ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಗೇಪಲ್ಲಿ; 2023ರ ಚುನಾವಣೆ ಜೆಡಿಎಸ್ ಅಭ್ಯರ್ಥಿ ಘೋಷಣೆ!

|
Google Oneindia Kannada News

ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 03; ಕರ್ನಾಟಕದಲ್ಲಿ 2023ಕ್ಕೆ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆಗೆ ಎರಡು ವರ್ಷಗಳು ಇರುವಂತೆಯೇ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಘೋಷಣೆ ಮಾಡಲಾಗಿದೆ.

ಬಾಗೇಪಲ್ಲಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಡಿ. ಜೆ. ನಾಗರಾಜ ರೆಡ್ಡಿ ಕಣಕ್ಕಿಳಿಯಲಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಸ್. ಎನ್. ಸುಬ್ಬಾರೆಡ್ಡಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

 ವಿಧಾನಸಭೆ ಚುನಾವಣೆ 2023: ಜೆಡಿಎಸ್‌ನಿಂದ 'ಮಿಷನ್ 123' ವಿಧಾನಸಭೆ ಚುನಾವಣೆ 2023: ಜೆಡಿಎಸ್‌ನಿಂದ 'ಮಿಷನ್ 123'

"ಜೆಡಿಎಸ್ ಪಕ್ಷದಿಂದ ಬಾಗೇಪಲ್ಲಿ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿಯಾಗುತ್ತೇನೆ. ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ನನ್ನ ಹೆಸರು ಘೋಷಣೆ ಮಾಡಿದ್ದಾರೆ. ನಾನೇ ಶಾಸಕನೂ ಆಗುತ್ತೇನೆ" ಎಂದು ಡಿ. ಜೆ. ನಾಗರಾಜ ರೆಡ್ಡಿ ಹೇಳಿದ್ದಾರೆ.

ಜೆಡಿಎಸ್ ಹೀನ ಪರಿಸ್ಥಿತಿಗೆ ಕಾರಣ ಬಿಚ್ಚಿಟ್ಟ ಬಿಜೆಪಿ ಟ್ವೀಟ್!ಜೆಡಿಎಸ್ ಹೀನ ಪರಿಸ್ಥಿತಿಗೆ ಕಾರಣ ಬಿಚ್ಚಿಟ್ಟ ಬಿಜೆಪಿ ಟ್ವೀಟ್!

JDS Candidate Announced For Chikkaballapur District Bagepalli Seat For 2023 Elections

"ಕ್ಷೇತ್ರದ ಪ್ರಭಾವಿ ಮುಖಂಡ ಹರಿನಾಥ ರೆಡ್ಡಿ, ಗೊಟ್ಟಿಗೆರೆ ಮಂಜುನಾಥ್ ನೇತೃತ್ವದಲ್ಲಿ ಇತ್ತೀಚೆಗೆ ಎಚ್. ಡಿ. ಕುಮಾರಸ್ವಾಮಿ ಭೇಟಿ ಮಾಡಲಾಗಿತ್ತು. ಆಗ ಡಿ. ಜೆ. ನಾಗರಾಜ ರೆಡ್ಡಿ ಮುಂದಿನ ಅಭ್ಯರ್ಥಿ ಎಂದು ಕಾರ್ಯಕರ್ತರ ಸಮ್ಮುಖದಲ್ಲಿ ಘೋಷಣೆ ಮಾಡಲಾಗಿದೆ" ಎಂದು ತಿಳಿಸಿದ್ದಾರೆ.

Breaking: ಜೆಡಿಎಸ್ ತೊರೆಯುವ ಬಗ್ಗೆ ಜಿಟಿಡಿ ಅಧಿಕೃತ ಘೋಷಣೆ Breaking: ಜೆಡಿಎಸ್ ತೊರೆಯುವ ಬಗ್ಗೆ ಜಿಟಿಡಿ ಅಧಿಕೃತ ಘೋಷಣೆ

ಬಾಗೇಪಲ್ಲಿ ಕ್ಷೇತ್ರದ ಪ್ರಭಾವಿ ಮುಖಂಡರಾಗಿರುವ ಡಿ. ಜೆ. ನಾಗರಾಜ ರೆಡ್ಡಿ ಸುಪ್ರೀಂಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿಗಳ ಹತ್ತಿರದ ಸಂಬಂಧಿಯೂ ಹೌದು. ಕಳೆದ ಚುನಾವಣೆಯಲ್ಲಿ ಡಾ. ಸಿ. ಆರ್. ಮನೋಹರ್ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು 38,302 ಮತಗಳನ್ನು ಪಡೆದಿದ್ದರು.

2018ರ ಚುನಾವಣೆಯಲ್ಲಿಯೂ ಡಿ. ಜೆ. ನಾಗರಾಜ ರೆಡ್ಡಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್ ಕೈ ತಪ್ಪಿತ್ತು. ಚುನಾವಣೆ ಬಳಿಕ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿರುವ ಅವರಿಗೆ ಮುಂದಿನ ಚುನಾವಣೆಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

ಡಿ. ಜೆ. ನಾಗರಾಜ ರೆಡ್ಡಿ ಅಭ್ಯರ್ಥಿ ಎಂದು ಘೋಷಣೆ ಮಾಡಿರುವುದು ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಚುನಾವಣೆ ಸಿದ್ಧತೆ ವರ್ಷಗಳಿಗೂ ಹೆಚ್ಚು ಕಾಲವಿದ್ದು, ಹೇಗೆ ಸಿದ್ಧತೆ ಮಾಡಿಕೊಳ್ಳುತ್ತಾರೆ? ಎಂದು ಕಾದು ನೋಡಬೇಕು.

2023ರ ವಿಧಾನಸಭೆ ಚುನಾವಣೆಗೆ ಈಗಾಗಲೇ ಜೆಡಿಎಸ್ ಪಕ್ಷ ಸಿದ್ಧತೆಯನ್ನು ಆರಂಭಿಸಿದೆ. ಚುನಾವಣೆ ಘೋಷಣೆಗೂ ಮೊದಲೇ ಸುಮಾರು 100 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುತ್ತದೆ ಎಂದು ಪಕ್ಷ ಹೇಳಿದೆ.

ಎಚ್. ಡಿ. ದೇವೇಗೌಡ ಹೇಳಿಕೆ; 2023ರ ವಿಧಾನಸಭಾ ಚುನಾವಣೆ ಕುರಿತು ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಮಾತನಾಡಿದ್ದಾರೆ. "ಪಕ್ಷದ ಬಲವರ್ಧನೆಗೆ ಹೆಚ್ಚಿನ ಆದ್ಯತೆ ನೀಡದ ಮತ್ತು ಸದಸ್ಯರ ನೋಂದಣಿ ಕಾರ್ಯ ಮಾಡದವರಿಗೆ ಯಾರೇ ಶಿಫಾರಸು ಮಾಡಿದರೂ ಚುನಾವಣೆಯಲ್ಲಿ ಟಿಕೆಟ್ ನೀಡುವುದಿಲ್ಲ" ಎಂದು ಹೇಳಿದ್ದಾರೆ.

"ಯಾರು ಪಕ್ಷಕ್ಕೆ ನಿಷ್ಠೆಯಿಂದ ಇರುತ್ತಾರೋ ಅಂತವರನ್ನು ಗುರುತಿಸುವ ಕೆಲಸ ಮಾಡಲಾಗುತ್ತದೆ. ಟಿಕೆಟ್ ಬೇಕಾದ ವ್ಯಕ್ತಿ ಕನಿಷ್ಠ 25 ಜನರನ್ನು ಪಕ್ಷದ ಸದಸ್ಯರನ್ನಾಗಿ ಮಾಡಬೇಕು. ಪಕ್ಷ ಸಂಘಟನೆಗಾಗಿ ದುಡಿಯುವವರು ನಮಗೆ ಬೇಕು" ಎಂದು ಎಚ್. ಡಿ. ದೇವೇಗೌಡ ತಿಳಿಸಿದ್ದಾರೆ.

Recommended Video

ದಾಖಲೆ ಬರೆದ್ರೂ ಯೆಲ್ಲೋ ಕಾರ್ಡ್ ಪಡೆದು ನೆಕ್ಸ್ಟ್ ಮ್ಯಾಚ್ ನಿಂದ ಔಟಾದ ರೊನಾಲ್ಡೊ | Oneindia Kannada

English summary
D. J. Nagaraj Reddy announced that he will contest as JD(S) candidate from Chikkaballapur district Bagepalli seat for 2023 Karnataka assembly election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X