ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಸೆಂಬರ್ 9 ರ ನಂತರ ರಾಜ್ಯದಲ್ಲಿ ಹೊಸ ಸರ್ಕಾರ: ಡಿ.ಕೆ.ಶಿವಕುಮಾರ್

|
Google Oneindia Kannada News

ಚಿಕ್ಕಬಳ್ಳಾಪುರ, ನವೆಂಬರ್ 28: ಡಿ.ಕೆ.ಶಿವಕುಮಾರ್ ಅವರು ಚಿಕ್ಕಬಳ್ಳಾಪುರ ಕ್ಷೇತ್ರ ಉಪಚುನಾವಣೆಗೆ ಇಂದು ಪ್ರಚಾರ ನಡೆಸಿದರು.

ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, 'ಡಿಸೆಂಬರ್ 9 ರನಂತರ ರಾಜ್ಯದಲ್ಲಿ ಹೊಸ ಸರ್ಕಾರ ರಚನೆ ಆಗಲಿದೆ. ಬಿಜೆಪಿ ಸರ್ಕಾರ ಉರುಳಲಿದೆ, ಕರ್ನಾಟಕ ರಾಜಕೀಯ ಶುದ್ಧೀಕರಣ ಆಗಲಿದೆ' ಎಂದು ಭವಿಷ್ಯ ನುಡಿಸಿದ್ದಾರೆ.

'ಮೈತ್ರಿ ಸರ್ಕಾರಕ್ಕೆ ದ್ರೋಹ ಬಗೆದ ಅನರ್ಹ ಶಾಸಕರ ಕತೆ ಉಪಚುನಾವಣೆಯಲ್ಲಿ ಮುಗಿಯುತ್ತದೆ. ಉಪಚುನಾವಣೆ ನಂತರ ರಾಜ್ಯದಲ್ಲಿ ಹೊಸ ಸರ್ಕಾರ ಅಸ್ಥಿತ್ವಕ್ಕೆ ಬರುತ್ತದೆ' ಎಂದು ಹೇಳಿದರು.

New Government Will Form After December 9 In Karnataka: DK Shivakumar

'ಯಡಿಯೂರಪ್ಪ ಅವರು ಆಮೀಷ ಒಡ್ಡಿ ಉಪಚುನಾವಣೆ ಗೆಲ್ಲಲು ಪ್ರಯತ್ನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಬಜೆಟ್ ಮಂಡಿಸಿದಂತೆ ಯಡಿಯೂರಪ್ಪ ಹಣದ ಆಮೀಷ ಒಡ್ಡುತ್ತಿದ್ದಾರೆ' ಎಂದು ಡಿ.ಕೆ.ಶಿವಕುಮಾರ್ ಆರೋಪ ಮಾಡಿದರು.

ಡಿ.ಕೆ.ಶಿವಕುಮಾರ್ ಅವರು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಉಪಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಆಂಜಿನಪ್ಪ ಪರವಾಗಿ ಮತಯಾಚನೆ ಮಾಡಿದರು. ನಂದಿ ಸೇರಿದಂತೆ ಹಲವು ಗ್ರಾಮಗಳು, ಪಟ್ಟಣಗಳಲ್ಲಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು.

English summary
Former minister DK Shivakumar said new government will form in Karnataka after December 09.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X