ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದಿನಿಂದ ನಂದಿ ಬೆಟ್ಟಕ್ಕೆ ಮುಕ್ತ ಅವಕಾಶ: ಮಾಸ್ಕ್ ಇಲ್ಲದಿದ್ದರೆ ನೋ ಎಂಟ್ರಿ

|
Google Oneindia Kannada News

ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 7: ಚಿಕ್ಕಬಳ್ಳಾಪುರ ತಾಲೂಕು ನಂದಿ ಗ್ರಾಮದ ಬಳಿಯ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಇಂದಿನಿಂದ ಪ್ರವಾಸಿಗರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಆದರೆ ಮಾಸ್ಕ್ ಧರಿಸದಿದ್ದರೆ ನಂದಿಹಿಲ್ಸ್ ಪ್ರವೇಶ ಮಾಡಲು ಬಿಡುವುದಿಲ್ಲ.

Recommended Video

Coronaಗೆ ಜನರು ಹಿಂದೆ ಕೊಡುತ್ತಿದ್ದ ಮರ್ಯಾದೆ ಈಗ ಕೊಡುತ್ತಿಲ್ಲ | Oneindia Kannada

ಕೊರೊನಾ ವೈರಸ್ ಭೀತಿಯಿಂದ ಮಾರ್ಚ್ 14 ರಿಂದ ನಂದಿ ಗಿರಿಧಾಮಕ್ಕೂ ಲಾಕ್ ಡೌನ್ ನಿಂದ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಆದರೆ ಇಂದು ಬೆಳಗ್ಗೆ 8 ಗಂಟೆಯಿಂದ ಪ್ರವಾಸಿಗರ ಪ್ರವೇಶಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮುಕ್ತ ಅವಕಾಶ ನೀಡಿದೆ.

ಮುಳ್ಳಯ್ಯನಗಿರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರೋ ಪ್ರವಾಸಿಗರುಮುಳ್ಳಯ್ಯನಗಿರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರೋ ಪ್ರವಾಸಿಗರು

ನಂದಿ ಗಿರಿಧಾಮಕ್ಕೆ ಪ್ರವೇಶ ಅವಕಾಶ ಕಲ್ಪಿಸಿದ ಬೆನ್ನಲ್ಲೇ ನಂದಿಗಿರಿಧಾಮದ ತಪ್ಪಲಿನ ಚೆಕ್ ಪೋಸ್ಟ್ ಬಳಿ ಹೆಚ್ಚು ಸಂಖ್ಯೆಯ ಪ್ರವಾಸಿಗರು ಜಮಾಯಿಸಿದ್ದಾರೆ. ಕಾರು ಹಾಗೂ ಬೈಕ್ ಗಳಲ್ಲಿ ಬಂದಿರುವ ನೂರಾರು ಮಂದಿ ಪ್ರವಾಸಿಗರು ನಂದಿಗಿರಿಧಾಮ ಪ್ರವೇಶಕ್ಕೆ ಕಾದಿದ್ದಾರೆ. ಆದರೆ ಮಾಸ್ಕ್ ಧರಿಸದೆ ಬಂದವರನ್ನು ಪೊಲೀಸರು ವಾಪಾಸ್ಸು ಕಳುಹಿಸುತ್ತಿದ್ದಾರೆ.

Chikkaballapura: Only People Wearing A Mask Will Be Allowed Entry To Nandi Hills

ಪೊಲೀಸರು ನಂದಿಗಿರಿಧಾಮದ ತಪ್ಪಲಿನ ಚೆಕ್ ಪೋಸ್ಟ್ ಬಳಿಯೇ ತಪಾಸಣೆ ಮಾಡಿ ವಾಪಸ್ ಕಳುಹಿಸುತ್ತಿದ್ದಾರೆ. ನಂದಿಗಿರಿಧಾಮದ ದ್ವಾರ ಬಾಗಿಲಿನಲ್ಲಿಯೇ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಈ ಮೂಲಕ ಪ್ರವಾಸಿಗರಿಗೆ ಒಳಗೆ ಹೋಗಲು ಅನುಮತಿ ನೀಡಲಾಗುತ್ತಿದೆ.

English summary
The world famous Nandi Hill near Chikkaballapur Taluk Nandi Village is open for tourists from today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X