ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ ವರ್ಷಾಚರಣೆ: ಡಿ.30ರಿಂದ ಜ.2ರವರೆಗೆ ಚಿಕ್ಕಬಳ್ಳಾಪುರದ ನಂದಿ ಬೆಟ್ಟಕ್ಕೆ ಪ್ರವೇಶ ನಿಷೇಧ

|
Google Oneindia Kannada News

ಚಿಕ್ಕಬಳ್ಳಾಪುರ, ಡಿಸೆಂಬರ್ 24: ರಾಜ್ಯದಾದ್ಯಂತ ಹೊಸ ವರ್ಷಾಚರಣೆಗೆ ರಾಜ್ಯ ಸರ್ಕಾರ ನಿರ್ಬಂಧ ಹೇರಿದ್ದು, ಡಿಸೆಂಬರ್ 30ರಿಂದ ಜನವರಿ 2ರವರೆಗೆ ಬಹಿರಂಗವಾಗಿ ಗುಂಪು ಗುಂಪಾಗಿ ಜನ ಸೇರುವುದನ್ನು ನಿರ್ಬಂಧಿಸಲಾಗಿದೆ. ಜೊತೆಗೆ ಈ ಸಮಯದಲ್ಲಿ ಜನ ಗುಂಪುಗೂಡಿ ಪಾರ್ಟಿಗಳನ್ನು ಮಾಡುವಂತಿಲ್ಲ ಎಂದು ತಿಳಿಸಿದೆ.

ಇದೇ ವೇಳೆ ಅಪಾರ್ಟ್‌ಮೆಂಟ್‌ಗಳಲ್ಲಿ ಡಿಜೆ ಪಾರ್ಟಿ ಮಾಡುವಂತಿಲ್ಲ. ಕ್ಲಬ್‌ಗಳಲ್ಲಿ ಸ್ಪೆಷಲ್ ಈವೆಂಟ್ ಮಾಡಲು ಶೇ.50ರಷ್ಟು ಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಕೋವಿಡ್ ಪರಿಸ್ಥಿತಿ ನೋಡಿಕೊಂಡು ಪ್ರಮುಖ ಜಿಲ್ಲೆಗಳಲ್ಲಿ ಹೊಸ ವರ್ಷಾಚರಣೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಆಯಾ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.

Chikkaballapur: New year celebration banned in Nandi hills

ಡಿ.30ರಿಂದ ನಂದಿ ಬೆಟ್ಟ ಪ್ರವೇಶ ನಿರ್ಬಂಧ
ಹೊಸ ವರ್ಷದ ದಿನದಂದು ಪ್ರಸಿದ್ಧ ಪ್ರವಾಸಿ ತಾಣ ನಂದಿ ಗಿರಿಧಾಮಕ್ಕೆ ಬಂದು ಮೋಜು ಮಸ್ತಿ ಮಾಡಿ ಹರುಷದಿಂದ ಹೊಸ ವರ್ಷವನ್ನು ಬರ ಮಾಡಿಕೊಳ್ಳುತ್ತಿದ್ದ ಪ್ರವಾಸಿಗರಿಗೆ ಹಾಗೂ ಯುವ ಪ್ರೇಮಿಗಳಿಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಶಾಕ್ ನೀಡಿದೆ. ನಂದಿ ಗಿರಿಧಾಮದಲ್ಲಿ ಹೊಸ ವರ್ಷಾಚರಣೆ ನಿಷೇಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್. ಲತಾ ಆದೇಶ ಹೊರಡಿಸಿದ್ದಾರೆ.

ಡಿಸೆಂಬರ್ 30ರ ಸಂಜೆ 6 ಗಂಟೆಯಿಂದ ಜನವರಿ 2ರ ಬೆಳಗ್ಗೆ 6ರವರೆಗೂ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಹೊಸ ವರ್ಷಾಚರಣೆ ದಿನದಂದು ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

2022ರ ಜನವರಿ 1ರ ಹೊಸ ವರ್ಷದ ದಿನಾಚರಣೆಯ ಸಂಬಂಧವಾಗಿ, ಚಿಕ್ಕಬಳ್ಳಾಪುರ ತಾಲೂಕಿನ ಪ್ರಸಿದ್ಧ ಪ್ರವಾಸಿ ಸ್ಥಳವಾದ ನಂದಿ ಬೆಟ್ಟಕ್ಕೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆ ಹಾಗೂ ಇನ್ನಿತರೆ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಸಾಧ್ಯತೆ ಇರುತ್ತದೆ.

ಕೋವಿಡ್-19 ರೂಪಾಂತರಿ ಓಮಿಕ್ರಾನ್ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಗಳೂ ಇರುವುದರಿಂದ, ಪರಿಸರವನ್ನು ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಡಿ.31ರ ಮಧ್ಯರಾತ್ರಿ ಹಾಗೂ 2022ರ ಜನವರಿ 1ರಂದು ನಂದಿ ಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Chikkaballapur: New year celebration banned in Nandi hills

ಬೆಂಗಳೂರಿನಲ್ಲೂ ಅದ್ಧೂರಿ ಆಚರಣೆಯಿಲ್ಲ
ಪ್ರತೀ ವರ್ಷ ಹೊಸ ವರ್ಷದ ದಿನದಿಂದು ಬೆಂಗಳೂರಿನ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಹೊಸ ವರ್ಷಾಚರಣೆಯನ್ನು ಅದ್ಧೂರಿಯಾಗಿ ಮಾಡಲಾಗುತ್ತಿತ್ತು. ರಸ್ತೆಗಳು ಮಾತ್ರವಲ್ಲದೇ ಅಂಗಡಿಗಳು ಶಾಪಿಂಗ್ ಮಾಲ್‌ಗಳು ಗ್ರಾಹಕರನ್ನು ಆಕರ್ಷಕ ವಿದ್ಯುತ್ ದೀಪಗಳಿಂದ ಸೆಳೆಯುತ್ತಿದ್ದವು. ಆದರೆ ಕೋವಿಡ್ ಕಾರಣದಿಂದ ಈ ಬಾರಿ ಅಲಂಕಾರಿಕ ಬೀದಿ ದೀಪಗಳನ್ನು ಹಾಕುವುದನ್ನು ಕೈಬಿಡಲಾಗಿದೆ.

ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷಾಚರಣೆಗೆ ಅನುಮತಿ ನೀಡುವ ಬಗ್ಗೆ ಸರ್ಕಾರ ಇನ್ನೂ ನಿರ್ಧಾರ ತೆಗೆದುಕೊಳ್ಳದಿದ್ದರೂ, ಬ್ರಿಗೇಡ್ ರಸ್ತೆಯ ಅಂಗಡಿಗಳು ಮತ್ತು ಸಂಸ್ಥೆಗಳ ಸಂಘದ ಸದಸ್ಯರು ಈಗಾಗಲೇ ಹೊಸ ವರ್ಷವನ್ನು ಆಚರಿಸದಿರಲು ನಿರ್ಧಾರ ಕೈಗೊಂಡಿದ್ದಾರೆ.

ಹೊಸ ವರ್ಷದ ಮುನ್ನವೇ ಈ ವರ್ಷ ಯಾವುದೇ ಆಚರಣೆಗಳಿಲ್ಲ. ಜನರ ಆರೋಗ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡಿ, ಓಮಿಕ್ರಾನ್ ರೂಪಾಂತರದ ಉಲ್ಬಣದೊಂದಿಗೆ, ಸಂಘವು ಡಿಸೆಂಬರ್ 15 ರಿಂದ ಪ್ರಾರಂಭವಾಗುತ್ತಿದ್ದ ಬೀದಿ ದೀಪಗಳ ಸಾಂಪ್ರದಾಯಿಕ ಅಭ್ಯಾಸವನ್ನು ಕೈಬಿಟ್ಟಿದೆ.

Recommended Video

Sports Flashback 2021 Episode 03 | Top 5 best moments | Oneindia Kannada

English summary
Chikkaballapur: New year celebration banned in Nandi hills. The entry of visitors banned from 6 pm on December 30 to 6 pm on January 2. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X