ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಂದಿಬೆಟ್ಟಕ್ಕೆ ಹೋಗಬೇಕೆಂದುಕೊಂಡವರಿಗೆ ಸಿಹಿ ಸುದ್ದಿ

By ಚಿಕ್ಕಬಳ್ಳಾಪುರ ಪ್ರತಿನಿಧಿ
|
Google Oneindia Kannada News

ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 2: ವಿಶ್ವವಿಖ್ಯಾತ ನಂದಿಗಿರಿಧಾಮ ಇದೇ ಸೆಪ್ಟೆಂಬರ್ 7ರಿಂದ ಪ್ರವಾಸಿಗರಿಗೆ ಮುಕ್ತವಾಗಲಿದೆ.

ಕೊರೊನಾ ಭೀತಿ ಹಿನ್ನೆಲೆಯಲ್ಲಿ ನಂದಿಬೆಟ್ಟಕ್ಕೆ ಪ್ರವಾಸಿಗರ ಪ್ರವೇಶವನ್ನು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ನಿರ್ಬಂಧಿಸಿತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನ್ ಲಾಕ್ 4.0 ಮಾರ್ಗಸೂಚಿ ಬಿಡುಗಡೆ ಮಾಡಿದ ನಂತರ ನಂದಿಬೆಟ್ಟಕ್ಕೆ ಹೇರಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸಲಾಗಿದೆ. ಇದೇ ಸೆ. 7ರಿಂದ ಪ್ರತಿದಿನ ಬೆಳಗ್ಗೆ 8ರಿಂದ ಸಂಜೆ 5 ಗಂಟೆಯವರೆಗೆ ಮಾತ್ರ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ನೀಡಿ ಸಮಯ ನಿಗದಿ ಮಾಡಿದೆ.

ನಂದಿ ಬೆಟ್ಟದಲ್ಲಿ ಇನ್ನು ಸೂರ್ಯೋದಯ ನೋಡುವ ಭಾಗ್ಯವಿಲ್ಲ!ನಂದಿ ಬೆಟ್ಟದಲ್ಲಿ ಇನ್ನು ಸೂರ್ಯೋದಯ ನೋಡುವ ಭಾಗ್ಯವಿಲ್ಲ!

ಅನುಮತಿ ನೀಡುವುದರೊಂದಿಗೆ ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ಕೆಲವು ನಿಯಮಗಳನ್ನು ಕಡ್ಡಾಯಗೊಳಿಸಲಾಗಿದೆ. ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ನಂದಿಬೆಟ್ಟದ ಚೆಕ್‍ಪೋಸ್ಟ್ ಬಳಿಯೇ ಮಾಸ್ಕ್ ಧರಿಸಿರುವ ಬಗ್ಗೆ ಪರಿಶೀಲಿಸಿ ಪ್ರವಾಸಿಗರಿಗೆ ಪ್ರವೇಶ ನೀಡಲಾಗುತ್ತದೆ. ಬೆಟ್ಟದಲ್ಲೂ ಮಾಸ್ಕ್ ಧರಿಸದೆ ಓಡಾಡಿದರೆ ದಂಡ ವಿಧಿಸಲಾಗುತ್ತದೆ.

Chikkaballapura: Nandi Hills Will Be Open To Tourists From September 7

ಬರೋಬ್ಬರಿ 5 ತಿಂಗಳ ನಂತರ ನಂದಿಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ಪುನರಾರಂಭವಾಗಲಿದೆ. ಪ್ರವಾಸಿಗರು 8 ಗಂಟೆಯ ನಂತರ ಬಂದು ನಂದಿಬೆಟ್ಟದ ಸೊಬಗನ್ನು ಸವಿಯುವಂತೆ ಡಿಸಿ ಆರ್.ಲತಾ ಮನವಿ ಮಾಡಿದ್ದಾರೆ.

English summary
The world famous Nandi hills will be open to tourists from September 7. The Chikkaballapur District administration has restricted the entry of tourists to Nandi hills in the wake of corona virus before
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X