ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಪೀಕರ್ ಅಲ್ಲ ನಾನೀಗ ಕಾಂಗ್ರೆಸ್ ಕಾರ್ಯಕರ್ತ: ರಮೇಶ್‌ಕುಮಾರ್

|
Google Oneindia Kannada News

Recommended Video

ಸ್ಪೀಕರ್ ಅಲ್ಲ ನಾನೀಗ ಕಾಂಗ್ರೆಸ್ ಕಾರ್ಯಕರ್ತ: ರಮೇಶ್‌ಕುಮಾರ್/ K. R. Ramesh Kumar

ಚಿಕ್ಕಬಳ್ಳಾಪುರ, ಆಗಸ್ಟ್ 02: ಶಾಸಕರ ಅನರ್ಹತೆ ಬಗ್ಗೆ ಈಗ ಮಾತನಾಡುವುದು ಗೌರವವಲ್ಲ, ಈಗ ನಾನು ಕಾಂಗ್ರೆಸ್ ಕಾರ್ಯಕರ್ತನಷ್ಟೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಹೇಳಿದರು.

ನಗರದ ಹೊರವಲಯದ ರಂಗಸ್ಥಳದ ರಂಗನಾಥ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಬಿಜೆಪಿ ಸರಕಾರ ಎಷ್ಟು ವರ್ಷ ಇರುತ್ತೇ, ಹೋಗುತ್ತೇ ಎಂದು ಹೇಳಲು ನಾನೇನು ಜ್ಯೋತಿಷ್ಯ ಅಲ್ಲಾ. ಇದ್ದಷ್ಟು ದಿನ ಇರುತ್ತೆ, ಆಮೇಲೆ ಹೋಗುತ್ತೇ? ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.

I am not speaker, i am congress party worker: Ramesh Kumar

ಇವತ್ತಿನ ರಾಜಕೀಯದಲ್ಲಿ ಅನಿಶ್ಚಿತತೆ ಇದೆ. ಹಾಗಾಗಿ ಬಿಜೆಪಿ ಸರಕಾರ ಇಷ್ಟೇ ದಿನ ಇರುತ್ತೇ? ಹೋಗುತ್ತೆ ಎಂದು ಹೇಳಲು ನಾನೇನು ಜ್ಯೋತಿಶಿ ಅಲ್ಲಾ. ಅದರ ಆಯಸ್ಸು ಇರುವ ತನಕ ಇರತ್ತೇ ಎಂದರು.

ಅನರ್ಹರು ಪಕ್ಷ ವಿರೋಧಿಯಾಗಿ ನಡೆದುಕೊಂಡರು. ಅದಕ್ಕೆ ಸಂವಿಧಾನದಲ್ಲಿ ಅನರ್ಹ ಮಾಡುವ ಅವಕಾಶವಿತ್ತು ಹಾಗಾಗಿ ಆ ಸ್ಥಾನದಲ್ಲಿದ್ದುಘಿ, ಅದನ್ನು ಮಾಡಿದ್ದೇನೆ. ಅದರ ಬಗ್ಗೆ ಈಗ ವ್ಯಾಖ್ಯಾನ ಮಾಡುವುದು ಗೌರವವಲ್ಲ ಎಂದು ಅನರ್ಹ ಶಾಸಕರ ಬಗ್ಗೆ ಮಾತನಾಡಲು ನಿರಾಕರಿಸಿದರು.

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿ ನಮಗೆ ದೊಡ್ಡ ಸವಾಲಿದೆ. ಸಿದ್ಧರಾಮಯ್ಯ ನೇತೃತ್ವದಲ್ಲಿ ಮುಂಬರುವ ದಿನಗಳಲ್ಲಿ ಪಕ್ಷ ಬಲಪಡಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

English summary
Former speaker Ramesh Kumar refused talked about disqaulified MLAs. He said 'i am not speaker now, i am just congress party worker'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X