ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತದಾನ ಮಾಡದೆ ಕಳ್ತಪ್ಪಿಸಿ ನಂದಿಬೆಟ್ಟಕ್ಕೆ ಪ್ರವಾಸ ಹೋದರೆ ಹುಷಾರ್!

|
Google Oneindia Kannada News

ಚಿಕ್ಕಬಳ್ಳಾಪುರ, ಏಪ್ರಿಲ್ 17: ಚುನಾವಣೆಯ ದಿನದಂದು ಸಿಗುವ ರಜೆಯನ್ನು ಅನೇಕರು ಪ್ರವಾಸದ ಮೋಜು ಮಸ್ತಿಗಾಗಿ ಬಳಸಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ಅನೇಕರು ಮತದಾನದ ದಿನದಂದು ಸಿಗುವ ರಜೆಯಂದು ಪ್ರವಾಸಕ್ಕೆ ತೆರಳುತ್ತಾರೆ. ಒಂದು ದಿನದ ಪ್ರವಾಸಕ್ಕಾಗಿ ಅವರಿಗೆ ಸಮೀಪದ ನಂದಿಬೆಟ್ಟ ನೆಚ್ಚಿನ ತಾಣ. ಆದರೆ, ಈ ಬಾರಿ ಮತದಾನದ ಮಾಡದೆ ನಂದಿಬೆಟ್ಟದಲ್ಲಿ ಸುತ್ತಾಡಿ ಬರೋಣ ಎಂದು ಹೋಗಬೇಡಿ, ಜಾಗ್ರತೆ!

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಏಕೆಂದರೆ, ಮತದಾನದ ವಯಸ್ಸು ದಾಟಿರುವ ವ್ಯಕ್ತಿಗಳು ಮತಚಲಾಯಿಸದೆ ನಂದಿಬೆಟ್ಟಕ್ಕೆ ತೆರಳಿದರೆ ಅಲ್ಲಿ ಒಳಗೆ ಪ್ರವೇಶವನ್ನೇ ನೀಡಲಾಗುವುದಿಲ್ಲ. ಇಂಥದ್ದೊಂದು ವಿನೂತನ ಕ್ರಮವನ್ನು ಅಲ್ಲಿನ ಜಿಲ್ಲಾಡಳಿತ ತೆಗೆದುಕೊಂಡಿದೆ.

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಹೀಗೆ ಹುಡುಕಿರಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಹೀಗೆ ಹುಡುಕಿರಿ

Lok Sabha elections 2019 no entry to Nandibetta who din not caste vote chikkaballapur dc

ಬೆಂಗಳೂರಿಗರು ಮತ್ತು ಸುತ್ತಮುತ್ತಲಿನ ಜನರು ಗುರುವಾರ ಮತದಾನ ಮಾಡದೆ ನಂದಿಬೆಟ್ಟವನ್ನು ಏರಿದರೆ ಪ್ರವೇಶ ನೀಡುವುದಿಲ್ಲ. ಮತದಾನ ಮಾಡಿಬಂದರೆ ಮಾತ್ರ ಪ್ರವೇಶ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಸೂಚನೆ ಹೊರಡಿಸಿದ್ದಾರೆ.

ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕುವುದು ಹೇಗೆ? ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕುವುದು ಹೇಗೆ?

ಮತದಾನ ಮಾಡಲು ಸಹಾಯವಾಗಲಿ ಎಂಬ ಉದ್ದೇಶದಿಂದ ಸರ್ಕಾರ ಸಾರ್ವತ್ರಿಕ ರಜೆ ನೀಡಿದೆ. ಆದರೆ, ಅದನ್ನು ದುರುಪಯೋಗ ಪಡಿಸಿಕೊಂಡು ಮತದಾನ ಮಾಡದೆ ವೈಯಕ್ತಿಕ ಕೆಲಸಗಳನ್ನು ಮಾಡಿಕೊಳ್ಳಲು ಅಥವಾ ಪ್ರವಾಸದ ಮಜಾಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಇದನ್ನು ಗಮನಿಸಿರುವ ಜಿಲ್ಲಾಡಳಿತ ಈ ಕ್ರಮ ತೆಗೆದುಕೊಂಡಿದೆ. ಒಂದು ವೇಳೆ ಮತ ಚಲಾಯಿಸುವ ಅರ್ಹತೆ ಹೊಂದಿದ್ದು, ಮತ ಹಾಕದೆಯೇ ನಂದಿಬೆಟ್ಟಕ್ಕೆ ತೆರಳಿ ಆದೇಶ ಉಲ್ಲಂಘನೆ ಮಾಡಿದರೆ ಐಪಿಸಿ ಸೆಕ್ಷನ್ 188ರ ಅಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದೆ.

ಈ ಪ್ರಣಾಳಿಕೆಗಳಲ್ಲಿ ಯಾವುದು ನಿಮ್ಮ ಗಮನ ಸೆಳೆದಿದೆ?

ಗುರುವಾರ ನಂದಿಬೆಟ್ಟಕ್ಕೆ ತೆರಳುವವರು ಟಿಕೆಟ್ ತೆಗೆದುಕೊಂಡು ಈ ಮೊದಲಿನಂತೆ ಮುಂದೆ ಸಾಗಲು ಸಾಧ್ಯವಿಲ್ಲ. ತಮ್ಮ ಕೈಬೆರಳಿನ ಮೇಲೆ ಇರುವ ಅಳಿಸಲಾಗದ ಶಾಹಿ ಗುರುತನ್ನು ತೋರಿಸಲೇಬೇಕು.

English summary
Lok Sabha elections 2019: Chikkaballapur DC ordered no entry to tourists who came without casting vote to Nandi Betta.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X