• search
  • Live TV
ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿಕ್ಕಬಳ್ಳಾಪುರ: ಬಾವಿಗೆ ಬಿದ್ದು ಮೆದುಳು ನಿಷ್ಕ್ರಿಯಗೊಂಡ ಮೇಘಾ ಅಂಗಾಂಗ ದಾನ

|
Google Oneindia Kannada News

ಚಿಕ್ಕಬಳ್ಳಾಪುರ, ಏಪ್ರಿಲ್ 21: ಚಿಕ್ಕಬಳ್ಳಾಪುರದಲ್ಲಿ ಅಕಾಲಿಕ ಮರಣ ಹೊಂದಿರುವ ಪಿಯುಸಿ ವಿದ್ಯಾರ್ಥಿನಿ ಮೇಘಾ ಎಂಬುವವರ ಅಂಗಾಂಗ ದಾನ ಮಾಡುವುದಕ್ಕೆ ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ ಎಂದು ಆರೋಗ್ಯ ಸಚಿವ ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ.

ಕಳೆದ ಏಪ್ರಿಲ್ 20ರಂದು ಚಿಕ್ಕಬಳ್ಳಾಪುರ ಪಿಯು ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿನಿಯಾಗಿದ್ದ ಮೇಘಾ ತೆರೆದ ಬಾವಿಗೆ ಬಿದ್ದಿದ್ದರು. ಈ ವೇಳೆ ವಿದ್ಯಾರ್ಥಿನಿಯ ಮೆದುಳು ನಿಷ್ಕ್ರಿಯಗೊಂಡಿದೆ. ಈ ವಿಷಯವನ್ನು ಕೇಳಿ ಮನಸಿಗೆ ತುಂಬಾ ಬೇಸರವಾಗುತ್ತದೆ.

ಕೋಲಾರದ ಯುವತಿ ಅಂಗಾಂಗ ದಾನ: ಏಳು ಜನರ ಬದುಕಿನ ನವ'ಚೈತ್ರ'ಕೋಲಾರದ ಯುವತಿ ಅಂಗಾಂಗ ದಾನ: ಏಳು ಜನರ ಬದುಕಿನ ನವ'ಚೈತ್ರ'

ಪಿಯುಸಿ ವಿದ್ಯಾರ್ಥಿನಿ ದಿವಂಗತ ಮೇಘಾ ಅವರ ಅಂಗಾಂಗ ದಾನ ಮಾಡುವುದಕ್ಕೆ ಕುಟುಂಬ ಸದಸ್ಯರು ನಿರ್ಧರಿಸಿರುವುದು ಬಹಳ ಉದಾತ್ತ ಯೋಜನೆ ಆಗಿದೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ.

ಕುಟುಂಬಕ್ಕಾಗಿ ಸುಧಾಕರ್ ಪ್ರಾರ್ಥನೆ:
"ಮೇಘಾ ತನ್ನ ಹೆತ್ತವರು ಮತ್ತು ಒಬ್ಬ ಚಿಕ್ಕ ಸಹೋದರನನ್ನು ಅಗಲಿದ್ದಾಳೆ. ಇದು ಮಾತಿನಲ್ಲಿ ಹೇಳಲಾಗದಷ್ಟು ನಷ್ಟವಾಗಿದೆ. ಇಂತಹ ಕಷ್ಟದ ಸಮಯದಲ್ಲಿ ಅವರ ಕುಟುಂಬಕ್ಕೆ ಈ ನೋವನ್ನು ಸಹಿಸಿಕೊಳ್ಳುವ ಧೈರ್ಯ ಮತ್ತು ಶಕ್ತಿಯನ್ನು ನೀಡಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ. ಅವ್ಯವಸ್ಥೆಯ ನಡುವೆ ಅವರ ಸಹೃದಯತೆ ಮತ್ತು ಸದ್ಭಾವನೆಗೆ ಒಂದು ದೊಡ್ಡ ನಮಸ್ಕಾರ. ಅವರ ಕಾರ್ಯಗಳು ಮತ್ತೊಂದು ಕುಟುಂಬಕ್ಕೆ ಸಹಾಯ ಮಾಡುತ್ತದೆ. ಓಂ ಶಾಂತಿ," ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ.

English summary
Chikkaballapur: PUC student Megha Family decided to donate her organs, After her untimely passing
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X