ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾವಿಗೆ ಬಿದ್ದ ಮಕ್ಕಳು, ರಕ್ಷಿಸಲು ಹೋದ ತಾಯಿ ಸೇರಿ ಮೂವರ ಸಾವು

|
Google Oneindia Kannada News

ಚಿಕ್ಕಬಳ್ಳಾಪುರ, ಜೂನ್ 09 : ಬಾವಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ಹೋದ ತಾಯಿ ಸೇರಿದಂತೆ ಮೂವರು ಸಾವನ್ನಪಿದ ಧಾರುಣ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಮತ್ತೊಂದು ಕಡೆ ಚಾಮರಾಜನಗರದಲ್ಲಿ ಬೆಂಗಳೂರಿನ ಮೂವರು ಜಲಸಮಾಧಿಯಾಗಿದ್ದಾರೆ.

ಚಿಕ್ಕಬಳ್ಳಾಪುರದ ತಿಪ್ಪೇನಹಳ್ಳಿ ಗ್ರಾಮದಲ್ಲಿ ವಿಜಯಲಕ್ಷ್ಮೀ (30), ಅಜಯ್ (10), ಧನಲಕ್ಷ್ಮೀ (8) ಬಾವಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಬಟ್ಟೆ ತೊಳೆಯಲು ಗ್ರಾಮದ ಹೊರವಲಯದ ಮುನಿಯಪ್ಪ ಎಂಬುವವರ ಬಾವಿಗೆ ತೆರಳಿದ್ದಾಗ ಈ ಘಟನೆ ನಡೆದಿದೆ.

ದಿನೇದಿನೇ ಹೆಚ್ಚುತ್ತಿದೆ ನೀರಲ್ಲಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆದಿನೇದಿನೇ ಹೆಚ್ಚುತ್ತಿದೆ ನೀರಲ್ಲಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ

ಮೊದಲು ಮಗು ಕಾಲು ಜಾರಿ ಬಾವಿಗೆ ಬಿದ್ದಿದೆ. ಅದನ್ನು ರಕ್ಷಿಸಲು ಹೋದ ವಿಜಯಲಕ್ಷ್ಮೀ ಮತ್ತು ಮತ್ತೊಂದು ಮಗು ಸಹ ನೀರಿನಲ್ಲಿ ಮುಳುಗಿ ಮೃತಪಟ್ಟಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೆಂಗಳೂರಲ್ಲಿ ಮಹಿಳೆ ನಿಗೂಢ ಸಾವು ಪ್ರಕರಣಕ್ಕೆ ಹೊಸ ತಿರುವುಬೆಂಗಳೂರಲ್ಲಿ ಮಹಿಳೆ ನಿಗೂಢ ಸಾವು ಪ್ರಕರಣಕ್ಕೆ ಹೊಸ ತಿರುವು

Chikkaballapur

ಬಾವಿ ಬಳಿ ಬಂದ ವಿಜಯಲಕ್ಷ್ಮೀ ಅವರ ಪತಿ ಮಕ್ಕಳ ಚಪ್ಪಲಿ, ಬಟ್ಟೆ ನೋಡಿದ್ದಾರೆ. ಅಲ್ಲಿ ಯಾರೂ ಕಾಣದಿದ್ದಾಗ ಅನುಮಾನ ಬಂದು ಬಾವಿಯಲ್ಲಿ ನೋಡಿದಾಗ ಮೂವರ ಶವ ಪತ್ತೆಯಾಗಿದೆ.

ದಸರಾ ಆನೆ ದ್ರೋಣನ ಸಾವಿನ ಬಳಿಕ ಎಚ್ಚೆತ್ತ ಅರಣ್ಯ ಇಲಾಖೆದಸರಾ ಆನೆ ದ್ರೋಣನ ಸಾವಿನ ಬಳಿಕ ಎಚ್ಚೆತ್ತ ಅರಣ್ಯ ಇಲಾಖೆ

ಮೂವರು ಜಲ ಸಮಾಧಿ : ಶಿವನಸಮುದ್ರ ಬಳಿಯ ವೆಸ್ಲಿ ಸೇತುವೆ ಬಳಿ ಈಜಲು ಕಾವೇರಿ ನದಿಗೆ ಇಳಿದಿದ್ದ ಬೆಂಗಳೂರಿನ ಮೂವರು ಜಲಸಮಾಧಿಯಾಗಿದ್ದಾರೆ.

ಬೆಂಗಳೂರಿನ ನಾಗರಬಾವಿಯ ಧನಲಕ್ಷ್ಮೀ ಫೈನಾನ್ಸ್ ಉದ್ಯೋಗಿ ವೀಣಾ (23), ಖಾಸಗಿ ಕಂಪನಿ ಉದ್ಯೋಗಿ ಲೋಕೇಶ್ (21), ಬಾಷ್ ಕಂಪನಿ ಉದ್ಯೋಗಿ ಮನೋಜ್ ಕುಮಾರ್ (23) ಮೃತಪಟ್ಟವರು.

ಭಾನುವಾರ ವಿವಾಹವೊಂದಕ್ಕೆ ಬಂದಿದ್ದ ಎಲ್ಲರೂ ವಿವಾಹ ಮುಗಿಸಿಕೊಂಡು ವೆಸ್ಲಿ ಸೇತುವೆ ಬಳಿ ಈಜಲು ನದಿಗೆ ಇಳಿದಿದ್ದರು. ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Mother and two children drowned after falling into a well in Chikkaballapur on Sunday, June 9, 2019. Chikkaballapur rural police visited the spot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X