• search
  • Live TV
ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಂದಿಬೆಟ್ಟಕ್ಕೆ ರೋಪ್ ವೇ; ದಶಕಗಳ ಕನಸಿನ ಯೋಜನೆ ಹೇಗಿರಲಿದೆ?

|
Google Oneindia Kannada News

ಚಿಕ್ಕಬಳ್ಳಾಪುರ, ಮಾರ್ಚ್ 06: ದಿನನಿತ್ಯ ನೂರಾರು ಪ್ರವಾಸಿಗರು, ವಾರಾಂತ್ಯ ಮತ್ತು ರಜೆ ದಿನಗಳಲ್ಲಿ ಸಾವಿರಾರು ಪ್ರವಾಸಿಗರು ಭೇಟಿ ನೀಡುವ ಪ್ರವಾಸಿ ತಾಣ ನಂದಿಬೆಟ್ಟ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಪ್ರವಾಸಿ ತಾಣ ಬೆಂಗಳೂರು ನಗರಕ್ಕೆ ಸಮೀಪದಲ್ಲಿದೆ.

ನಂದಿಬೆಟ್ಟವನ್ನು ಏರಲು ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲು ರೋಪ್‍ ವೇ ನಿರ್ಮಾಣ ಮಾಡಲು ಯೋಜನೆ ಬಗ್ಗೆ ಹಲವಾರು ವರ್ಷಗಳಿಂದ ಚರ್ಚೆ ನಡೆಯುತ್ತಿದೆ. ಪ್ರವಾಸೋದ್ಯಮ ಸಚಿವ ಸಿ. ಪಿ. ಯೋಗೇಶ್ವರ್ ಈ ಕುರಿತು ವಿಕಾಸಸೌಧದಲ್ಲಿ ಸಭೆ ನಡೆಸಿದರು.

ನಂದಿ ಬೆಟ್ಟದಲ್ಲಿ ಡಿ. 24ರಿಂದ ಪ್ಯಾರಾ ಗ್ಲೈಡಿಂಗ್ ಪ್ರಾರಂಭನಂದಿ ಬೆಟ್ಟದಲ್ಲಿ ಡಿ. 24ರಿಂದ ಪ್ಯಾರಾ ಗ್ಲೈಡಿಂಗ್ ಪ್ರಾರಂಭ

ಒಮ್ಮೆ 10 ಜನರು ಪ್ರಯಾಣಿಸಬಹುದಾದ ಕೇಬಲ್ ಕಾರ್ ವ್ಯವಸ್ಥೆ ಮಾಡುವ ಕುರಿತು ಚರ್ಚೆ ನಡೆಯಿತು. ಕೇಂದ್ರ ಜಲಸಾರಿಗೆ ಇಲಾಖೆಯು ಶೇ 20ರಷ್ಟು ಹಣವನ್ನು ಈ ರೋಪ್‍ ವೇ ಯೋಜನೆಗಾಗಿ ನೀಡಲಿದೆ.

ಚಿಕ್ಕಬಳ್ಳಾಪುರ; ನಂದಿ ಬೆಟ್ಟದ ಪ್ರವಾಸಿಗರ ಗಮನಕ್ಕೆ ಚಿಕ್ಕಬಳ್ಳಾಪುರ; ನಂದಿ ಬೆಟ್ಟದ ಪ್ರವಾಸಿಗರ ಗಮನಕ್ಕೆ

ನಟ ದಿ. ಶಂಕರ್‌ನಾಗ್ ನಂದಿ ಬೆಟ್ಟಕ್ಕೆ ರೋಪ್ ವೇ ನಿರ್ಮಿಸುವ ಯೋಜನೆಯನ್ನು ಪ್ರಸ್ತಾಪಿಸಿದ್ದರು. ಸುಮಾರು 30 ವರ್ಷಗಳಿಂದ ಯೋಜನೆ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಈ ಬಾರಿ ಇದು ಕಾರ್ಯರೂಪಕ್ಕೆ ಬರುವ ನಿರೀಕ್ಷೆ ಇದೆ.

ಕೆಮ್ಮಣ್ಣಗುಂಡಿ, ನಂದಿ ಗಿರಿಧಾಮ ಪ್ರವಾಸೋದ್ಯಮ ಇಲಾಖೆಗೆ ಕೆಮ್ಮಣ್ಣಗುಂಡಿ, ನಂದಿ ಗಿರಿಧಾಮ ಪ್ರವಾಸೋದ್ಯಮ ಇಲಾಖೆಗೆ

ಒಂದು ವರ್ಷದಲ್ಲಿ ಯೋಜನೆ ಪೂರ್ಣ

ಒಂದು ವರ್ಷದಲ್ಲಿ ಯೋಜನೆ ಪೂರ್ಣ

ಸಚಿವ ಯೋಗೇಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೆ. ಐಡೇಕ್ ಸಂಸ್ಥೆಯು ನಂದಿ ಬೆಟ್ಟಕ್ಕೆ ರೋಪ್‍ ವೇ ನಿರ್ಮಾಣ ಮಾಡುವ ಯೋಜನೆಯ ಪ್ರಾತ್ಯಕ್ಷಿಕೆಯನ್ನು ನೀಡಿತು. 2.90 ಕಿ.ಮೀ ಎತ್ತರವಿರುವ ನಂದಿ ಗಿರಿಧಾಮಕ್ಕೆ ರೋಪ್‍ ವೇ ನಿರ್ಮಿಸುವ ಯೋಜನೆಯನ್ನು ಒಂದು ವರ್ಷದಲ್ಲಿ ಪೂರ್ಣಗೊಳಿಸಬಹುದು ಎಂದು ಹೇಳಿತು.

ಪಾರ್ಕಿಂಗ್, ಶೌಚಾಲಯ ನಿರ್ಮಾಣ

ಪಾರ್ಕಿಂಗ್, ಶೌಚಾಲಯ ನಿರ್ಮಾಣ

ರೋಪ್ ವೇ ಯೋಜನೆ ಜೊತೆಗೆ ನಂದಿ ಬೆಟ್ಟದ ಕೆಳಗಡೆ ಅಂದಾಜು 25 ಎಕರೆ ಪ್ರದೇಶದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡುವುದು, ಫುಡ್‍ಕೋರ್ಟ್, ಶೌಚಾಲಯ, ಕರ್ನಾಟಕದ ಕಲೆ ಸಂಸ್ಕೃತಿಯನ್ನು ಬಿಂಬಿಸುವ ಮಳಿಗೆಗಳು ಸೇರಿದಂತೆ ಪ್ರವಾಸಿಗರಿಗೆ ಮೂಲಸೌಲಭ್ಯ ಕಲ್ಪಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.

ಭೂ ಸ್ವಾಧೀನಕ್ಕೆ ನಿರ್ದೇಶನ

ಭೂ ಸ್ವಾಧೀನಕ್ಕೆ ನಿರ್ದೇಶನ

ಯುರೋಪಿಯನ್ ತಂತ್ರಜ್ಞಾನ ಬಳಕೆ ಮಾಡಿದರೆ ರೋಪ್ ವೇ ಯೋಜನೆಗೆ 182 ರಿಂದ 240 ಕೋಟಿ ರೂ. ತನಕ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಯೋಜನೆ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕು ವ್ಯಾಪ್ತಿಯಲ್ಲಿ ಬರಲಿದ್ದು, ಭೂ ಸ್ವಾಧೀನಕ್ಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.

ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ

ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ

ಸಭೆಯಲ್ಲಿ ಮಾತನಾಡಿದ ಸಚಿವ ಸಿ. ಪಿ. ಯೋಗೇಶ್ವರ್, "ದೇಶದ ಇತರ ರಾಜ್ಯಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ರೋಪ್‌ ವೇ ಯೋಜನೆ ಕೈಗೊಳ್ಳಲಾಗಿದೆ. ಯಾವುದಾದರು ಒಂದು ಸಂಸ್ಥೆಯನ್ನು ಆಯ್ಕೆ ಮಾಡಿ ಯೋಜನೆ ಜಾರಿಗೊಳಿಸಲಾಗುತ್ತದೆ. ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಕೈಗೊಂಡರೆ ಒಂದು ವರ್ಷದಲ್ಲಿ ಪೂರ್ಣಗೊಳಿಸಬಹುದು" ಎಂದರು.

English summary
Tourism minister C.P. Yogeshwar chaired the meeting on the ropeway project and discussed about the progress. Nandi hills famous tourist place at Chikkaballapur district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X