ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೃಂಗೇರಿ; ಸಾಮೂಹಿಕ ಅತ್ಯಾಚಾರ, 17 ಜನರ ವಿರುದ್ಧ ಎಫ್‌ಐಆರ್

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜನವರಿ 31; 15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಶೃಂಗೇರಿಯಲ್ಲಿ ನಡೆದಿದೆ. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, 17 ಜನರು ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ.

ಅತ್ಯಾಚಾರಕ್ಕೆ ಬಾಲಕಿ ಚಿಕ್ಕಮ್ಮ ಗೀತಾ ಸಹ ಸಹಕಾರ ನೀಡಿದ್ದಾರೆ ಎಂಬ ಆರೋಪವಿದ್ದು, ಅವರ ಮೇಲೆ ಸಹ ಎಫ್‌ಐಆರ್ ದಾಖಲಾಗಿದೆ. ಮಕ್ಕಳ ಕಲ್ಯಾಣ ಸಮಿತಿಯ ಸುಬ್ರಮಣ್ಯ ಎಂಬುವವರು ಈ ಕುರಿತು ದೂರು ನೀಡಿದ್ದರು. ಘಟನೆ ಬಗ್ಗೆ ಪೊಲೀಸರು ಅಧಿಕೃತ ಹೇಳಿಕೆ ನೀಡಿಲ್ಲ.

ಅತ್ಯಾಚಾರ; ಅಪರಾಧಿಗೆ 15 ವರ್ಷ ಶಿಕ್ಷೆ, 25 ಸಾವಿರ ದಂಡ ಅತ್ಯಾಚಾರ; ಅಪರಾಧಿಗೆ 15 ವರ್ಷ ಶಿಕ್ಷೆ, 25 ಸಾವಿರ ದಂಡ

ಹಾವೇರಿ ಜಿಲ್ಲೆಯ ಶಿಗ್ಗಾವಿ ಮೂಲದ ಬಾಲಕಿ ತಾಯಿ ನಿಧನದ ಬಳಿಕ ಚಿಕ್ಕಮ್ಮ ಗೀತಾ ಅವರ ಜೊತೆ ಇದ್ದರು. 2020ರ ಸೆಪ್ಟೆಂಬರ್‌ನಿಂದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.

 ಸಚಿವ ಧನಂಜಯ್ ಮುಂಡೆ ವಿರುದ್ಧ ಅತ್ಯಾಚಾರ ದೂರು ಹಿಂಪಡೆದ ಮಹಿಳೆ ಸಚಿವ ಧನಂಜಯ್ ಮುಂಡೆ ವಿರುದ್ಧ ಅತ್ಯಾಚಾರ ದೂರು ಹಿಂಪಡೆದ ಮಹಿಳೆ

15 Year Old Girl Gang Raped In Sringeri

ಬಾಲಕಿ ಮನೆಯಲ್ಲಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದು, ಅದನ್ನು ವಿಡಿಯೋ ಮಾಡಿಕೊಂಡಿದ್ದ. ಬಳಿಕ ವಿಡಿಯೋ ತೋರಿಸಿ ಆಕೆಗೆ ಬ್ಲಾಕ್ ಮೇಲ್ ಮಾಡಿದ್ದು, ಸ್ನೇಹಿತರೂ ಸಹ ಆಕೆಯ ಮೇಲೆ ಅತ್ಯಾಚಾರ ನಡೆಸಲು ವ್ಯಕ್ತಿ ಪ್ರೇರೆಪಣೆ ನೀಡಿದ್ದ.

ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಇನ್‌ಸ್ಟಾಗ್ರಾಮ್ ಗೆಳೆಯರೇ ಅಂದರ್ ! ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಇನ್‌ಸ್ಟಾಗ್ರಾಮ್ ಗೆಳೆಯರೇ ಅಂದರ್ !

ಬಾಲಕಿಯನ್ನು ರಕ್ಷಣೆ ಮಾಡಿ ಸಾಂತ್ವಾನ ಕೇಂದ್ರಕ್ಕೆ ಕಳಿಸಲಾಗಿದೆ. ಪ್ರಕರಣದಲ್ಲಿ ಹಲವು ರೀತಿಯ ಗೊಂದಲಗಳಿದ್ದು, ತನಿಖೆ ಬಳಿಕ ಎಲ್ಲವೂ ತಿಳಿಯಲಿದೆ. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದ್ದು, ಪೊಲೀಸರು 17 ಜನರ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದಾರೆ.

Recommended Video

Union Budget : ನಮ್ಮ ರಾಜ್ಯದಲ್ಲಿ ಸಾಕಷ್ಟು ಬದಲಾವಣೆ ಆಗತ್ತೆ | R Ashok | Oneindia Kannada

ಅತ್ಯಾಚಾರ ನಡೆಸಿದ 15 ಜನರ ಹೆಸರು ಬಾಲಕಿಗೆ ತಿಳಿದಿದೆ. ಬಾಲಕಿಯ ಚಿಕ್ಕಮ್ಮ ಸಹ ಇದಕ್ಕೆ ಸಹಕಾರ ನೀಡಿರುವ ಆರೋಪ ಕೇಳಿ ಬಂದಿದೆ. ಬಾಲಕಿಯನ್ನು ಚಿಕ್ಕಮಗಳೂರಿನ ಸ್ವಾಧಾರ ಕೇಂದ್ರಕ್ಕೆ ಕಳುಹಿಸಲಾಗಿದೆ.

English summary
15 year old girl gang raped in Sringeri, Chikkamagaluru district. Police field FIR against 17 persons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X