ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಂದಿ ಬೆಟ್ಟದ ತಪ್ಪಲಲ್ಲಿ ಓಟ, ಯೋಗ ಮತ್ತು ಸಂಗೀತಗಳ ಸಂಗಮ

|
Google Oneindia Kannada News

ಚಿಕ್ಕಬಳ್ಳಾಪುರ, ಜೂನ್ 09: ಬೆಂಗಳೂರು ಮೂಲದ ನಮ್ಮ ನಿಮ್ಮ ಸೈಕಲ್ ಫೌಂಡೇಶನ್ ಸಮುದಾಯಗಳೊಂದಿಗೆ ಸುಸ್ಥಿರ ಬದುಕನ್ನು ಕಟ್ಟುವ ನಿಟ್ಟಿನಲ್ಲಿ ಅನೇಕ ಪ್ರಯೋಗಗಳನ್ನು ಮಾಡುತ್ತಿರುವ ಸಂಸ್ಥೆ ಇಂದು ಭಾರತೀಯ ಪುರಾತತ್ವ ಇಲಾಖೆಯ, ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮತ್ತು ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಸಂಸ್ಥೆಯ ಸಹಭಾಗಿತ್ತ್ವದಲ್ಲಿ ಯೋಗಿ ರನ್ ಯೆಂಬ ಓಟ, ಯೋಗ ಮತ್ತು ಸಂಗೀತಗಳ ಸಂಗಮದ ವಿಶೇಷ ಕಾರ್ಯಕ್ರಮವನ್ನು ಹಮ್ಮಿ ಕೊಂಡಿತ್ತು.

ಮೊದಲ ಹಂತದಲ್ಲಿ ಹಮ್ಮಿಕೊಂಡಿದ್ದ ಯೋಗಿ ರನ್ ಕಾರ್ಯಕ್ರಮದಲ್ಲಿ ಬೆಂಗಳೂರು ಸೇರಿದಂತೆ ದೇಶ ವಿದೇಶಗಳಿಂದ 700ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

ನಂದಿ ಬೆಟ್ಟ: 32 ವರ್ಷಗಳ ನಂತರ ರೋಪ್ ವೇ ಯೋಜನೆಗೆ ಮರುಜೀವನಂದಿ ಬೆಟ್ಟ: 32 ವರ್ಷಗಳ ನಂತರ ರೋಪ್ ವೇ ಯೋಜನೆಗೆ ಮರುಜೀವ

"ಯೋಗಿ ರನ್ ಒಂದು ವಿಶೇಷ ಕಾರ್ಯಕ್ರಮ, ಇಲ್ಲಿ ಯೋಗದೊಂದಿಗೆ ಕ್ರೀಡೆಯ ಸಂಯೋಗವಿದೆ. ಸಂಸ್ಕೃತಿಯೊಡನೆ ಆಧುನಿಕತೆಯ ಸಂಗಮವಿದೆ. ನಾದ ಮತ್ತು ತಾಳದೊಂದಿಗೆ ಓಟದ ಸಮ್ಮಿಲನವಿದೆ. ಪ್ರವಾಸೋದ್ಯಮದೊಂದಿಗೆ ಜವಬ್ದಾರಿಯ ಹೆಜ್ಜೆಯಿಡುವ ದೃಷ್ಠಿಯಿದೆ. ಇದು ನಮ್ಮ ನಾಡಿನ ಭವ್ಯತೆ ಮತ್ತು ದಿವ್ಯತೆಯನ್ನು ಜನರ ಹೃದಯ ತಲುಪಿಸಲು ಕೈಕೊಂಡಿರುವ ಕಾರ್ಯಕ್ರಮ. "ಎಂದು ಮುರಳಿ ಎಚ್ . ಆರ್. ನಮ್ಮ ನಿಮ್ಮ ಸೈಕಲ್ ಫೌಂಡೇಶನ್ ಮುಖ್ಯ ನಿರ್ದೇಶಕರು ತಿಳಿಸಿದರು.

ಸಂಗೀತ ಮತ್ತು ಓಟದ ಸಂಯೋಜನೆಯ ಪ್ರಯೋಗ

ಸಂಗೀತ ಮತ್ತು ಓಟದ ಸಂಯೋಜನೆಯ ಪ್ರಯೋಗ

"ಕರ್ನಾಟಕ ಸಂಗೀತದ ವಿವಿಧ ರಾಗಗಳು ದಿನದ ವಿಶೇಷ ಸಮಯದಲ್ಲಿ ಕೇಳಿದರೆ ಆರೋಗ್ಯ ಸುಧಾರಿಸುವುದಲ್ಲದೆ ಮನಸ್ಸಿಗೆ ಹರ್ಷೋಲ್ಲಾಸ ವನ್ನು ಕೊಡುತ್ತದೆ ಎನ್ನುವುದು ಸಂಗಶೋಧನೆಯಿಂದ ಧೃಡವಾಗಿದೆ, ಈ ನಿಟ್ಟಿನಲ್ಲಿ ಸಂಗೀತ ಮತ್ತು ಕ್ರೀಡೆಯನ್ನು ಸಂಯೋಜಿಸುವ ನವೀನ ಸಂಶೋಧನೆಯನ್ನು 'ರಾಗ ಲ್ಯಾಬ್ಸ್' ಮಾಡಲಿದೆ. ಯೋಗಿ ರನ್ ಮೂಲಕ ಸಂಗೀತ ಮತ್ತು ಓಟದ ಸಂಯೋಜನೆಯ ಪ್ರಯೋಗ ಮೊದಲ ಬಾರಿಗೆ ನಡೆಸಲಾಗಿದೆ." ಎಂದು ಐಜಿಎನ್ ಸಿಎ ಎಸ್ ಆರ್ ಸಿ ಕಾರ್ಯನಿರ್ವಾಹಕ ನಿರ್ದೇಶಕಿ ಡಾ.ದೀಪ್ತಿ ನವರತ್ನ ರವರು ತಿಳಿಸಿದರು.

ನಮ್ಮ ನಿಮ್ಮ ಸೈಕಲ್ ಫೌಂಡೇಶನ್ ಜೊತೆಗೆ ಹೆಜ್ಜೆ

ನಮ್ಮ ನಿಮ್ಮ ಸೈಕಲ್ ಫೌಂಡೇಶನ್ ಜೊತೆಗೆ ಹೆಜ್ಜೆ

"ಕಲಾತ್ಮಕ, ವಾಸ್ತು ಶಿಲ್ಪ, ತಾಂತ್ರಿಕ ನೈಪುಣ್ಯತೆ, ಪುರಾತನ ನಾಗರಿಕತೆಯ ಅಂಶಗಳನ್ನು ಹೊಂದಿರುವ ಸ್ಥಳಗಳಲ್ಲಿ ಯೋಗ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಚರಿಸುವುದರಿಂದ ರಾಜ್ಯದ ಪ್ರವಾಸೋದ್ಯಮ ತಾಣಗಳ ಆರೋಗ್ಯಕರ ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆ ನಾಡಿನ ಸುಂದರ ಪರಿಸರದ ಜೊತೆಗೆ ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೂ ಉತ್ತೇಜನ ಕೊಡುವ ನಿಟ್ಟಿನಲ್ಲಿ ನಮ್ಮ ನಿಮ್ಮ ಸೈಕಲ್ ಫೌಂಡೇಶನ್ ಜೊತೆಗೆ ಹೆಜ್ಜೆಯನ್ನು ಇಟ್ಟಿದೆ" ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್ ತಿಳಿಸಿದರು.

3 ವಿಭಾಗಗಳಲ್ಲಿ ನಡೆದ ಯೋಗಿ ರನ್ ಓಟದಲ್ಲಿ ವಿಜೇತರು

3 ವಿಭಾಗಗಳಲ್ಲಿ ನಡೆದ ಯೋಗಿ ರನ್ ಓಟದಲ್ಲಿ ವಿಜೇತರು

3 ವಿಭಾಗಗಳಲ್ಲಿ ನಡೆದ ಯೋಗಿ ರನ್ ಓಟದಲ್ಲಿ ವಿಜೇತವಾದವರ ವಿವರ
Men Open Category:
21K Winner - Mikiyas Yemata Lemlenu from Ethiopia - Time: 1:28:13
12K Winner - Amanuel Abdu from Ethiopia - Time: 0:58:25
5K Winner - Chandan Kumar from Bengaluru - Time: 0:22:16

Women Open Category:
21K Winner - Upashana from Bengaluru- Time: 2:34:41
12K Winner - Zinashwark Yenew from Ethiopia - Time: 1:13:46
5K Winner - Amisha from Bengaluru - Time: 0:36:21
**

ವಿಜೇತರಿಗೆ ನಗದು ಬಹುಮಾನ ಜತೆಗೆ ಪದಕ ಮತ್ತು ಪ್ರಮಾಣಪತ್ರ

ವಿಜೇತರಿಗೆ ನಗದು ಬಹುಮಾನ ಜತೆಗೆ ಪದಕ ಮತ್ತು ಪ್ರಮಾಣಪತ್ರ

ಭೋಗ ನಂದೀಶ್ವರ ದೇವಸ್ಥಾನದಲ್ಲಿ ಪ್ರಾರಂಭವಾದ ಓಟ ಅಲ್ಲಿಂದ ಸುಲ್ತಾನಪೇಟೆಯ ಮುಂಬಾಗ ಹಾದು , ಓಟಗಾರರು ಮೆಟ್ಟಿಲು ದಾರಿಯಿಂದ ನಂದಿ ಬೆಟ್ಟವನ್ನು ಹತ್ತಿ ಮತ್ತೆ ಬೆಟ್ಟವನ್ನು ಇಳಿದು ಭೋಗ ನಂದೀಶ್ವರದಲ್ಲಿ ಓಟ ಮುಗಿಸಿದರು. ವಿಜೇತರಿಗೆ ನಗದು ಬಹುಮಾನ ಜತೆಗೆ ಪದಕ ಮತ್ತು ಪ್ರಮಾಣಪತ್ರ ನೀಡಲಾಯಿತು. ಶೈಕ್ಷಣಿಕ ಸಂಸ್ಥೆಗಳು, ಕಂಪನಿಗಳ ಓಟದ ಕ್ಲಬ್, ನಗರದ ವಿವಿಧ ಓಟದ ಕ್ಲಬ್‍ಗಳಿಗೆ ರಿಯಾಯಿತಿಯನ್ನು ಕೊಡಲಾಗಿತ್ತು.

ನಂದಿಬೆಟ್ಟದಲ್ಲಿ ರಸ್ತೆ ಒಂದು ಬಿಟ್ಟು, ಉಳಿದ ಅಭಿವೃದ್ಧಿಯೇ ಶೂನ್ಯನಂದಿಬೆಟ್ಟದಲ್ಲಿ ರಸ್ತೆ ಒಂದು ಬಿಟ್ಟು, ಉಳಿದ ಅಭಿವೃದ್ಧಿಯೇ ಶೂನ್ಯ

English summary
NNCF organised unique initiative of YOGI.RUN - an intimate, authentic and one its kind program. The debut program of YOGI.RUN declared success at Bengaluru’s famed neighborhood of Nandi Hills today June 9, 2019 (Sunday).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X