• search
 • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿಕ್ಕಮಗಳೂರು; ಒಂದೇ ಗ್ರಾಮದ 128 ಜನರಿಗೆ ಕೋವಿಡ್

By ಚಿಕ್ಕಮಗಳೂರು ಪ್ರತಿನಿಧಿ
|

ಚಿಕ್ಕಮಗಳೂರು, ಮೇ 17; ಕರ್ನಾಟಕದಲ್ಲಿ ಕೋವಿಡ್ 2ನೇ ಅಲೆ ಜನರಲ್ಲಿ ಆತಂಕವನ್ನು ತಂದೊಡ್ಡಿದೆ. ಕೋವಿಡ್ ಸೋಂಕು ನಗರ ಪ್ರದೇಶಗಳು ಮಾತ್ರವಲ್ಲ ಹಳ್ಳಿಗಳಿಗೆ ಸಹ ಹಬ್ಬಿದೆ. ಚಿಕ್ಕಮಗಳೂರಿನಲ್ಲಿ ಒಂದೇ ಗ್ರಾಮದ 128 ಜನರಿಗೆ ಸೋಂಕು ದೃಢಪಟ್ಟಿದೆ.

ಚಿಕ್ಕಮಗಳೂರು ತಾಲೂಕಿನ ಇಂದಿರಾನಗರದಲ್ಲಿ 128 ಜನರಿಗೆ ಕೋವಿಡ್ ಸೋಂಕು ತಗುಲಿದೆ. ಅನಾರೋಗ್ಯದಿಂದ ಗ್ರಾಮದ ವ್ಯಕ್ತಿ ಆಸ್ಪತ್ರೆ ಸೇರಿದ್ದರು. ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಶವವನ್ನು ಹಸ್ತಾಂತರ ಮಾಡಲಾಗಿತ್ತು.

ಚಿಕ್ಕಮಗಳೂರು: ಮದುವೆಯಾಗಬೇಕಿದ್ದ ದಿನವೇ ಯುವಕ ಕೊರೊನಾ ಸೋಂಕಿಗೆ ಸಾವುಚಿಕ್ಕಮಗಳೂರು: ಮದುವೆಯಾಗಬೇಕಿದ್ದ ದಿನವೇ ಯುವಕ ಕೊರೊನಾ ಸೋಂಕಿಗೆ ಸಾವು

ಹೃದಯಾಘಾತ ಸಾವು ಎಂಬ ಕಾರಣಕ್ಕೆ ಅಂತ್ಯಸಂಸ್ಕಾರದಲ್ಲಿ ನೂರಾರು ಜನರು ಭಾಗಿಯಾಗಿದ್ದರು. ಅಂತ್ಯಸಂಸ್ಕಾರ ಪೂರ್ಣಗೊಳ್ಳುತ್ತಿದ್ದಂತೆ ಪರೀಕ್ಷೆ ಬರೆದಿ ಬಂದಿದ್ದು, ಮೃತ ವ್ಯಕ್ತಿಗೆ ಕೋವಿಡ್ ಸೋಂಕು ಇತ್ತು ಎಂಬ ಅಂಶ ಬಯಲಾಗಿದೆ.

ಚಿಕ್ಕಮಗಳೂರಿಗೂ ಬಂತು 'ಆಕ್ಸಿಜನ್ ಬಸ್'; ತುರ್ತು ಸಂದರ್ಭದಲ್ಲಿ ಸಹಕಾರಿ ಚಿಕ್ಕಮಗಳೂರಿಗೂ ಬಂತು 'ಆಕ್ಸಿಜನ್ ಬಸ್'; ತುರ್ತು ಸಂದರ್ಭದಲ್ಲಿ ಸಹಕಾರಿ

ಇದರಿಂದಾಗಿ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಒಂದೇ ಹಳ್ಳಿಯ 128 ಜನರು ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದರು. ಎಲ್ಲರಿಗೂ ಕೋವಿಡ್ ಸೋಂಕು ತಗುಲಿರುವುದು ಖಚಿತವಾಗಿದೆ. ಈಗ ಗ್ರಾಮಕ್ಕೆ ಎಸಿ, ತಹಶೀಲ್ದಾರ್, ಪಿಡಿಓ ಭೇಟಿ ನೀಡಿದ್ದಾರೆ.

ಚಿಕ್ಕಮಗಳೂರು; ವಾರಾಂತ್ಯದ ಕರ್ಫ್ಯೂಗೆ ಉತ್ತಮ ಬೆಂಬಲ ಚಿಕ್ಕಮಗಳೂರು; ವಾರಾಂತ್ಯದ ಕರ್ಫ್ಯೂಗೆ ಉತ್ತಮ ಬೆಂಬಲ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮೇ 16ರ ಭಾನುವಾರ 963 ಹೊಸ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿದ್ದು, 3 ಜನರು ಮೃತಪಟ್ಟಿದ್ದಾರೆ.

   Tauktae ಚಂಡಮಾರುತದ ರಕ್ಕಸ ಅವತಾರ ನೋಡಿ | Oneindia Kannada

   ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 27,589. ಸಕ್ರಿಯ ಪ್ರಕರಣಗಳ ಸಂಖ್ಯೆ 5902. ಒಟ್ಟು ಮೃತಪಟ್ಟವರು 197.

   English summary
   128 people tested positive for COVID 19 at Chikkamagaluru taluk Indiranagara village. Health department officials visited the spot.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X