• search
 • Live TV
ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿಕ್ಕಬಳ್ಳಾಪುರ: ಕಾರಿಗೆ ಲಾರಿ ಡಿಕ್ಕಿ, ಒಂದೇ ಕುಟುಂಬದ ಮೂವರು ಸಾವು

By ಚಿಕ್ಕಬಳ್ಳಾಪುರ ಪ್ರತಿನಿಧಿ
|

ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 15: ಚಿಕ್ಕಬಳ್ಳಾಪುರ ಬಳಿ ಬೆಳ್ಳಂಬೆಳಗ್ಗೆ ಭೀಕರ ಕಾರು ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ.

ಚಿಕ್ಕಬಳ್ಳಾಪುರ ತಾಲೂಕು ದೊಡ್ಡ ಪೈಲಗುರ್ಕಿ ಬಳಿ ಮಧ್ಯರಾತ್ರಿ 1 ಗಂಟೆಗೆ ಘಟನೆ ಸಂಭವಿಸಿದ್ದು, ವೇಗವಾಗಿ ಬಂದ ಲಾರಿಯು ಹಿಂಬದಿಯಿಂದ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ತಾಯಿ ಹಾಗೂ ಇಬ್ಬರು ಗಂಡು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬೈಕ್, ಮೊಬೈಲ್ ಖರೀದಿಸಲು 3 ತಿಂಗಳ ಮಗುವನ್ನೇ ಮಾರಿದ ತಂದೆ!

ತಂದೆಯ ಸ್ಥಿತಿ ಚಿಂತಾಜನಕವಾಗಿದ್ದು, ಬೆಂಗಳೂರಿನ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಲಾರಿ ಡಿಕ್ಕಿ ಹೊಡೆತಕ್ಕೆ ಸ್ವಿಫ್ಟ್ ಕಾರು ನಜ್ಜುಗುಜ್ಜಾಗಿದ್ದು, ಗುರುತಿಸಲು ಅಸಾಧ್ಯವಾಗದಷ್ಟು ಅಪ್ಪಚ್ಚಿಯಾಗಿದೆ.

ಮೃತ ದುರ್ದೈವಿಗಳು ಹೈದರಾಬಾದ್ ಮೂಲದವರು ಎಂದು ಗುರುತಿಸಲಾಗಿದ್ದು, ಬೆಂಗಳೂರಿನಲ್ಲಿ ನಡೆದ ಮಾರ್ವಾಡಿ ಸಮಾರಂಭಕ್ಕೆ ಬಂದಿದ್ದರು. ಸಮಾರಂಭ ಮುಗಿಸಿ ಈ ಮಾರ್ವಾಡಿ ಕುಟುಂಬವು ಬೆಂಗಳೂರಿನಿಂದ ಹೈದರಾಬಾದ್ ಗೆ ಪ್ರಯಾಣ ಮಾಡುತ್ತಿರುವಾಗ ಈ ಅವಘಡ ಸಂಭವಿಸಿದೆ.

   European Guide Vision ಸಂಸ್ಥೆ Infosys ತೆಕ್ಕೆಗೆ | Oneindia Kannada

   ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡ ಪೈಲಗೂರ್ಕಿ ಹೈವೇ ಬಳಿ ಪ್ರಕರಣ ನಡೆದಿದೆ. ಸ್ಥಳದಲ್ಲೇ ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ.

   English summary
   Lorry collision to car in Doddapailagurki near Chikkaballapura. Three Died Of single Family in This accident.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X