ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಂದಿ ಗಿರಿಧಾಮಕ್ಕೆ ಪ್ರವಾಸೋದ್ಯಮ ಸಚಿವರ ಭೇಟಿ; ಶೀಘ್ರದಲ್ಲೇ ಪ್ರವಾಸಿಗರಿಗೆ ಸಿಹಿಸುದ್ದಿ

By ಶ್ರೀಧರ್ ಎಂ ಬೂದಿಗೆರೆ
|
Google Oneindia Kannada News

ಚಿಕ್ಕಬಳ್ಳಾಪುರ, ಫೆಬ್ರವರಿ 2: ಬುಧವಾರ ಬೆಳ್ಳಂಬೆಳಗ್ಗೆ ವಿಶ್ವವಿಖ್ಯಾತ ನಂದಿ ಗಿರಿಧಾಮಕ್ಕೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಭೇಟಿ ನೀಡಿದ್ದು, ಪ್ರಕೃತಿ ಸೌಂದರ್ಯ ಸವಿಯುವುದರ ಜೊತೆಗೆ ಕೆಲವೊಂದು ಸಮಸ್ಯೆಗಳನ್ನು ಸ್ಥಳದಲ್ಲಿ ಗಮನಿಸಿ ಕ್ರಮಕ್ಕೆ ಮುಂದಾದರು.

ಅಲ್ಲದೆ ಪ್ರಸಿದ್ಧ ನಂದಿಗಿರಿಧಾಮಕ್ಕೆ ರೋಪ್ ವೇ ಕಾಮಗಾರಿ ಬೇಗ ಪ್ರಾರಂಭ ಮಾಡುವ ಭರವಸೆ ನೀಡಿದ ಸಚಿವರು, ಪ್ರವಾಸಿ ತಾಣದಲ್ಲಿ ಏನೆಲ್ಲಾ ಸಮಸ್ಯೆಗಳನ್ನು ನೋಡಿದರು ಮತ್ತು ಯಾವ ಕ್ರಮಕ್ಕೆ ಮುಂದಾದರು ಎಂಬುದನ್ನು ತಿಳಿಯಲು ಮುಂದೆ ಓದಿ.

ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಬುಧವಾರ ಬೆಳಗ್ಗೆಯೇ ಭೇಟಿ ನೀಡಿ, ಸೂರ್ಯೋದಯ ವೀಕ್ಷಿಸುವುದರ ಜೊತೆಗೆ ಟಿಪ್ಪು ಡ್ರಾಪ್ ಮತ್ತು ಇತರೆ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಯನ್ನು ಖುದ್ದು ಪರಿಶೀಲನೆ ಮಾಡಿದರು.

Chikkaballapur: Tourism Minister Anand Singh Visit To Nandi Hills on Today

ಇನ್ನು ನಂದಿ ಗಿರಿಧಾಮದಲ್ಲಿ ಪ್ರಮುಖವಾಗಿ ಕೆಲವೊಂದು ಮೂಲಭೂತ ಸೌಕರ್ಯಗಳು, ಪ್ರಮುಖವಾಗಿ ಕುಡಿಯುವ ನೀರಿನ ಸಮಸ್ಯೆ ಇರುವುದನ್ನು ಗಮನಿಸಿದರು. ಅಲ್ಲದೆ ಬೆಟ್ಟಕ್ಕೆ ರೂಪ್ ವೇ ಕಾಮಗಾರಿಯನ್ನು ಆದಷ್ಟು ಬೇಗ ಪ್ರಾರಂಭ ಮಾಡಲು ಟೆಂಡರ್ ಅನ್ನು ಕರೆಯಲಾಗುವುದು ಎಂದು ತಿಳಿಸಿದರು. ಇದೇ ವೇಳೆ ಗಿರಿಧಾಮದಲ್ಲಿ ಕಲಾಧಾಮ ಮಾಡಿ ರಾಜಸ್ಥಾನದಲ್ಲಿ ನಡೆಯುವಂತೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ, ಇಲ್ಲಿನ ಕೆಲ ಸ್ಥಳೀಯ ಕಲಾವಿದರಿಗೂ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು.

ನಂದಿ ಗಿರಿಧಾಮಕ್ಕೆ ಒಬ್ಬ ಸಚಿವನಾಗಿ ಭೇಟಿ ನೀಡದೆ, ಓರ್ವ ಪ್ರವಾಸಿಗನಾಗಿ ಭೇಟಿ ನೀಡಿದರೆ ಇಲ್ಲಿನ ಸಮಸ್ಯೆ ಬಗ್ಗೆ ಹೆಚ್ಚಿನದಾಗಿ ತಿಳಿಯುತ್ತದೆ. ಈ ಗಿರಿಧಾಮಕ್ಕೆ ಪ್ರಚಾರದ ಅಗತ್ಯ ಏನೂ ಇಲ್ಲ. ನಾನೂ 30 ವರ್ಷಗಳ ಹಿಂದೆ ನನ್ನ ಬಾಳ ಸಂಗಾತಿ ಆಗುವವಳ ಜೊತೆಗೆ ಬಂದಿದ್ದೆ. ಹಾಗಾಗಿ ಇಲ್ಲಿನ ಸೌಂದರ್ಯಕ್ಕೆ ಯಾವುದೇ ರೀತಿಯ ಪ್ರಚಾರದ ಅಗತ್ಯ ಇಲ್ಲ ಎಂದರು.

Chikkaballapur: Tourism Minister Anand Singh Visit To Nandi Hills on Today

ಹೊಸ ಪ್ರವಾಸೋದ್ಯಮದ ನೀತಿಯನ್ನು ಜಾರಿಗೆ ತಂದಿದ್ದೇವೆ. ಅದರಂತೆ ಈಗಾಗಲೇ ಹಂಪಿ, ಹಳೇಬೀಡು, ಬೇಲೂರು, ಬಾದಾಮಿಯಲ್ಲಿ ಈಗಾಗಲೇ ಯೋಜನೆಗಳು ಪ್ರಾರಂಭವಾಗಿವೆ. ಪ್ರವಾಸಿ ತಾಣಗಳಲ್ಲಿ ಕೆಲವು ಕ್ಲಸ್ಟರ್‌ಗಳನ್ನು ತಂದಿದ್ದೇವೆ. ಪ್ರವಾಸಿ ತಾಣಗಳಲ್ಲಿ ಹೋಟೆಲ್ ಉದ್ಯಮ ನಡೆಸುವವರಿಗೆ ಸಬ್ಸಿಡಿ ನೀಡಬೇಕೆಂದು ಯೋಚನೆ ಮಾಡಿದ್ದೇವೆ ಎಂದು ಆನಂದ್ ಸಿಂಗ್ ತಿಳಿಸಿದರು.

ಪ್ರಮುಖವಾಗಿ ನಂದಿ ಗಿರಿಧಾಮಕ್ಕೆ ಟ್ರಾಫಿಕ್ ಕಿರಿಕಿರಿ ಇದ್ದು, ರೋಪ್ ವೇ ಮಾಡಿದಾಗ ವಾಹನಗಳಲ್ಲಿ ಬೆಟ್ಟದ ಮೇಲೆ ಸುತ್ತಾಡಿಸಿ ನಂತರ ಪಾರ್ಕಿಂಗ್ ಸ್ಥಳಕ್ಕೆ ಬಿಡುವ ವ್ಯವಸ್ಥೆ ಮಾಡಿದಾಗ ಟ್ರಾಫಿಕ್ ಕಿರಿಕಿರಿ ತಪ್ಪುತ್ತದೆ. ಅಲ್ಲದೆ ಅಂಗವಿಕಲರಿಗೆ ಬ್ಯಾಟರಿ ಚಾಲಿತ ವಾಹನಗಳ ವ್ಯವಸ್ಥೆ ಮಾಡಿ ವೀಕ್ಷಿಸಲು ಅನುಕೂಲ ಮಾಡಿಕೊಡಲಾಗುವುದು. ಇನ್ನು ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ತೆರವು ಮಾಡಿದ್ದು, ಇಲ್ಲಿ ಮಾತ್ರ ಇನ್ನೂ ಇದೆ. ಹಾಗಾಗಿ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ನಂತರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

Chikkaballapur: Tourism Minister Anand Singh Visit To Nandi Hills on Today

ಒಟ್ಟಿನಲ್ಲಿ ಬೆಳಗ್ಗೆಯೇ ನಂದಿ ಗಿರಿಧಾಮಕ್ಕೆ ಭೇಟಿ ನೀಡಿ, ಅಲ್ಲಿನ ವಸ್ತು ಸ್ಥಿತಿಯ ಬಗ್ಗೆ ಖುದ್ದು ಸಚಿವರೇ ತಿಳಿದುಕೊಂಡಿದ್ದಾರೆ. ಇನ್ನೂ ವೀಕೆಂಡ್ ಕರ್ಫ್ಯೂ ತೆರವು ಕುರಿತು ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

ನಂದಿ ಗಿರಿಧಾಮದಲ್ಲಿನ ಅವ್ಯವಸ್ಥೆಗೆ ಸಚಿವರ ಬೇಸರ
ವಿಶ್ವವಿಖ್ಯಾತ ನಂದಿ ಗಿರಿಧಾಮದಲ್ಲಿನ ಅವ್ಯವಸ್ಥೆ ಕುರಿತು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಬೇಸರ ವ್ಯಕ್ತಪಡಿಸಿದರು. ಇಲ್ಲಿ ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳ ಕೊರತೆ ಇದ್ದು, ಶೀಘ್ರದಲ್ಲೇ ಪರಿಹರಿಸುವುದಾಗಿ ಭರವಸೆ ನೀಡಿದರು.

ಕುಡಿಯುವ ನೀರು, ವಾಹನಗಳ ಪಾರ್ಕಿಂಗ್ ಸಮಸ್ಯೆ, ಅಶಕ್ತರಿಗೆ ವಾಹನಗಳ ಕೊರತೆ, ಅನುದಾನ ಸದ್ಭಳಕೆಯಲ್ಲಿ ವಿಫಲವಾಗಿದ್ದು, ಪ್ರವಾಸೋದ್ಯಮ ಇಲಾಖೆಯಲ್ಲಿ ನಡೆದ ಕಾಮಗಾರಿಯಲ್ಲಿನ ಭ್ರಷ್ಟಾಚಾರದ ಬಗ್ಗೆ ಮಾಹಿತಿ ಪಡೆದು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ನಂದಿ ಗಿರಿಧಾಮಕ್ಕೆ ರೋಪ್ ವೇ ನಿರ್ಮಾಣಕ್ಕೆ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಅವರು ಮಾತಿನಲ್ಲಿ ಸತ್ಯವಿರುತ್ತದೆ. ಆದರೆ ಸತ್ಯಾಸತ್ಯತೆ ಪರಿಶೀಲಿಸಲಾಗುವುದು ಎಂದರು.

Recommended Video

Towing ವಾಹನಗಳಿಗೆ ಹೊಸ ನಿಯಮಗಳನ್ನು ತಂದ ಸರ್ಕಾರ | Oneindia Kannada

English summary
Tourism Minister Anand Singh visited the world famous Nandi hill station and promised to address infrastructure issues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X