• search
  • Live TV
ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೈಕ್, ಮೊಬೈಲ್ ಖರೀದಿಸಲು 3 ತಿಂಗಳ ಮಗುವನ್ನೇ ಮಾರಿದ ತಂದೆ!

|

ಚಿಕ್ಕಮಗಳೂರು, ಸಪ್ಟೆಂಬರ್.02: ಬಡತನದ ಬೇಗುದಿಯಲ್ಲಿ ಮಕ್ಕಳನ್ನು ಸಾಕಲು ಆಗದೇ ಪುಟ್ಟ ಕಂದಮ್ಮಗಳನ್ನು ಮಾರಾಟ ಮಾಡಿರುವಂತಾ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಕರ್ನಾಟಕದಲ್ಲಿ ಇತ್ತೀಚಿಗೆ ನಡೆದ ಒಂದು ಘಟನೆ ಇದೆಲ್ಲಕ್ಕಿಂತ ವಿಭಿನ್ನವಾಗಿದೆ.

ಇತ್ತೀಚಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ತಿಣಕಲ್ ಮಕ್ಕಳು ಇಲ್ಲದ ದಂಪತಿಗೆ ಬಡ ಕಾರ್ಮಿಕನೊಬ್ಬ ತಮ್ಮ 3 ತಿಂಗಳ ಪುಟ್ಟ ಮಗುವನ್ನು 1 ಲಕ್ಷ ರೂಪಾಯಿಗೆ ಮಾರಾಟ ಮಾಡಿರುವ ಘಟನೆ ನಡೆದಿದೆ. ಆದರೆ ಇದರ ಹಿಂದಿನ ಕಾರಣ ಮಾತ್ರ ಆಶ್ಚರ್ಯ ಹುಟ್ಟಿಸುವಂತಿದೆ.

ಮಕ್ಕಳಾಗಲಿಲ್ಲ ಎಂಬ ಹೊಟ್ಟೆಕಿಚ್ಚಿಗೆ ಪಕ್ಕದ್ಮನೆ ಮಗುವನ್ನು ಕೊಂದ ದುರುಳರು!

ಮೋಟಾರ್ ಸೈಕಲ್ ಮತ್ತು ಮೊಬೈಲ್ ಖರೀದಿಸುವುದಕ್ಕಾಗಿ 3 ತಿಂಗಳ ಮಗುವನ್ನು ಕಾರ್ಮಿಕ ಮಾರಾಟ ಮಾಡಿರುವುದು ಗೊತ್ತಾಗಿದೆ. ಮಗುವನ್ನು ಮಾರಾಟ ಮಾಡಿ ಬಂದ ಹಣದಲ್ಲಿ 50 ಸಾವಿರ ರೂಪಾಯಿ ಕೊಟ್ಟು ಬೈಕ್ ಹಾಗೂ 15 ಸಾವಿರ ರೂಪಾಯಿ ಮೊಬೈಲ್ ಖರೀದಿಸಿರುವುದು ತಿಳಿದು ಬಂದಿದೆ.

ಅಕ್ಕಪಕ್ಕದ ಮನೆಯವರಲ್ಲಿ ಹುಟ್ಟಿಕೊಂಡ ಅನುಮಾನ

ಅಕ್ಕಪಕ್ಕದ ಮನೆಯವರಲ್ಲಿ ಹುಟ್ಟಿಕೊಂಡ ಅನುಮಾನ

ಬಡತನದಿಂದ ಬಳಲುತ್ತಿದ್ದ ಕಾರ್ಮಿಕನ ಕುಟುಂಬದಲ್ಲಿ ದಿಢೀರನೇ ಬದಲಾವಣೆಗಳು ಕಂಡು ಬಂದವು. ಹೊಸ ಬೈಕ್ ಮತ್ತು ಮೊಬೈಲ್ ನಲ್ಲಿ ಹಾಯಾಗಿ ಮಾತನಾಡುತ್ತಾ ನಲಿಯುತ್ತಿದ್ದ ಕುಟುಂಬದವರ ನಡುವಳಿಕೆ ಅಕ್ಕಪಕ್ಕದ ಮನೆಯವರಲ್ಲಿ ಅನುಮಾನವನ್ನು ಹುಟ್ಟಿಸಿತು. ಇದೇ ಸಂದರ್ಭದಲ್ಲಿ 3 ತಿಂಗಳ ಮಗು ನಾಪತ್ತೆಯಾಗಿರುವುದನ್ನು ನೆರೆಹೊರೆಯವರು ಗಮನಿಸಿದರು.

ಗ್ರಾಮಸ್ಥರಿಂದ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಗೆ ಕಂಪ್ಲೆಂಟ್

ಗ್ರಾಮಸ್ಥರಿಂದ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಗೆ ಕಂಪ್ಲೆಂಟ್

ಚಿಕ್ಕಬಳ್ಳಾಪು ಜಿಲ್ಲೆ ತಿಣಕಲ್ ಗ್ರಾಮದಲ್ಲಿ ವಾಸವಾಗಿದ್ದ ದಂಪತಿಯ 3 ತಿಂಗಳ ಮಗು ಕಾಣಿಸದ ಹಿನ್ನೆಲೆ ನೆರೆಹೊರೆಯವರು ಅನುಮಾನಗೊಂಡು ದೂರು ನೀಡಿದ್ದರು. ಈ ಹಿನ್ನೆಲೆ ತಿಣಕಲ್ ಗ್ರಾಮಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಗುವಿನ ತಾಯಿ ಸೇರಿದಂತೆ ಸುತ್ತಮುತ್ತಲಿನ ಮನೆಯವರನ್ನು ವಿಚಾರಣೆ ನಡೆಸಿದರು.

ಕಾರ್ಮಿಕನ ಎರಡನೇ ಮದುವೆ ವಿಚಾರ ಬಹಿರಂಗ

ಕಾರ್ಮಿಕನ ಎರಡನೇ ಮದುವೆ ವಿಚಾರ ಬಹಿರಂಗ

ಮಗು ಮಾರಾಟಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದಾಗ ಕಾರ್ಮಿಕನು ಈಗಾಗಲೇ ಮತ್ತೊಬ್ಬ ಮಹಿಳೆಯ ಜೊತೆಗೆ ವಿವಾಹವಾಗಿದ್ದ ಎಂದು ತಿಳಿದು ಬಂದಿದೆ. ಎರಡನೇ ಪತ್ನಿಗೆ ಜನಿಸಿದ ಮಗುವನ್ನು 1 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದನು ಎಂದು ತಿಳಿದು ಬಂದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಗುವನ್ನು ರಕ್ಷಿಸಿದ್ದು ದತ್ತು ಕೇಂದ್ರಕ್ಕೆ ನೀಡಿದ್ದಾರೆ.

2ನೇ ಪತ್ನಿ ಮಗುವನ್ನು ಮಾರಾಟ ಮಾಡಿದ ತಂದೆ ನಾಪತ್ತೆ

2ನೇ ಪತ್ನಿ ಮಗುವನ್ನು ಮಾರಾಟ ಮಾಡಿದ ತಂದೆ ನಾಪತ್ತೆ

ಇನ್ನು, ಪೊಲೀಸರು ಮಗುವಿನ ತಾಯಿಯನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಮಗುವನ್ನು ಮಾರಾಟಕ್ಕೆ ಪತಿ ಪತ್ನಿ ಇಬ್ಬರ ಒಪ್ಪಿಗೆಯೂ ಇತ್ತು ಎಂದು ತಿಳಿದು ಬಂದಿದೆ. ಏಕೆಂದರೆ ಮಗು ಮಾರಾಟ ಮಾಡುವಂತೆ ಪತ್ನಿಗೆ ಆರೋಪಿ ಪತಿ ಬೆದರಿಕೆ ಹಾಕಿ ಒಪ್ಪಿಸಿದ್ದನು ಎಂದು ತಿಳಿದು ಬಂದಿದೆ. ಇದೀಗ ಆರೋಪಿ ಪತಿಯು ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

English summary
Chikkaballapura Labourer Sells 3 Month Old Baby Girl For Rs 1 Lakh, Buys Bike And Phone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X