ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Video: ಸುರಿಯುವ ಮಳೆ ನಡುವೆ ನಿಂತು ಡಿ ಕೆ ಶಿವಕುಮಾರ್ ಭಾಷಣ!

|
Google Oneindia Kannada News

ಚಿಕ್ಕಬಳ್ಳಾಪುರ, ಜುಲೈ 15: ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯ ನಡುವೆ ನಿಂತು ಸಾರ್ವಜನಿಕರನ್ನು ಉದ್ದೇಶಿಸಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಭಾಷಣ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ನಗರದ ಶಾದಿ ಮಹಲ್ ನಲ್ಲಿ ನಡೆದ ಆಹಾರ ಧಾನ್ಯಗಳ (ಮೆಗಾ ಫುಡ್)ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಭಾಗವಹಿಸಿದ್ದರು. ಈ ವೇಳೆ ಮಳೆ ಸುರಿಯಲು ಆರಂಭಿಸಿತು. ಭಾರತದಲ್ಲಿ ಯಾರೊಬ್ಬರೂ ಹಸಿದುಕೊಂಡು ಇರಬಾರದು ಎಂಬ ಉದ್ದೇಶದಿಂದ ಪ್ರತಿಯೊಬ್ಬರಿಗೆ 700 ರೂಪಾಯಿ ಖರ್ಚು ಮಾಡಲಾಗುತ್ತಿದೆ ಎಂದರು.

Recommended Video

ಕಾಂಗ್ರೆಸ್ ಫುಡ್ ಕಿಟ್ ವಿತರಣೆ ವೇಳೆ ಮಳೆ-ಮಳೆಯಲ್ಲೇ ನೆನೆಯುತ್ತಾ ಭಾಷಣ ಮಾಡಿದ ಡಿಕೆಶಿ

ಹೆಗಲ ಮೇಲೆ 'ಕೈ': ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಸೆಲ್ಫಿ ಸಮರ!ಹೆಗಲ ಮೇಲೆ 'ಕೈ': ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಸೆಲ್ಫಿ ಸಮರ!

ಒಂದು ಕಡೆಯಲ್ಲಿ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯ ನಡುವೆಯೇ ಛತ್ರಿಯ ಅಡಿ ನಿಂತ ಡಿಕೆ ಶಿವಕುಮಾರ್ ಬಲುಉತ್ಸಾಹದಿಂದ ಭಾಷಣ ಮುಂದುವರಿಸಿದರು. ಇನ್ನೊಂದು ಕಡೆಯಲ್ಲಿ ಮಳೆಯಿಂದ ರಕ್ಷಿಸಿಕೊಳ್ಳುವುದಕ್ಕೆ ಕುಳಿತುಕೊಂಡಿದ್ದ ಕುರ್ಚಿಗಳನ್ನೇ ತಲೆ ಮೇಲೆ ಹಿಡಿದು ಸಾರ್ವಜನಿಕರು ಭಾಷಣವನ್ನು ಆಲಿಸಿದ್ದು ವಿಶೇಷವಾಗಿತ್ತು.

Video: KPCC President DK Shivakumar Speech amid Heavy Rain At Chikkaballapur

ಬಾಗೇಪಲ್ಲಿಯಲ್ಲಿ ಡಿ ಕೆ ಶಿವಕುಮಾರ್ ಹೇಳಿದ್ದೇನು?:

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ನಗರದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿದ ಡಿ ಕೆ ಶಿವಕುಮಾರ್ ಮಾತನಾಡಿದರು. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಸರ್ಕಾರದ ಕಡೆಯಿಂದ ಮನೆ ಮನೆಗೆ ತೆರಳಿ ಆಹಾರ ಧಾನ್ಯಗಳನ್ನು ಪೂರೈಸುವ ಕೆಲಸವನ್ನು ಮಾಡಬೇಕಿತ್ತು. ಆದರೆ ಆ ರೀತಿಯ ಯಾವ ಕೆಲಸಗಳೂ ಆಗಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ಈ ರೀತಿ ಜನಸೇವೆಯಲ್ಲಿ ತೊಡಗಿದ್ದಾರೆ. ಅಂಥ ಕಾರ್ಯಕರ್ತರ ಜೊತೆಗೆ ಕಾಂಗ್ರೆಸ್ ಪಕ್ಷ ಯಾವಾಗಲೂ ನಿಂತಿರುತ್ತದೆ ಎಂಬುದನ್ನು ಖಾತ್ರಿ ಪಡಿಸುವುದಕ್ಕೆ ನಾವು ಬಂದಿದ್ದೇವೆ," ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

English summary
KPCC President DK Shivakumar Speech amid Heavy Rain At Chikkaballapur Food Kit Distribution Program.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X