ಚಿಕ್ಕಬಳ್ಳಾಪುರ; ನಂದಿ ಬೆಟ್ಟದ ಪ್ರವಾಸಿಗರ ಗಮನಕ್ಕೆ
ಚಿಕ್ಕಬಳ್ಳಾಪುರ, ಡಿಸೆಂಬರ್ 14: ಪ್ರತಿದಿನ ಮತ್ತು ವಾರಂತ್ಯದಲ್ಲಿ ಚಿಕ್ಕಬಳ್ಳಾಪುರದ ನಂದಿಬೆಟ್ಟಕ್ಕೆ ಬೆಂಗಳೂರು ನಗರದಿಂದಲೇ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ನಂದಿಗಿರಿಧಾಮದ ಮೇಲೆ ಮುಂಜಾನೆಯೇ ಸಂಚಾರ ದಟ್ಟಣೆ ಉಂಟಾಗಿರುತ್ತದೆ.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ನಂದಿಗಿರಿಧಾಮದ ಮೇಲೆ ಆಗುವ ಸಂಚಾರ ದಟ್ಟಣೆ ಕಡಿಮೆ ಮಾಡಲು ತೀರ್ಮಾನಿಸಿದೆ. ಅದಕ್ಕಾಗಿ ಬೆಟ್ಟದ ಮೇಲೆ ಖಾಸಗಿ ವಾಹನಗಳನ್ನು ಬೆಟ್ಟದ ಮೇಲೆ ತೆರಳದಂತೆ ನಿರ್ಬಂಧ ವಿಧಿಸಲಾಗುತ್ತದೆ.
ಕೆಮ್ಮಣ್ಣಗುಂಡಿ, ನಂದಿ ಗಿರಿಧಾಮ ಪ್ರವಾಸೋದ್ಯಮ ಇಲಾಖೆಗೆ
ನಂದಿಗಿರಿಧಾಮ ಕ್ರಾಸ್ನಲ್ಲಿ ಪಾರ್ಕಿಂಗ್ ಲಾಟ್ ನಿರ್ಮಾಣ ಮಾಡಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಇಲ್ಲಿ ಖಾಸಗಿ ವಾಹನಗಳನ್ನು ಜನರು ನಿಲ್ಲಿಸಿ ಕೆಎಸ್ಆರ್ಟಿಸಿ ಬಸ್ಗಳ ಮೂಲಕ ಬೆಟ್ಟದ ಮೇಲೆ ತೆರಳಬೇಕು.
ಆಸ್ತಿಕ-ನಾಸ್ತಿಕರ ಸೆಳೆಯುವ ಒಡ್ಡುಗಲ್ಲು ರಂಗಸ್ವಾಮಿ ಬೆಟ್ಟ
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್. ಲತಾ ಈ ಕುರಿತು ಮಾಹಿತಿ ನೀಡಿದ್ದಾರೆ. "ನಂದಿ ಬೆಟ್ಟದ ಮೇಲೆ ವಾಹನ ಸಂಚಾರ ದಟ್ಟಣೆ ತಪ್ಪಿಸಲು ತೀರ್ಮಾನಿಸಲಾಗಿದೆ. ಪಾರ್ಕಿಂಗ್ ಲಾಟ್ ನಿರ್ಮಾಣ ಮಾಡಲು 3.5 ಎಕರೆ ಜಾಗವನ್ನು ಗುರುತಿಸಲಾಗಿದೆ" ಎಂದು ಹೇಳಿದ್ದಾರೆ.
ನಂದಿ ಬೆಟ್ಟದ ನಿರ್ಬಂಧ ತೆರವು; 6 ಗಂಟೆಗೆ ಪ್ರವೇಶ
"ಪಾರ್ಕಿಂಗ್ ಲಾಟ್ ನಿರ್ಮಾಣದ ಬಗ್ಗೆ ತೋಟಗಾರಿಕಾ ಇಲಾಖೆಗೆ ವಿವರವಾದ ಯೋಜನಾ ವರದಿಯನ್ನು ತಯಾರು ಮಾಡಿ ಕಳಿಸಲಾಗಿದೆ. ಮೊದಲ ಹಂತದಲ್ಲಿ ವಾರಂತ್ಯದಲ್ಲಿ ಮಾತ್ರ ವಾಹನಗಳನ್ನು ನಿಷೇಧಿಸಲಾಗುತ್ತದೆ" ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ನಂದಿಬೆಟ್ಟದ ಮೇಲೆ ವಾರಾಂತ್ಯದಲ್ಲಿ 5 ರಿಂದ 10 ಸಾವಿರ ವಾಹನಗಳು ಬರುತ್ತವೆ. ಪ್ರತಿದಿನ 500 ವಾಹನಗಳು ಬರುತ್ತವೆ. ಮುಂಜಾನೆಯೇ ಸಂಚಾರ ದಟ್ಟಣೆ ಉಂಟಾಗುತ್ತದೆ. ಇದನ್ನು ತಪ್ಪಿಸಲು ಜಿಲ್ಲಾಡಳಿತ ಯೋಜನೆ ರೂಪಿಸಿದೆ.
ಚಾಮರಾಜನಗರದ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿಯೂ ಸಹ ವಾಹನಗಳನ್ನು ನಿಷೇಧಿಸಲು ಪ್ರಸ್ತಾಪವಿದೆ. ಬೆಟ್ಟದ ಕೆಳಗೆ ವಾಹನಗಳನ್ನು ನಿಲ್ಲಿಸಿ, ಕೆಎಸ್ಆರ್ಟಿಸಿ ಬಸ್ ಮೂಲಕ ಬೆಟ್ಟಕ್ಕೆ ಪ್ರಯಾಣ ಮಾಡುವ ಪ್ರಸ್ತಾಪವಿದೆ. ನಂದಿಗಿರಿಧಾಮದಲ್ಲಿಯೂ ಇದೇ ಮಾದರಿ ಜಾರಿಗೆ ತರಲಾಗುತ್ತದೆ.
ಈ ವರ್ಷ ನಂದಿಬೆಟ್ಟಕ್ಕೆ 1 ಕೋಟಿ ಪ್ರಯಾಣಿಕರು ಭೇಟಿ ನೀಡಿದ್ದಾರೆ. ಬೆಂಗಳೂರು ನಗರಕ್ಕೆ ನಂದಿಗಿರಿಧಾಮ ಹತ್ತಿರದಲ್ಲಿ ಇರುವುದರಿಂದ ನಗರದ ಪ್ರವಾಸಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.
ಭಾರತದಲ್ಲೇ 262 ಮಿಲಿಯನ್ ಜಾಕ್ ಪಾಟ್ ಗೆಲ್ಲಲು ಅವಕಾಶ!