ಚಿಕ್ಕಬಳ್ಳಾಪುರ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಾಸಾದ ಹಾಲಿ ಜಿ.ಪಂ ಸದಸ್ಯೆ
ಚಿಕ್ಕಬಳ್ಳಾಪುರ, ಜುಲೈ 14: ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಇದರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಚೀಮಂಗಲ ಜಿಲ್ಲಾ ಪಂಚಾಯತಿ ಕ್ಷೇತ್ರದ ಹಾಲಿ ಸದಸ್ಯೆ ತನುಜಾ ರಘು ಪಾಸಾಗಿದ್ದಾರೆ.
Recommended Video
Constable
Sunita
Yadaw
had
to
Quit
for
questioning
Minister
Son
|
Oneindia
kannada
ಖಾಸಗಿ ಅಭ್ಯರ್ಥಿಯಾಗಿ ದ್ವಿತೀಯ ಪಿಯುಸಿ ಕಲಾ ವಿಭಾಗದ ಪರೀಕ್ಷೆ ಎದುರಿಸಿದ್ದ ತನುಜಾ ರಘು, 600 ಅಂಕಗಳಿಗೆ 368 ಅಂಕಗಳನ್ನು ಪಡೆದು ತೇರ್ಗಡೆ ಹೊಂದಿದ್ದಾರೆ. ತನುಜಾ ರಘು ಅವರು 2004 ರಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಉತ್ತೀರ್ಣರಾಗಿದ್ದರು.
ಚಿಕ್ಕಬಳ್ಳಾಪುರ: ಪೌರಕಾರ್ಮಿಕರಿಗೆ ಉಚಿತ ನಿವೇಶನ ವಿತರಿಸಿದ ಸಚಿವ ಕೆ.ಸುಧಾಕರ್
ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಎದುರಿಸಿ ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ರಾಜಕಾರಣ ಹಾಗೂ ಜನಸಾಮಾನ್ಯರ ಸೇವೆಯ ಜೊತೆ ಜೊತೆಗೆ ತಮ್ಮ ವೈಯುಕ್ತಿಕ ಬದುಕಿಗೆ ವಿದ್ಯಾಭ್ಯಾಸವನ್ನು ಮುಂದುವರೆಸಿ, ದ್ವೀತಿಯ ಪಿಯುಸಿ ಪರೀಕ್ಷೆ ಪಾಸಾದ ಹಾಲಿ ಜಿಲ್ಲಾ ಪಂಚಾಯತಿ ಸದಸ್ಯೆಗೆ ಹಲವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
Comments
woman 2nd puc result puc exam zp kannada news chikkaballapur ಮಹಿಳೆ ದ್ವಿತೀಯ ಪಿಯುಸಿ ಫಲಿತಾಂಶ ಪಿಯುಸಿ ಪರೀಕ್ಷೆ ಜಿಲ್ಲಾ ಪಂಚಾಯತಿ ಕನ್ನಡ ಸುದ್ದಿ ಚಿಕ್ಕಬಳ್ಳಾಪುರ
English summary
Tanuja Raghu, a defending member of the Chimangala Zilla Panchayat constituency in Chikkaballapur district, has passed the results of the second PUC examination.