ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಂದಿ ಬೆಟ್ಟದ ನಿರ್ಬಂಧ ತೆರವು; 6 ಗಂಟೆಗೆ ಪ್ರವೇಶ

|
Google Oneindia Kannada News

ಚಿಕ್ಕಬಳ್ಳಾಪುರ, ಅಕ್ಟೋಬರ್ 05: ನಂದಿಗಿರಿಧಾಮಕ್ಕೆ ಪ್ರವಾಸಿಗರ ಭೇಟಿಗೆ ಹಾಕಿದ್ದ ನಿರ್ಬಂಧ ತೆರವು ಮಾಡಲಾಗಿದೆ. ಸೋಮವಾರದಿಂದ ಮುಂಜಾನೆ 6 ಗಂಟೆಗೆ ಪ್ರವಾಸಿಗರ ಭೇಟಿಗೆ ಅವಕಾಶ ನೀಡಲಾಗಿದೆ.

ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಬೆಳಗ್ಗೆ 8 ಗಂಟೆ ಬಳಿಕ ಮಾತ್ರ ನಂದಿ ಬೆಟ್ಟಕ್ಕೆ ಪ್ರವೇಶ ನೀಡಲಾಗುತ್ತಿತ್ತು. ಇದರಿಂದಾಗಿ ಮುಂಜಾನೆ ಸೂರ್ಯೋದಯ ನೋಡಲು ಆಗಮಿಸುವವರಿಗೆ ನಿರಾಸೆ ಆಗುತ್ತಿತ್ತು.

ಇಂದಿನಿಂದ ನಂದಿ ಬೆಟ್ಟಕ್ಕೆ ಮುಕ್ತ ಅವಕಾಶ: ಮಾಸ್ಕ್ ಇಲ್ಲದಿದ್ದರೆ ನೋ ಎಂಟ್ರಿ ಇಂದಿನಿಂದ ನಂದಿ ಬೆಟ್ಟಕ್ಕೆ ಮುಕ್ತ ಅವಕಾಶ: ಮಾಸ್ಕ್ ಇಲ್ಲದಿದ್ದರೆ ನೋ ಎಂಟ್ರಿ

ಚಿಕ್ಕಬಳ್ಳಾಪುರ ಎಸ್‌ಪಿ ಮಿಥುನ್ ಕುಮಾರ್ ಸೋಮವಾರದಿಂದ ಬೆಳಗ್ಗೆ 6 ಗಂಟೆಗೆ ನಂದಿಬೆಟ್ಟ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಹೇಳಿದ್ದರು. ಮೊದಲ ದಿನವಾದ ಇಂದು ನೂರಾರು ಪ್ರವಾಸಿಗರು ಬೆಟ್ಟಕ್ಕೆ ಆಗಮಿಸಿದ್ದಾರೆ.

 ನಂದಿಬೆಟ್ಟ: ಭೋಗ ನಂದೀಶ್ವರ ದೇವಸ್ಥಾನಕ್ಕೆ ಶೀಘ್ರ ಹೊಸ ಲುಕ್‌ ನಂದಿಬೆಟ್ಟ: ಭೋಗ ನಂದೀಶ್ವರ ದೇವಸ್ಥಾನಕ್ಕೆ ಶೀಘ್ರ ಹೊಸ ಲುಕ್‌

Tourists Allowed To Nandi Hills From Morning 6 Am

8 ಗಂಟೆ ನಂತರ ಪ್ರವಾಸಿಗರ ಭೇಟಿಗೆ ಅವಕಾಶ ನೀಡುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿತ್ತು. ಆದ್ದರಿಂದ, ಸಮಯದಲ್ಲಿ ಬದಲಾವಣೆ ಮಾಡುವುದಾಗಿ ಚಿಕ್ಕಬಳ್ಳಾಪುರ ಎಸ್‌ಪಿ ಟ್ವೀಟ್ ಮಾಡಿದ್ದರು.

 ಚಿಕ್ಕಬಳ್ಳಾಪುರ; ಜಿಲ್ಲೆಯ ಯುವಕರಿಗೆ ಉದ್ಯೋಗದ ಭರವಸೆ ಕೊಟ್ಟ ಸಚಿವ ಸುಧಾಕರ್ ಚಿಕ್ಕಬಳ್ಳಾಪುರ; ಜಿಲ್ಲೆಯ ಯುವಕರಿಗೆ ಉದ್ಯೋಗದ ಭರವಸೆ ಕೊಟ್ಟ ಸಚಿವ ಸುಧಾಕರ್

ಶನಿವಾರ ಮತ್ತು ಭಾನುವಾರ ಸಾವರಾರು ಜನರು ನಂದಿಬೆಟ್ಟಕ್ಕೆ ಆಗಮಿಸಿದ್ದರು. ಆದರೆ, 8 ಗಂಟೆ ಬಳಿಕ ಮಾತ್ರ ಪ್ರವೇಶ ಎಂದು ಎಲ್ಲರನ್ನೂ ಚೆಕ್ ಪೋಸ್ಟ್ ಬಳಿ ತಡೆಯಲಾಗಿತ್ತು. ಇದರಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಕೋವಿಡ್ ಲಾಕ್ ಡೌನ್ ಘೋಷಣೆ ಬಳಿಕ ನಂದಿಬೆಟ್ಟಕ್ಕೆ ಪ್ರವಾಸಿಗರ ಭೇಟಿ ನಿಷೇಧಿಸಲಾಗಿತ್ತು. ಕೆಲವು ದಿನಗಳ ಹಿಂದೆ ಪುನಃ ಪ್ರವೇಶ ನೀಡಲಾಗಿದೆ. ಸಾವಿರಾರು ಜನರು ಆಗಮಿಸಿದ ಹಿನ್ನಲೆಯಲ್ಲಿ ಭಾನುವಾರ ಜನರು ಸಾಮಾಜಿಕ ಅಂತರ ಪಾಲಿಸದೇ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ್ದರು.

ಭಾನುವಾರದ ವರದಿಯಂತೆ ಚಿಕ್ಕಬಳ್ಳಾಪುರದಲ್ಲಿ 128 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 7976. ಸಕ್ರಿಯ ಪ್ರಕರಣಗಳ ಸಂಖ್ಯೆ 2014.

English summary
Chikkaballapura district police allowed tourists to visit Nandi hills from morning 6 am. Till October 5 tourists allowed after 8 am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X