ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಚಿಮುಲ್ ವಿಭಜನೆ; ಸಚಿವ, ಸಿಎಂ ಭಾವಚಿತ್ರಕ್ಕೆ ಹಾಲಿನ ಅಭಿಷೇಕ

By ಚಿಕ್ಕಬಳ್ಳಾಪುರ ಪ್ರತಿನಿಧಿ
|
Google Oneindia Kannada News

ಚಿಕ್ಕಬಳ್ಳಾಪುರ, ನವೆಂಬರ್ 10; ಕೋಚಿಮುಲ್ ವಿಭಜನೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದು ಸಚಿವರು ಹಾಗು ಸಿಎಂ ಬಸವರಾಜ ಬೊಮ್ಮಾಯಿ ಭಾವಚಿತ್ರಗಳಿಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಾಚರಣೆ ಮಾಡಲಾಯಿತು.

ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (ಕೋಚಿಮುಲ್) ವಿಭಜನೆಗೆ ಒಪ್ಪಿಗೆ ಕೊಡಲಾಗಿದೆ. ಈ ಮೂಲಕ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ. ಸುಧಾಕರ್ ಪ್ರಯತ್ನ ಫಲ ಕೊಟ್ಟಿದೆ.

 ಕೊರೊನಾದಿಂದಾಗಿ ಕೋಚಿಮುಲ್ ಗೆ 20 ಕೋಟಿ ರೂಪಾಯಿ ನಷ್ಟ ಕೊರೊನಾದಿಂದಾಗಿ ಕೋಚಿಮುಲ್ ಗೆ 20 ಕೋಟಿ ರೂಪಾಯಿ ನಷ್ಟ

ಚಿಕ್ಕಬಳ್ಳಾಪುರ ನಗರದ ಹೊರವಲಯದಲ್ಲಿರುವ ಮೆಗಾ ಡೈರಿ ಮುಂಭಾಗ ಸಚಿವ ಸುಧಾಕರ್, ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಎಸ್. ಟಿ. ಸೋಮಶೇಖರ್ ಭಾವಚಿತ್ರಗಳಿಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಾಚರಣೆ ಮಾಡಲಾಯಿತು.

ಡಿಸಿಸಿ ಬ್ಯಾಂಕ್ ರಮೇಶ್ ಕುಮಾರ್ ಅವರದ್ದಲ್ಲ; ಸುಧಾಕರ್ ಡಿಸಿಸಿ ಬ್ಯಾಂಕ್ ರಮೇಶ್ ಕುಮಾರ್ ಅವರದ್ದಲ್ಲ; ಸುಧಾಕರ್

 Split Of KOCHIMUL Celebration By BJP Workers At Chikkaballapur

ಚಿಕ್ಕಬಳ್ಳಾಪುರ ಜಿಲ್ಲೆ ರಚನೆಯಾಗಿ 15 ವರ್ಷಗಳಾದರೂ ಪ್ರತ್ಯೇಕ ಹಾಲು ಒಕ್ಕೂಟ ಅಸ್ಥಿತ್ವಕ್ಕೆ ಬಂಧಿರಲಿಲ್ಲ.ಇನ್ನೂ ಇದರ ಕುರಿತು ಸಚಿವ ಸುಧಾಕರ್ ಹಾಗೂ ಶ್ರೀನಿವಾಸಪುರ ಕ್ಷೇತ್ರದ ಶಾಸಕ ರಮೇಶ್ ಕುಮಾರ್ ನಡುವೆ ವಾಗ್ವಾದ ನಡೆಯುತ್ತಿತ್ತು. ಈಗ ಸಚಿವ ಸಂಪುಟ ಸಭೆಯಲ್ಲಿ ಕೋಚಿಮುಲ್ ವಿಭಜನೆಗೆ ಅನುಮೋದನೆ ನೀಡಲಾಗಿದೆ.

ಚಿಕ್ಕಬಳ್ಳಾಪುರ ಏಳ್ಗೆಗಾಗಿ ಸುಧಾಕರ್ ಕೈಗೊಂಡ ದೆಹಲಿ ಪ್ರವಾಸ ಯಶಸ್ಸು ಚಿಕ್ಕಬಳ್ಳಾಪುರ ಏಳ್ಗೆಗಾಗಿ ಸುಧಾಕರ್ ಕೈಗೊಂಡ ದೆಹಲಿ ಪ್ರವಾಸ ಯಶಸ್ಸು

ನಂದಿ ಕ್ರಾಸ್ ಬಳಿ ಇರುವ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಒಕ್ಕೂಟ ನಿಗಮದ ಎದುರು ಬಿಜೆಪಿ ಕಾರ್ಯಕರ್ಯತರು ವಿಜಯೋತ್ಸವ ಆಚರಿಸಿದ್ದಾರೆ. ಇದೇ ವೇಳೆ ಮಾತನಾಡಿದ ಸಚಿವ ಸುಧಾಕರ್, "ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿಭಜನೆಯನ್ನು ತಡೆದಿದ್ದರು. ಎರಡು ಜಿಲ್ಲೆಗಳನ್ನು ತನ್ನ ಕಪಿ ಮುಷ್ಟಿಯಲ್ಲಿ ಇಟ್ಟುಕೊಂಡು ಲಾಭಮಾಡಿಕೊಳ್ಳುವ ಉದ್ದೇಶದಿಂದ ಮಾಡಿದ್ದಾರೆ" ಎಂದು ದೂರಿದರು.

"ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 15 ವರ್ಷಗಳಾಗಿದೆ. ಸಚಿವ ಸಂಪುಟದಲ್ಲಿ ಕೊಚಿಮುಲ್ ವಿಭಜನೆಗೆ ಅನುಮೋದನೆ ಸಿಕ್ಕಿದೆ. ಆದರೆ ಈಗ ಚಾಕರ ಎತ್ತುತ್ತಿದ್ದಾರೆ, ಶಕುನಿ ಬುದ್ದಿಯನ್ನು ತೋರುತ್ತಿದ್ದಾರೆ. ನಮ್ಮ ಜಿಲ್ಲೆಯಲ್ಲೂ ಶಕುನಿ ಬುದ್ದಿಯನ್ನು ಹೊಂದಿರುವ ಶಾಸಕ ಶಿವಶಂಕರ್ ರೆಡ್ಡಿ ತಕರಾರು ಮಾಡುತ್ತಿದ್ದಾರೆ. ಅವರು ಸಚಿವರಿದ್ದಾಗ ಅವರೇ ವಿಭಜನೆಗೆ ಅನುಮೋದನೆ ನೀಡಿದ್ದರು. ಈಗ ಬೇಡ ಎನ್ನುತ್ತಿದ್ದಾರೆ" ಎಂದು ಆರೋಪಿಸಿದರು.

"ಇವತ್ತು ಸುಧಾಕರ್‌ಗೆ ಎಲ್ಲಿ ಹೆಸರು ಬರುತ್ತದೆಯೋ ಎಂಬ ಭಯದಿಂದ ಈ ರೀತಿ ಮಾಡುತ್ತಿದ್ದಾರೆ. ಎರಡು ಜಿಲ್ಲೆಗಳನ್ನು ತನ್ನ ಕಪಿ ಮುಷ್ಟಿಯಿಂದ ಇಟ್ಟುಕೊಳ್ಳಲು ರಮೇಶ್ ಕುಮಾರ್ ಇಂತಹ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಒಂದು ವಿಕೇಟ್ ಹೋಗಿದೆ. ಶ್ರೀನಿವಾಸಗೌಡರು ಒಂದು ಸಾರೀ ಮೋಸ ಹೋಗಿದ್ದಾರೆ, ಮತ್ತೇ ಈಗ ನಂಬುತ್ತಿದ್ದಾರೆ" ಎಂದರು.

"ಸಾಕಷ್ಟು ಭ್ರಷ್ಟಚಾರ ನಡೆದಿದೆ, ಇದರ ಬಗ್ಗೆ ತನಿಖೆ ನಡೆದಿದೆ. ನಾನು ಇದನ್ನು ಸಹಿಸಿಕೊಳ್ಳು ಸಾಧ್ಯವಿಲ್ಲ. ಸರ್ಕಾರ ತನಿಖೆ ನಡೆಸಿ ಶಿಕ್ಷೆ ನೀಡಲಿದೆ. ನ್ಯಾಯಾಲಯದ ಮೂಲಕ ತನಿಖೆಗೆ ಸ್ಟೇ ತರುತ್ತಿದ್ದಾರೆ. ಇದರಿಂದ ಗೊತ್ತಾಗಲಿದೆ ಎಷ್ಟು ಭ್ರಷ್ಟಾಚಾರ ನಡೆದಿದೆ ಎಂದು. 100ಕ್ಕೆ 100 ಭಾರೀ ಇದರಲ್ಲಿ ರಮೇಶ್ ಕುಮಾರ್ ಭಾಗಿಯಾಗಿದ್ದಾರೆ" ಎಂದು ಹೇಳಿದರು.

"ಎರಡು ಜಿಲ್ಲೆಗಳನ್ನು ತಮ್ಮ ಕಪಿ ಮುಷ್ಟಿಯಲ್ಲಿ ಇಟ್ಟುಕೊಳ್ಳುವ ಸಲುವಾಗಿ ಕೆ. ಎಚ್. ಮುನಿಯಪ್ಪನವರನ್ನು ಸೋಲಿಸಿದರು. ಅವರದೇ ಪಕ್ಷ ಇದ್ದರು ಯಾಕೇ ಸೋಲಿಸಿದರು?" ಎಂದು ಸಚಿವ ಕೆ. ಸುಧಾಕರ್ ಪ್ರಶ್ನಿಸಿದರು.

ಕೋಚಿಮುಲ್ ಕುರಿತು; ಕೇಂದ್ರದ ಮಾಜಿ ಸಚಿವ ದಿ. ಎಂ. ವಿ. ಕೃಷ್ಣಪ್ಪ ಪ್ರಯತ್ನದಿಂದ 1987ರ ಏಪ್ರಿಲ್ 1ರಂದು ಕೋಚಿಮುಲ್ ಸ್ಥಾಪನೆಯಾಗಿತ್ತು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಯಾವುದೇ ಶಾಶ್ವತ ನದಿ, ನಾಲೆಗಳಿಲ್ಲದ ಬಯಲುಸೀಮೆ ಪ್ರದೇಶವಾಗಿದೆ. ಈ ಜಿಲ್ಲೆಗಳ ರೈತರು ಕೇವಲ ಮಳೆಯಾಶ್ರಿತ ಬೇಸಾಯ ಮಾಡುತ್ತಿರುವವರಾಗಿದ್ದು, ಇಂದು ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಕೋಲಾರ ಜಿಲ್ಲೆಯನ್ನು ಬೆಂಗಳೂರು ಒಕ್ಕೂಟದಿಂದ ಬೇರ್ಪಡಿಸಿ 27/3/1987ರಂದು ಕೋಲಾರ ಒಕ್ಕೂಟವನ್ನು ನೋಂದಾಯಿಸಲಾಯಿತು. 1/4/1987 ರಿಂದ ಕೋಚಿಮುಲ್ ಕಾರ್ಯಾಚರಣೆ ನಡೆಸುತ್ತಿದೆ.

ಒಕ್ಕೂಟದ ವ್ಯಾಪ್ತಿಯು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಸೀಮಿತವಾಗಿದ್ದು ಎರಡು ಜಿಲ್ಲೆಗಳ 11 ತಾಲ್ಲೂಕುಗಳಲ್ಲಿನ 2,919 ಗ್ರಾಮಗಳನ್ನು ಒಳಗೊಂಡಿರುತ್ತದೆ. ಕೋಮುಲ್ ಮುಖ್ಯಡೇರಿಯು 4 ಲಕ್ಷ ಲೀಟರ್ ಹಾಲಿನ ಸಂಸ್ಕರಣೆ ಮಾಡುವ ಸಾಮರ್ಥ್ಯ ಹೊಂದಿದೆ. ಚಿಂತಾಮಣಿ, ಸಾದಲಿ ಮತ್ತು ಗೌರಿಬಿದನೂರು ಪ್ರದೇಶಗಳಲ್ಲಿ ತಲಾ 1 ಲಕ್ಷ ಲೀ. ಸಂಸ್ಕರಣೆ ಸಾಮರ್ಥ್ಯದ ಶೀಥಲ ಕೇಂದ್ರಗಳನ್ನು ಹೊಂದಿರುತ್ತದೆ.

ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರ ಹಿತದೃಷ್ಟಿಯಿಂದ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಬಲ್ಕ್ ಮಿಲ್ಕ್ ಕೂಲರ್‌ಗಳನ್ನು ಅನುಷ್ಟಾನಗೊಳಿಸಿದ ಒಕ್ಕೂಟ, ನಂದಿನಿ ಬ್ರ್ಯಾಂಡ್ ಅಡಿ ದೇಶಾದ್ಯಂತ ಮಾರಾಟವಾಗುತ್ತಿರುವ 'ಗುಡ್‍ಲೈಫ್' ಹಾಲು ಉತ್ಪಾದನೆ ಕೈಗೊಂಡ ಪ್ರಥಮ ಒಕ್ಕೂಟ ಇದಾಗಿದೆ.

2010ರಲ್ಲಿ ಚಿಕ್ಕಬಳ್ಳಾಪುರದ ನಂದಿ ಕ್ರಾಸ್ ಬಳಿ 3 ಲಕ್ಷ ಲೀಟರ್ ಸಂಸ್ಕರಣಾ ಸಾಮರ್ಥ್ಯದ ನೂತನ ಮೆಗಾಡೇರಿ ಕಾರ್ಯಾರಂಭ ಮಾಡಿದೆ. ಈ ಘಟಕದಲ್ಲಿ ಯು.ಹೆಚ್.ಟಿ. ಫ್ಲೆಕ್ಸಿ ಪ್ಯಾಕ್ ಹಾಲು ಮತ್ತು ಪನ್ನೀರ್ ಉತ್ಪಾದನಾ ಘಟಕವನ್ನು ನಿರ್ಮಿಸಲಾಗಿದೆ.

Recommended Video

ಸೆಹ್ವಾಗ್ ಹೇಳಿದ ಭಾರತದ ಉಪನಾಯಕ ವೇಗದ ಬೌಲರ್ ಯಾರು? | Oneindia Kannada

English summary
Celebration by BJP workers after Karnataka government approved to split Kolar-Chikkaballapur District Co-operative Milk Producers Union Limited (Kochimul).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X