ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲೋಕಸಭೆ ಉಪ ಚುನಾವಣೆಯಿಂದ ದೂರವಿರಲು ಕಾಂಗ್ರೆಸ್‌, ಜೆಡಿಎಸ್‌ಗೆ ಸಲಹೆ

|
Google Oneindia Kannada News

Recommended Video

ಉಪ ಚುನಾವಣೆ ಬಗ್ಗೆ ಡಾ.ಸುಧಾಕರ್ ಹೇಳಿದ್ದು ಹೀಗೆ..! | Oneindia Kannada

ಚಿಕ್ಕಬಳ್ಳಾಪುರ, ಅಕ್ಟೋಬರ್ 08 : ರಾಜ್ಯದ ಮೂರು ಕ್ಷೇತ್ರಗಳ ಲೋಕಸಭೆ ಉಪ ಚುನಾವಣೆ ಘೋಷಣೆ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಸುಧಾಕರ್ ಅವರು ಚುನಾವಣೆಯಿಂದ ದೂರ ಇರುವಂತೆ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಸಲಹೆ ನೀಡಿದ್ದಾರೆ.

ಬಳ್ಳಾರಿ, ಶಿವಮೊಗ್ಗ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳಿಗೆ ನವೆಂಬರ್ 3ರಂದು ಉಪ ಚುನಾವಣೆ ನಡೆಯಲಿದೆ. ನವೆಂಬರ್ 6ರಂದು ಫಲಿತಾಂಶ ಪ್ರಕಟವಾಗಲಿದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸುತ್ತಿವೆ.

ಮಂಡ್ಯ ಲೋಕಸಭೆ ಉಪ ಚುನಾವಣೆ : ಜೆಡಿಎಸ್‌ನಿಂದ ಅಚ್ಚರಿಯ ಹೆಸರು!ಮಂಡ್ಯ ಲೋಕಸಭೆ ಉಪ ಚುನಾವಣೆ : ಜೆಡಿಎಸ್‌ನಿಂದ ಅಚ್ಚರಿಯ ಹೆಸರು!

ಕಾಂಗ್ರೆಸ್ ಮತ್ತು ಜೆಡಿಎಸ್ ಉಪ ಚುನಾವಣೆಯಿಂದ ದೂರ ಉಳಿಯಬೇಕು ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಸುಧಾಕರ್ ಸಲಹೆ ನೀಡಿದ್ದಾರೆ. ಈ ಕುರಿತು ಅವರು ಟ್ವೀಟ್ ಮಾಡಿದ್ದಾರೆ. ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ನಡೆಸಿ, ಚುನಾವಣೆಯಿಂದ ದೂರ ವುಳಿಯಬೇಕು ಎಂದು ಹೇಳಿದ್ದಾರೆ.

ಮಂಡ್ಯ ಲೋಕಸಭೆ ಉಪ ಚುನಾವಣೆ : ಜೆಡಿಎಸ್‌ ಜೊತೆ ಮೈತ್ರಿಗೆ ವಿರೋಧ?ಮಂಡ್ಯ ಲೋಕಸಭೆ ಉಪ ಚುನಾವಣೆ : ಜೆಡಿಎಸ್‌ ಜೊತೆ ಮೈತ್ರಿಗೆ ವಿರೋಧ?

ಸಾರ್ವತ್ರಿಕ ಚುನಾವಣೆಗೆ 4 ರಿಂದ 5 ತಿಂಗಳು ಉಳಿದಿದೆ. ಈಗ ಏಕೆ ಉಪ ಚುನಾವಣೆ ನಡೆಸಿ, ತೆರಿಗೆ ಹಣವನ್ನು ವೆಚ್ಚ ಮಾಡಬೇಕು? ಎಂದು ಡಾ.ಸುಧಾಕರ್ ಅವರು ಪ್ರಶ್ನೆ ಮಾಡಿದ್ದಾರೆ. ವಿವಿಧ ಪಕ್ಷಗಳ ಬೇರೆ-ಬೇರೆ ನಾಯಕರು ಸಹ ಉಪ ಚುನಾವಣೆ ಬಗ್ಗೆ ಪ್ರಶ್ನಿ ಎತ್ತಿದ್ದಾರೆ?.

ಶಿವಮೊಗ್ಗ ಉಪ ಚುನಾವಣೆ : ಬಿ.ವೈ.ರಾಘವೇಂದ್ರ ಒಮ್ಮತದ ಅಭ್ಯರ್ಥಿಯೇ?ಶಿವಮೊಗ್ಗ ಉಪ ಚುನಾವಣೆ : ಬಿ.ವೈ.ರಾಘವೇಂದ್ರ ಒಮ್ಮತದ ಅಭ್ಯರ್ಥಿಯೇ?

ಸುಧಾಕರ್ ಹೇಳಿದ್ದೇನು?

ಉಪ ಚುನಾವಣೆಗೆ ಹಣ ಖರ್ಚಲ್ಲವೇ?

ಹಣ ವೇಸ್ಟ್‌ ಅಷ್ಟೇ

ಹಣ ವೇಸ್ಟ್‌ ಅಷ್ಟೇ

'ಲೋಕಸಭೆ ಚುನಾವಣೆಗೆ 6 ತಿಂಗಳು ಬಾಕಿ ಇದೆ. ಈಗ ಚುನಾವಣಾ ಆಯೋಗ ಉಪ ಚುನಾವಣೆ ಘೋಷಣೆ ಮಾಡಿರುವುದು ವೇಸ್ಟ್ ಆಫ್ ಮನಿ. ಉಪ ಚುನಾವಣೆ ನಡೆಸುವ ಬಗ್ಗೆ ಆಯೋಗ ಆಲೋಚಿಸಬೇಕಿತ್ತು. ಚುನಾವಣೆ ಘೋಷಣೆ ಮಾಡಬಾರದಿತ್ತು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ' ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಉಪ ಚುನಾವಣೆ ಅಗತ್ಯವಿತ್ತೇ?

ಈಗ ಉಪ ಚುನಾವಣೆ ನಡೆದರೂ ಲೋಕಸಭಾ ಸದಸ್ಯರ ಅವಧಿ ಎಷ್ಟಿರುತ್ತದೆ? ಎಂದು ಮಾಜಿ ಸಚಿವ, ಬಿಜೆಪಿ ಶಾಸಕ ಸುರೇಶ್ ಕುಮಾರ್ ಪ್ರಶ್ನಿಸಿದ್ದಾರೆ.

ಉಪ ಚುನಾವಣೆ ಘೋಷಣೆ ಅಚ್ಚರಿ ತಂದಿದೆ

ಉಪ ಚುನಾವಣೆ ಘೋಷಣೆ ಅಚ್ಚರಿ ತಂದಿದೆ

'ಮೂರು ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿರುವುದು ಅಚ್ಚರಿ ತಂದಿದೆ. ಆದರೂ ಚುನಾವಣೆ ಎದುರಿಸಲು ಕಾಂಗ್ರೆಸ್ ಪಕ್ಷ ಸಿದ್ಧವಿದೆ' ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದರು.

ಮಂಡ್ಯ ಲೋಕಸಭಾ ಕ್ಷೇತ್ರದತ್ತ ನಿಖಿಲ್ ಕುಮಾರಸ್ವಾಮಿ ಕಣ್ಣಿಟ್ಟಿದ್ದಾರಾ?ಮಂಡ್ಯ ಲೋಕಸಭಾ ಕ್ಷೇತ್ರದತ್ತ ನಿಖಿಲ್ ಕುಮಾರಸ್ವಾಮಿ ಕಣ್ಣಿಟ್ಟಿದ್ದಾರಾ?

English summary
Chikkaballapur Congress MLA Dr. K. Sudhakar suggested the Congress and JD(S) party's to stay away from Lok Sabha by election of Mandya, Ballari and Shivamogga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X