ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉತ್ತರದ ರಾಜ್ಯಗಳಂತೆ ಕರ್ನಾಟಕವೂ ಕೋಮು ಪ್ರಯೋಗಾಲಯವಾಗುತ್ತಿದೆ: ಪಿಣರಾಯಿ ವಿಜಯನ್

|
Google Oneindia Kannada News

ಚಿಕ್ಕಬಳ್ಳಾಪುರ, ಸೆ.20: ಕರ್ನಾಟಕದ ಕೆಲವು ಶಕ್ತಿಗಳು ಉತ್ತರ ಭಾರತದ ಕೆಲವು ರಾಜ್ಯಗಳಿಗೆ ಹೋಲುವಂತೆ ರಾಜ್ಯವನ್ನು ಕೋಮು ಪ್ರಯೋಗಾಲಯವನ್ನಾಗಿ ಪರಿವರ್ತಿಸುವ ಮೂಲಕ ರಾಜ್ಯಕ್ಕೆ ಕೆಟ್ಟ ಹೆಸರು ತರುತ್ತಿವೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಪಿಣರಾಯಿ ವಿಜಯನ್, ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ರೈಲು ಸಂಪರ್ಕದ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ನಂತರ ಚಿಕ್ಕಬಳ್ಳಾಪುರದ ಬಾಗೇಪಲ್ಲಿಯಲ್ಲಿ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದರು.

"ಮುಂದಿನ ಪೀಳಿಗೆಯನ್ನು ಕೇಸರಿಮಯಗೊಳಿಸಲು ಸಾಕಷ್ಟು ಪ್ರಯತ್ನಗಳು ನಡೆದಿದ್ದು, ಪಠ್ಯಪುಸ್ತಕಗಳನ್ನು ಸಾಧನವಾಗಿ ಬಳಸಿಕೊಳ್ಳಲಾಗುತ್ತಿದೆ. ಪ್ರಗತಿಪರ ಚಿಂತಕರ ಚಿಂತನೆಗಳನ್ನು ತೆಗೆದು ಕೋಮುವಾದ ತುಂಬುವವರನ್ನು ಪರಿಚಯಿಸುವ ಮೂಲಕ ಪಠ್ಯಪುಸ್ತಕಗಳನ್ನು ಬದಲಾಯಿಸಲಾಗಿದೆ" ಎಂದಿದ್ದಾರೆ.

Breaking; ಪಿಣರಾಯಿ ವಿಜಯನ್ ಭೇಟಿಯಾದ ಬಸವರಾಜ ಬೊಮ್ಮಾಯಿBreaking; ಪಿಣರಾಯಿ ವಿಜಯನ್ ಭೇಟಿಯಾದ ಬಸವರಾಜ ಬೊಮ್ಮಾಯಿ

ಬಾಗೇಪಲ್ಲಿಯಲ್ಲಿ ನಡೆದ ಭಾರತ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್‌ವಾದಿ) ರಾಜ್ಯ ಮಟ್ಟದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅವರು, ಇತ್ತೀಚೆಗೆ ನಡೆದ ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಇತಿಹಾಸವನ್ನು ತಿರುಚಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಕರ್ನಾಟಕದಲ್ಲಿ ಸಂಘಪರಿವಾರ ಅಜೆಂಡಾವನ್ನು ಬೇರೂರಿಸುತ್ತಿದೆ

ಕರ್ನಾಟಕದಲ್ಲಿ ಸಂಘಪರಿವಾರ ಅಜೆಂಡಾವನ್ನು ಬೇರೂರಿಸುತ್ತಿದೆ

ಪಿಣರಾಯಿ ವಿಜಯನ್ ರಾಜ್ಯದಲ್ಲಿ ಇತ್ತೀಚೆಗೆ ದೊಡ್ಡ ಪ್ರತಿಭಟನೆಗೆ ಸಾಕ್ಷಿಯಾದ ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

"ನಾರಾಯಣ ಗುರು, ಪೆರಿಯಾರ್ ರಾಮಸಾಮಿ ಮತ್ತು ಸಾರಾ ಅಬೂಬಕರ್ ಅವರ ಅಧ್ಯಾಯಗಳನ್ನು ಕೈಬಿಟ್ಟು ಆರ್‌ಎಸ್‌ಎಸ್ ಸಂಸ್ಥಾಪಕ ಕೆಬಿ ಹೆಡ್ಗೆವಾರ್ ಅವರ ಅಧ್ಯಾಯವನ್ನು ಏಕೆ ಪರಿಚಯಿಸಲಾಗಿದೆ" ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಕರ್ನಾಟಕದಲ್ಲಿ ಸಂಘಪರಿವಾರ ತನ್ನ ಅಜೆಂಡಾವನ್ನು ಬೇರೂರಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಕೋಮುವಾದ ಜನರನ್ನು ವಿಭಜಿಸುತ್ತಲೇ ಇರುತ್ತದೆ!

ಕೋಮುವಾದ ಜನರನ್ನು ವಿಭಜಿಸುತ್ತಲೇ ಇರುತ್ತದೆ!

"ಪಿಎಫ್‌ಐ ಮತ್ತು ಎಸ್‌ಡಿಪಿಐನಂತಹ ರಾಜಕೀಯ ಸಂಘಟನೆಗಳಿವೆ, ಅದು ಕೇವಲ ಕೋಮು ಧ್ರುವೀಕರಣದ ಮೇಲೆ ಕೇಂದ್ರೀಕರಿಸುತ್ತದೆ. ಅವುಗಳು ಕೂಡ ಅಪಾಯಗಳೇ. ಅಲ್ಪಸಂಖ್ಯಾತ ಕೋಮುವಾದವು ಬಹುಸಂಖ್ಯಾತ ಕೋಮುವಾದವನ್ನು ಸೋಲಿಸಲು ಸಾಧ್ಯವಿಲ್ಲ. ಆದರೆ, ಜನರನ್ನು ಮತ್ತಷ್ಟು ವಿಭಜಿಸುತ್ತಲೇ ಇದೆ. ಜನರ ಆಂದೋಲನದಿಂದ ಮಾತ್ರ ಈ ವಿಭಜನೆಯನ್ನು ತಡೆಯಲು ಸಾಧ್ಯ" ಎಂದಿದ್ದಾರೆ.

ಪ್ರಶ್ನಿಸುವವರಿಗೆ ದೇಶ ವಿರೋಧಿ ಎಂಬ ಹಣೆಪಟ್ಟಿ

ಪ್ರಶ್ನಿಸುವವರಿಗೆ ದೇಶ ವಿರೋಧಿ ಎಂಬ ಹಣೆಪಟ್ಟಿ

ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿರುವ ಅವರು, 'ರಾಷ್ಟ್ರದ ಪ್ರಜಾಪ್ರಭುತ್ವದ ರಚನೆಯನ್ನು ನಾಶಮಾಡಲು ನಕಲಿ ರಾಷ್ಟ್ರೀಯತೆಯನ್ನು ಪ್ರಚಾರ ಮಾಡಲಾಗುತ್ತಿದೆ' ಎಂದು ಹೇಳಿದ್ದಾರೆ.


"ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಎಂದಿಗೂ ಯಾವುದೇ ಪಾತ್ರವನ್ನು ಹೊಂದಿರದವರು, ಅವರನ್ನು ಪ್ರಶ್ನಿಸುವವರನ್ನು ದೇಶ ವಿರೋಧಿ ಎಂದು ಹಣೆಪಟ್ಟಿ ಕಟ್ಟುತ್ತಿದ್ದಾರೆ. ಕರ್ನಾಟಕದಲ್ಲಿ ಎಂಎಂ ಕಲಬುರ್ಗಿ, ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಅವರನ್ನು ಹತ್ಯೆ ಮಾಡಲಾಗಿದೆ. 2014 ರ ಚುನಾವಣೆಯ ನಂತರ ಬಿಜೆಪಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯುಆರ್ ಅನಂತಮೂರ್ತಿ ಅವರಿಗೆ ಪಾಕಿಸ್ತಾನದ ವಿಮಾನ ಟಿಕೆಟ್ ಕಳುಹಿಸಿತ್ತು, ಅವರ ನಿಧನವನ್ನು ಆಚರಿಸಿತ್ತು. ಇದು ಸಮಾಜದಲ್ಲಿ ಬಿಜೆಪಿ ಬಿತ್ತುತ್ತಿರುವ ದ್ವೇಷವನ್ನು ತೋರಿಸುತ್ತದೆ" ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.

ಪಶ್ಚಿಮ ಘಟ್ಟದ ಜೀವ ವೈವಿಧ್ಯತೆಗೆ ಧಕ್ಕೆ ಎಂದ ಸಿಎಂ ಬಸವರಾಜ ಬೊಮ್ಮಾಯಿ

ಪಶ್ಚಿಮ ಘಟ್ಟದ ಜೀವ ವೈವಿಧ್ಯತೆಗೆ ಧಕ್ಕೆ ಎಂದ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ರೈಲು ಸಂಪರ್ಕದ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಈ ವೇಳೆ ಕರ್ನಾಟಕ ಗಡಿ ಭಾಗದ ಸೂಕ್ಷ್ಮ ಪರಿಸರ ಪ್ರದೇಶದಲ್ಲಿ, ವನ್ಯಜೀವಿಧಾಮಗಳಲ್ಲಿ ಯಾವುದೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಿಲ್ಲ ಎಂದು ಕೇರಳ ಸರ್ಕಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟಪಡಿಸಿದ್ದಾರೆ.

ಮುಖ್ಯವಾಗಿ ಕಾಞಂಗಾಡ್- ಕಾಣಿಯೂರು ರೈಲು ಮಾರ್ಗ ಸೇರಿದಂತೆ ವಿವಿಧ ರೈಲ್ವೆ ಮತ್ತು ಹೆದ್ದಾರಿ ಯೋಜನೆಗಳಿಗೆ ಸಹಮತಿ ನೀಡುವಂತೆ ಕೇರಳ ಸರ್ಕಾರ ಕೋರಿತು. ಆದರೆ, ಕರ್ನಾಟಕಕ್ಕೆ ಈ ರೈಲು ಮಾರ್ಗದಿಂದ ಹೆಚ್ಚಿನ ಅನುಕೂಲಗಳಿಲ್ಲ. ಅಲ್ಲದೆ ಪಶ್ಚಿಮ ಘಟ್ಟದ ಜೀವವೈವಿಧ್ಯ ಸೂಕ್ಷ್ಮ ಪ್ರದೇಶದಲ್ಲಿ ಈ ಉದ್ದೇಶಿತ ರೈಲು ಮಾರ್ಗ ಹಾದು ಹೋಗಲಿದೆ. ಇದರಿಂದ ಕಾಡುಪ್ರಾಣಿಗಳು, ಪರಿಸರಕ್ಕೆ ತೊಂದರೆಯಾಗುವ ಕಾರಣ ಈ ಈ ರೈಲು ಮಾರ್ಗದ ಯೋಜನೆಗೆ ಸಹಮತಿ ನೀಡಲು ಸಾಧ್ಯವಿಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

English summary
Kerala Chief Minister Pinarayi Vijayan said Karnataka turning it into a communal laboratory akin to some north Indian states. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X