ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಂದಿ ಗಿರಿಧಾಮಕ್ಕೆ ಹೋಗುವ ಪ್ರವಾಸಿಗರ ಗಮನಕ್ಕೆ

|
Google Oneindia Kannada News

ಚಿಕ್ಕಬಳ್ಳಾಪುರ, ಜುಲೈ 14; ಬೆಂಗಳೂರು ನಗರಕ್ಕೆ ಹತ್ತಿರದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ನಂದಿ ಗಿರಿಧಾಮ. ಅನ್‌ಲಾಕ್ ಘೋಷಣೆಯಾದ ಬಳಿಕ ಸಾವಿರಾರು ಪ್ರವಾಸಿಗರು ಪ್ರಕೃತಿ ಸೌಂದರ್ಯ ಸವಿಯಲು ನಂದಿ ಗಿರಿಧಾಮಕ್ಕೆ ಭೇಟಿ ನೀಡುತ್ತಿದ್ದಾರೆ. ನೂರಾರು ಜನರು ಸೇರಿರುವಾಗ ಕೋವಿಡ್ ನಿಯಮಗಳ ಪಾಲನೆ ಹೇಗೆ?.

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ನಂದಿ ಗಿರಿಧಾಮಕ್ಕೆ ಪ್ರವಾಸಿಗರನ್ನು ನಿರ್ಬಂಧಿಸುವ ಕುರಿತು ತೀರ್ಮಾನ ಕೈಗೊಂಡಿದೆ. ಕೋವಿಡ್ ಹರಡುವಿಕೆಯನ್ನು ತಡೆಯಲು ಪೊಲೀಸ್ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ನಂದಿ ಬೆಟ್ಟದಲ್ಲಿ ಡಿ. 24ರಿಂದ ಪ್ಯಾರಾ ಗ್ಲೈಡಿಂಗ್ ಪ್ರಾರಂಭನಂದಿ ಬೆಟ್ಟದಲ್ಲಿ ಡಿ. 24ರಿಂದ ಪ್ಯಾರಾ ಗ್ಲೈಡಿಂಗ್ ಪ್ರಾರಂಭ

ನಂದಿ ಗಿರಿಧಾಮಕ್ಕೆ ಬೇರೆ-ಬೇರೆ ಜಿಲ್ಲೆಗಳ ಪ್ರವಾಸಿಗರು ಅದರಲ್ಲೂ ಬೆಂಗಳೂರು ನಗರದಿಂದ ನೂರಾರು ಜನರು ಆಗಮಿಸುತ್ತಾರೆ. ಸರ್ಕಾರಿ ರಜೆ ದಿನಗಳು ಮತ್ತು ವಾರಾಂತ್ಯದಲ್ಲಿ ಸಾವಿರಾರು ಜನರು ಬರುತ್ತಾರೆ.

ಜೇಬಿನಲ್ಲಿ ದುಡ್ಡಿದ್ದರೆ ಮಾತ್ರ ನಂದಿಬೆಟ್ಟಕ್ಕೆ ಹೋಗಿ: ಪ್ರವೇಶ ಶುಲ್ಕ ಸೇರಿ ಎಲ್ಲವೂ ದುಬಾರಿಜೇಬಿನಲ್ಲಿ ದುಡ್ಡಿದ್ದರೆ ಮಾತ್ರ ನಂದಿಬೆಟ್ಟಕ್ಕೆ ಹೋಗಿ: ಪ್ರವೇಶ ಶುಲ್ಕ ಸೇರಿ ಎಲ್ಲವೂ ದುಬಾರಿ

Tourists Entry To Nandi Hills Banned During Weekends

ಕೋವಿಡ್ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಿದರೂ ನಂದಿಬೆಟ್ಟದಲ್ಲಿ ಜನರು, ಸಂಚಾರ ದಟ್ಟಣೆಯನ್ನು ಹತೋಟಿಗೆ ತರಲು ಸಾಧ್ಯವಾಗುತ್ತಿಲ್ಲ. ಪ್ರವಾಸಿಗರ ಭೇಟಿಗೆ ನಿರ್ಬಂಧ ವಿಧಿಸುವುದು ಉತ್ತಮ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಮನವಿ ಮಾಡಿರುತ್ತಾರೆ.

ಕೆಮ್ಮಣ್ಣಗುಂಡಿ, ನಂದಿ ಗಿರಿಧಾಮ ಪ್ರವಾಸೋದ್ಯಮ ಇಲಾಖೆಗೆ ಕೆಮ್ಮಣ್ಣಗುಂಡಿ, ನಂದಿ ಗಿರಿಧಾಮ ಪ್ರವಾಸೋದ್ಯಮ ಇಲಾಖೆಗೆ

ಆರೋಗ್ಯ, ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚರ್ಚಿಸಿ, ಸಚಿವರು ನೀಡಿರುವ ನಿರ್ದೇಶನದ ಅನ್ವಯ ಕೋವಿಡ್ ಸೋಂಕು ನಿಯಂತ್ರಿಸಲು ನಂದಿಬೆಟ್ಟದಲ್ಲಿ ಜನಸಂದಣಿ ತಡೆಯಲು ಕ್ರಮ ಕೈಗೊಳ್ಳಾಗಿದೆ.

ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾದಂಡಾಧಿಕಾರಿ ಅಮರೇಶ್ ಹೆಚ್. ನಂದಿಬೆಟ್ಟಕ್ಕೆ ಪ್ರವಾಸಿಗರ ಭೇಟಿ ನಿಷೇಧಿಸಿದ್ದಾರೆ. 12/72021ರಿಂದ ಮುಂದಿನ ಆದೇಶದ ತನಕ ಇದು ಜಾರಿಯಲ್ಲಿರುತ್ತದೆ. ವಾರಾಂತ್ಯ ಅಂದರೆ ಶುಕ್ರವಾರ ಸಂಜೆ 6 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯ ತನಕ ನಂದಿಬೆಟ್ಟಕ್ಕೆ ಪ್ರವಾಸಿಗರು ಭೇಟಿ ನೀಡುವಂತಿಲ್ಲ.

Recommended Video

ದರ್ಶನ್ ವಿರುದ್ದ ತಿರುಗಿ ಬಿದ್ದ ಇಂದ್ರಜಿತ್ ಲಂಕೇಶ್ | Oneindia Kannada

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಆದೇಶದ ಅನ್ವಯ ಈ ಶುಕ್ರವಾರದಿಂದಲೇ ನಂದಿಬೆಟ್ಟಕ್ಕೆ ವಾರಾಂತ್ಯದಲ್ಲಿ ಜನರು ಭೇಟಿ ನೀಡುವಂತಿಲ್ಲ. ಆದ್ದರಿಂದ ಬೆಂಗಳೂರು ಸೇರಿದಂತೆ ಬೇರೆ ಜಿಲ್ಲೆಯ ಪ್ರವಾಸಿಗರು ಬಂದರೆ ವಾಪಸ್ ಹೋಗಬೇಕಾಗುತ್ತದೆ.

English summary
Chikkaballapur district administration banned tourist entry to Nandi hills during weekends. From July 12 no entry for Nandi hills from Friday 6 pm to Monday 6 am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X