ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈತರಿಗೆ ಸರ್ಕಾರದ ಯೋಜನೆ, ಹಣ ತಲುಪಿಸಲು ಸುಧಾಕರ್ ತಾಕೀತು

|
Google Oneindia Kannada News

ಚಿಕ್ಕಬಳ್ಳಾಪುರ ಆಗಸ್ಟ್ 19: ರೈತರ ಆದಾಯ ದ್ವಿಗುಣ ಮಾಡಲು ರೈತರಿಗೆ ಸರ್ಕಾರದ ಯೋಜನೆಗಳು, ಸಹಾಯಧನ ತಲುಪಿಸಲು ಶ್ರಮಿಸಬೇಕು ಎಂದು ಅಧಿಕಾರಿಗಳಿಗೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಾಕೀತು ಮಾಡಿದರು.

ಚಿಕ್ಕಬಳ್ಳಾಪುರ ತಾಲೂಕಿನ ಅಡ್ಡಗಲ್ ಗ್ರಾಮ ಪಂಚಾಯತಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ರೈತರಿಗೆ ಹಲವು ಸಲಕರಣೆಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು. ರೈತರ ಅಭಿವೃದ್ಧಿ ಎಂಬುದು ಕಾಗದಕ್ಕೆ ಸೀಮಿತವಾಗಬಾರದು. ರೈತರ ನಿಜವಾದ ಅಭಿವೃದ್ಧಿಗಾಗಿ ಸರ್ಕಾರದ ಕಾರ್ಯಕ್ರಮಗಳನ್ನು ಪೂರ್ಣ ಪ್ರಮಾಣದಲ್ಲಿ ತಲುಪಿಸಲು ಅಧಿಕಾರಿಗಳು ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.

ರಾಜ್ಯದ 57 ತಾಲೂಕುಗಳಲ್ಲಿ ಮಾತ್ರ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅನುಷ್ಠಾನವಾಗುತ್ತಿದೆ. ಅದರಲ್ಲಿ ಚಿಕ್ಕಬಳ್ಳಾಪುರವೂ ಒಂದು. ತಾಲೂಕಿನ ಅಡ್ಡಗಲ್, ಮಂಡಿಕಲ್ ಮತ್ತು ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಲಾಗಿದೆ. ಇವುಗಳಿಗೆ ವಿಶೇಷ ಸವಲತ್ತು ಒದಗಿಸಲು ಒಟ್ಟು 8.7ಕೋಟಿ ರೂ. ಅನುದಾನ ಕೇಂದ್ರ ಸರ್ಕಾರ ನೀಡಿದೆ ಎಂದರು.

ರೈತರು ಬದುಗಳಲ್ಲಿ ಗಿಡ ನೆಡಿ

ರೈತರು ಬದುಗಳಲ್ಲಿ ಗಿಡ ನೆಡಿ

ಸರ್ಕಾರದಿಂದ ಬರುವ ಪ್ರತಿ ರೂಪಾಯಿ ರೈತರಿಗೆ ತಲುಪಿಸಲು ಕೃಷಿ ಇಲಾಖೆ ಶ್ರಮಿಸಬೇಕು. ನೀರು ಮತ್ತು ಮಣ್ಣಿನ ರಕ್ಷಣೆ, ತೋಟಗಾರಿಕೆ ಮತ್ತು ಕೃಷಿಗೆ ಅಗತ್ಯವಿರುವ ಗಿಡಗಳ ವಿತರಣೆ ಮಾಡಲು ಕ್ರಮ ವಹಿಸಬೇಕು. ತೆಂಗು, ಮಾವು, ಮಹಾಗನಿ, ಶ್ರೀಗಂಧ, ಕಾಡು ಬಾದಾಮಿ ಸೇರಿದಂತೆ ಮುಂತಾದ ಗಿಡ ನೀಡಲಾಗುತ್ತಿದೆ ಇದನ್ನು ರೈತರು ಬದುಗಳಲ್ಲಿ ಬೆಳೆದು ಆರ್ಥಿಕ ಅಭಿವೃದ್ಧಿ ಹೊಂದಬೇಕು ಎಂದು ಸಲಹೆ ನೀಡಿದರು.

ಬದು ನಿರ್ಮಾಣ, ಚೆಕ್ ಡ್ಯಾಂ ನಿರ್ಮಾಣದಂತಹ ಕಾರ್ಯಕ್ರಮಗಳು ಇದೇ ಯೋಜನೆಯಲ್ಲಿವೆ. ಬದುಗಳ ಅಗತ್ಯ ಎಲ್ಲಿದೆಯೋ ಅಲ್ಲಿ ನಿರ್ಮಿಸಬೇಕು. ಕಾಮಗಾರಿಗಳ ಮಾಹಿತಿಯ ದಾಖಲೆ, ಕಾಮಗಾರಿ ಚಿತ್ರಗಳು ದಾಖಲಾಗಬೇಕು. ಹಣ ಪೋಲಾಗದಂತೆ ಎಚ್ಚರಿಕೆಯಿಂದ ಕಾರ್ಯ ನಿರ್ಮಹಿಸಬೇಕು. ಸರ್ಕಾರದ ಯೋಜನೆ ಸಾರ್ಥಕವಾಗಲು ಅಧಿಕಾರಿ ವರ್ಗದವರು ಪ್ರಮಾಣಿಕವಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಮಿಶ್ರ ಬೆಳೆಯಿಂದ ಲಾಭ ಗಳಿಸಿ

ಮಿಶ್ರ ಬೆಳೆಯಿಂದ ಲಾಭ ಗಳಿಸಿ

ರೈತರ ಆದಾಯ ದ್ವಿಗುಣಗೊಳಿಸಲು ಸರ್ಕಾರ ಹಲವು ಯೋಜನೆ ತಂದಿದೆ. ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ವಾಡಿಕೆಯಂತೆ ಕೇವಲ ಒಂದು ಬೆಳೆ ಬೆಳೆಯುವ ಬದಲು ಮಿಶ್ರ ಬೆಳೆ ಬೆಳೆಯುವುದರಿಂದ ಮಾರುಕಟ್ಟೆ ಕುಸಿತ, ರೋಗ ಮುಂತಾದ ಸಮಸ್ಯೆಗಳಿಂದ ಪಾರಾಗಿ ನಿರೀಕ್ಷಿತ ಲಾಭ ಗಳಿಸಲು ಸಾಧ್ಯವಾಗಲಿದೆ. ಕೃಷಿ ಇಲಾಖೆಯು ರೈತರಿಗೆ ಕೃಷಿಗೆ ಹೊಂದುವ ಉಪ ಕಸಬು ನಿರ್ವಹಿಸವುದು ಸೇರಿದಂತೆ ಅಗತ್ಯ ಮಾರ್ಗದರ್ಶನ ನೀಡಬೇಕು. ಕೋಳಿ, ಕುರಿ ಸಾಕಾಣಿಕೆ ಜೊತೆಯಲ್ಲಿ ಅಳವಡಿಸಿಕೊಂಡರೆ ರೈತರ ಆದಾಯ ದ್ವಿಗುಣವಾಗಲಿದೆ ಎಂದು ಅವರು ವಿವರಿಸಿದರು.

ಸಾವಯವ ಕೃಷಿಗೆ ರೈತರು ಮರಳಬೇಕು

ಸಾವಯವ ಕೃಷಿಗೆ ರೈತರು ಮರಳಬೇಕು

2017ರಲ್ಲಿ ನೀಡಿದ ಮಾತಿನಂತೆ ಎಚ್ಎನ್ ವ್ಯಾಲಿ ಮೂಲಕ ಎಲ್ಲ ಕೆರೆಗಳನ್ನು ತುಂಬಿಸಲಾಗಿದೆ. ಅದೇ ರೀತಿಯಲ್ಲಿ ರೈತನು ಬೆಳೆದ ಬೆಳೆ ಸಾಗಣೆ ಮಾಡಲು ಉತ್ತಮ ರಸ್ತೆಗಳನ್ನು ನಿರ್ಮಿಸಲಾಗಿದೆ. ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಅತಿಯಾದ ಬಳಕೆಯಿಂದ ಮಣ್ಣಿನ ಫಲವತ್ತತೆ ಕ್ಷೀಣಿಸುತ್ತಿದೆ. ಹಾಗಾಗಿ ಸಾವಯವ ಕೃಷಿ ಅಳವಡಿಸಿಕೊಂಡು, ನೈಸರ್ಗಿಕ ಬೆಳೆ ಬೆಳೆಯುವ ಪದ್ಧತಿಗೆ ರೈತರು ಮರಳಬೇಕು. ನಮ್ಮ ಪೂರ್ವಿಕರು 80ರ ದಶಕ್ಕೂ ಮೊದಲು ಯಾವುದೇ ಕೀಟನಾಶಕ ಮತ್ತು ರಸಗೊಬ್ಬರ ಬಳಸುತ್ತಿರಲಿಲ್ಲ. ಈಗ ಕೀಟನಾಶಕ ಬಳಸದೆ ಬೆಳೆ ಸಿಗುವುದಿಲ್ಲ ಎಂಬ ಸ್ಥಿತಿ ತಲುಪಿದ್ದೇವೆ ಎಂದು ಸುಧಾಕರ್ ಆತಂಕ ವ್ಯಕ್ತಪಡಿಸಿದರು.

ಸೇವಿಸುವ ಆಹಾರದ ಮೇಲೆ ಆರೋಗ್ಯ ನೀರ್ಧಾರವಾಗುತ್ತದೆ. ನೈಸರ್ಗಿಕವಾಗಿ ಬೆಳೆ ತೆಗೆದರೆ ಇದರಿಂದ ಆರೋಗ್ಯವೂ ವೃದ್ಧಿಯಾಗಲಿದೆ. ಎಚ್ಎನ್ ವ್ಯಾಲಿ ಜೊತೆಗೆ ಎತ್ತಿನಹೊಳೆ ಯೋಜನೆ ಮುಂದಿನ ಒಂದು ವರ್ಷದಲ್ಲಿ ಅನುಷ್ಠಾನಗೊಳಿಸಿ ಶಾಶ್ವತವಾಗಿ ನೀರಾವರಿ ಸೌಲಭ್ಯ ಒದಗಿಸಲಾಗುವುದು ಎಂದರು.

ರೈತರಿಗೆ ವಾರ್ಷಿಕ ಸಹಾಯಧನ

ರೈತರಿಗೆ ವಾರ್ಷಿಕ ಸಹಾಯಧನ

ಕೇಂದ್ರ ಸರ್ಕಾ ಕೃಷಿ ಸಮ್ಮಾನ್ ಯೋಜನೆ ಜಾರಿ ಮಾಡಿದೆ. ಅದರಡಿ ದೇಶದ ಪ್ರತಿ ರೈತನಿಗೆ ವಾರ್ಷಿಕ 6 ಸಾವಿರ ರೂ. ನೀಡಿದರೆ, ರಾಜ್ಯ ಸರಕಾರ ನಾಲ್ಕು ಸಾವಿರ ಸೇರಿ ಒಟ್ಟು ಹತ್ತು ಸಾವಿರ ರೂ. ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ. ಈವರೆಗೆ ಯಾವುದೇ ಸರ್ಕಾರ ವಾರ್ಷಿಕ ಸಹಾಯಧನ ನೀಡುವ ಬಗ್ಗೆ ವಿಚಾರವೇ ಮಾಡಿರಲಿಲ್ಲ. ಅದನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ್ದಾರೆ.


ಪ್ರತಿ ಹೋಬಳಿ ಕೇಂದ್ರದಲ್ಲೂ ಕೃಷಿ ಉಪಕರಣ ಬಾಡಿಗೆ ನೀಡಲಾಗುತ್ತಿದೆ, ಯಾಂತ್ರೀಕರಣದಿಂದ ಕೃಷಿ ಸುಲಭವಾಗಿದೆ. ಇದರಿಂದ ವೆಚ್ಚ ಕಡಿಮೆಯಾಗಿ, ಆದಾಯ ಹೆಚ್ಚಾಗಬೇಕು, ಹಾಗೆಯೇ ಸಿಗುವ ಲಾಭ ರೈತರಿಗೆ ಮಾತ್ರ ದೊರೆಯಬೇಕು. ಇಡೀ ದೇಶದಲ್ಲಿ ಒಂದೇ ಬೆಲೆ ಇರುವಂತೆ ಆನ್‌ಲೈನ್ ಮಾರುಕಟ್ಟೆ ಬೆಳೆಸಬೇಕು. ಸರ್ವಾಂಗೀಣ ದೃಷ್ಟಿಕೋನದಿಂದ ಕೃಷಿ ನೀತಿ ಮಾಡಬೇಕು. ಕೃಷಿಕರಿಗೆ ಸರ್ಕಾರದ ಸೌಲಭ್ಯ ಸಮರ್ಪಕವಾಗಿ ದೊರಕಬೇಕು. ಕೃಷಿ ಇಲಾಖೆ ರೈತಪರ ಕೆಲಸ ಮಾಡಿದರೆ ಅವರ ಬದುಕು ಸದಾ ಹಸನಾಗಿರುತ್ತದೆ ಎಂದರು.

Recommended Video

Siddaramaiah ವಿಚಾರವಾಗಿ ಕೊಡಗಿನಲ್ಲಿ Mantar Gowda ಖಡಕ್ ಮಾತು | *Karnataka | OneIndia Kannada

English summary
Government schemes and funds deliver to farmers says Sudhakar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X