮಠದ ಆವರಣದಲ್ಲಿ ವಿರಾಜಮಾನವಾಗಿ ನಿಂತಿದ್ದಾನೆ. ಎದ್ದು ಬರುವುದಕ್ಕೆ ಸಿದ್ಧನಾದಂತೆ ನಿಂತಿರುವ 27 ಅಡಿಯ ವಾಯುಪುತ್ರನನ್ನು ನೋಡುವುದೇ ಆನಂದ. ಈ ಆಂಜನೇಯ ಪಾದದಡಿ ಜೈ.. ಜೈ.. ಲಕ್ಷ್ಮಿನರಸಿಂಹ, ವಜ್ರ ನರಸಿಂಹ ಎಂದು ಬರೆದಿರುವ ನರಸಿಂಹನ ಮಂತ್ರದ ಐದು ಲಕ್ಷದ ಪುಸ್ತಕಗಳಿವೆ.

ಬಿ. ಎಸ್. ರಾಜು ಅಧಿಕಾರ ಸ್ವೀಕಾರ; ಹುಟ್ಟೂರು ಅಜ್ಜಂಪುರದಲ್ಲಿ ಸಂಭ್ರಮಬಿ. ಎಸ್. ರಾಜು ಅಧಿಕಾರ ಸ್ವೀಕಾರ; ಹುಟ್ಟೂರು ಅಜ್ಜಂಪುರದಲ್ಲಿ ಸಂಭ್ರಮ

 ದಕ್ಞಯಜ್ಞ ನಡೆಸಿ ಇಲ್ಲಿ ಲಕ್ಷ್ಮಿ ನರಸಿಂಹರ ದರ್ಶನ

ದಕ್ಞಯಜ್ಞ ನಡೆಸಿ ಇಲ್ಲಿ ಲಕ್ಷ್ಮಿ ನರಸಿಂಹರ ದರ್ಶನ

ಅಗಸ್ತ್ಯ ಮಹರ್ಷಿಗಳು ದಕ್ಞಯಜ್ಞ ನಡೆಸಿ ಇಲ್ಲಿ ಲಕ್ಷ್ಮಿ ನರಸಿಂಹರ ದರ್ಶನ ಪಡೆದಿದ್ದರು. ಲಕ್ಷ್ಮಿ ನರಸಿಂಹ ಸಾಲಿಗ್ರಾಮ ಇಂದಿಗೂ ಅದೇ ಪರಂಪರೆಯಲ್ಲಿ ಪೂಜೆ ಆಗುತ್ತಿದೆ. ಶಂಕರ ಭಗವತ್ಪಾದರು ಇಲ್ಲಿ ಶ್ರೀಚಕ್ರ ಯಂತ್ರೋದ್ಧಾರ ಮಾಡಿ ಶಾರದಾ ಪರಮೇಶ್ವರಿಯನ್ನು ಪ್ರತಿಷ್ಠಾಪನೆ ಮಾಡುತ್ತಾರೆ. ಈ ಸ್ಥಳ ಐತಿಹಾಸಿಕ ಹಿನ್ನೆಲೆ ಒಳಗೊಂಡಿದೆ. ಇಂತಹ ಇತಿಹಾಸ ಪ್ರಸಿದ್ಧ ಸ್ಥಳದಲ್ಲಿ 27 ಅಡಿಯ ವಾಯುಪುತ್ರ ಐದು ಲಕ್ಷ ಪುಸ್ತಕಗಳ ಮೇಲೆ ನೆಲೆ ನಿಂತಿದ್ದಾನೆ.

ಮಠದಲ್ಲಿ ನಡೆದ ಕುಂಭಾಭಿಷೇಕ ನಿಮಿತ್ತ ಭಕ್ತರು ಬರೆದ ಕಳುಹಿಸಿದ ಐದು ಲಕ್ಷ ಪುಸ್ತಗಳನ್ನು ಈ ಮೂರ್ತಿಯ ಅಡಿ ಪ್ರತಿಷ್ಠಾಪಿಸಲಾಗಿದೆ. ಪಂಚದರ್ಬೆಗಳ ಮೇಲೆ ಅರಿಶಿನ, ಕುಂಕುಮ, ಗಂಧ, ವಿಭೂತಿ, ಬಿಲ್ವಪತ್ರೆ ಹಾಗೂ ತುಳಸಿ ಹಾಕಿ ಲೇಯರ್ ಮಾಡಿ ಐದು ಲಕ್ಷ ಪುಸ್ತಕಗಳನ್ನು ಜೋಡಿಸಲಾಗಿದೆ.

ಪಿಎಂ ಅನುಪಸ್ಥಿತಿ, ಪಂಚಮುಖಿ ಆಂಜನೇಯ ಮೂರ್ತಿ ಉದ್ಘಾಟಿಸಿದ ಸಿಎಂಪಿಎಂ ಅನುಪಸ್ಥಿತಿ, ಪಂಚಮುಖಿ ಆಂಜನೇಯ ಮೂರ್ತಿ ಉದ್ಘಾಟಿಸಿದ ಸಿಎಂ

 ಇಂಗ್ಲೀಷ್ ಬಿಟ್ಟು ಎಲ್ಲಾ ಭಾಷೆಯ ಪುಸ್ತಕ

ಇಂಗ್ಲೀಷ್ ಬಿಟ್ಟು ಎಲ್ಲಾ ಭಾಷೆಯ ಪುಸ್ತಕ

ಹರಿಹರಪುಠ ಮಠದ ಸಚ್ಚಿದಾನಂದ ಶ್ರೀಗಳೇ ಐದು ಲಕ್ಷ ಪುಸ್ತಕಗಳನ್ನು ಜೋಡಿಸಿ ಇಟ್ಟಿದ್ದಾರೆ. ಕುಂಭಾಭಿಷೇಕದ ನಿಮಿತ್ತ ಮಠದಿಂದಲೇ ಇಂಗ್ಲೀಷ್ ಬಿಟ್ಟು ಎಲ್ಲಾ ಭಾಷೆಯಲ್ಲೂ ಪುಸ್ತಕಗಳನ್ನು ನೀಡಲಾಗಿತ್ತು. ಕನ್ನಡ, ಸಂಸ್ಕೃತ, ಹಿಂದಿ, ತಮಿಳು, ತೆಲುಗು, ಮರಾಠಿ, ಬೆಂಗಾಳಿ ಸೇರಿದಂತೆ ಎಲ್ಲಾ ಭಾಷೆಯಲ್ಲೂ ಪುಸ್ತಕಗಳನ್ನು ನೀಡಲಾಗಿತ್ತು.

ದೇಶದ ಎಲ್ಲಾ ರಾಜ್ಯದ ಭಕ್ತರು ಜೈ.. ಜೈ.. ಲಕ್ಷ್ಮಿ ನರಸಿಂಹ, ವಜ್ರ ನರಸಿಂಹ ಎಂದು ಬರೆದು ಕಳುಹಿಸಿದ್ದರು. ದೇಶವಷ್ಟೇ ಅಲ್ಲದೆ ಅಮೆರಿಕ, ರಷ್ಯಾ, ಇಂಗ್ಲೆಂಡ್, ಮಲೇಷ್ಯಾ, ದುಬೈ ಹಾಗೂ ಸೌದಿ ಅರೇಬಿಯಾದಿಂದಲೂ ಭಕ್ತರು ಪುಸ್ತಕವನ್ನು ಬರೆದು ಕಳುಹಿಸಿದ್ದಾರೆ.

 ಒಂದೊಂದು ದೇವಾಲಯಗಳದ್ದು ಒಂದೊಂದು ಇತಿಹಾಸ

ಒಂದೊಂದು ದೇವಾಲಯಗಳದ್ದು ಒಂದೊಂದು ಇತಿಹಾಸ

ಒಟ್ಟಾರೆ, ಈ ಮಣ್ಣಿನಲ್ಲಿ ಅಸಂಖ್ಯಾತ ದೇವಾಲಯಗಳಿವೆ. ಒಂದೊಂದು ದೇವಾಲಯಗಳದ್ದು ಒಂದೊಂದು ಇತಿಹಾಸ. ಒಂದೊಂದು ದೇವರದ್ದು ಒಂದೊಂದು ರೋಚಕತೆ. ಅಂತಹ ವಿಭಿನ್ನ ಕಥೆಗೆ ಈ ಆಂಜನೇಯನೂ ಸೇರಿಕೊಳ್ಳುತ್ತಾನೆ. ಹರಿಹರಪುರ ಮಠ ದೇವಸ್ಥಾನವಾದರೂ ಈ ದೇವಾಲಯದ ಆವರಣದಲ್ಲಿರುವ ಆಂಜನೇಯ ಪ್ರವಾಸಿ ಮೂರ್ತಿಯಾಗಿದ್ದಾನೆ. ಇಲ್ಲಿಗೆ ಬಂದ ಭಕ್ತರು ದೇವರ ಆಶೀರ್ವಾದ ಪಡೆದು ಈ ಪ್ರವಾಸಿ ಆಕರ್ಷಕ ಮೂರ್ತಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

ಪ್ರವಾಸಿ ತಾಣವಾದ ಹರಿಹರಪುರ ಮಠ

ಪ್ರವಾಸಿ ತಾಣವಾದ ಹರಿಹರಪುರ ಮಠ

ಕುಂಬಾಭೀಷೇಕ ನಡೆದ ನಂತರ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಹರಿಹರಪುರ ಮಠ ಪ್ರವಾಸಿ ತಾಣ ಮಾರ್ಪಟ್ಟಿದೆ. 120 ಕೋಟಿ ರೂ. ವೆಚ್ಚ ಜೀರ್ಣೋದ್ಧಾರ ಮಾಡಲಾಗಿದೆ. ಲಕ್ಷ್ಮಿ ನರಸಿಂಹ, ಶಾರದೆ, ಶಂಕರಚಾರ್ಯರು ಒಂದೇ ದೇವಾಯಲದಲ್ಲಿ ನೆಲೆ ನಿಂತಿದ್ದಾರೆ. ಕಲ್ಲಿನಿಂದ ಕೆತ್ತಿರುವ ದೇವಾಲಯ ನೋಡಲು ಆಕರ್ಷಣೆಯಾಗಿದೆ. ಹೀಗಾಗಿ ಪ್ರವಾಸಿರಗರನ್ನು ಹರಿಹರಪುರ ಮಠ ತನ್ನತ್ತ ಸೆಳೆಯುತ್ತಿದೆ.

Recommended Video

Mumbai Indians ಅವರ ಭವಿಷ್ಯ ಏನಾಗಲಿದೆ | Oneindia Kannada

English summary
The 27 feet tall Anjaneya Statue has been unveiled at the Hariharpur Math in Koppa Taluk, Chikkamagaluru district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X