ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಬಳ್ಳಾಪುರದಲ್ಲಿ ವೀರಪ್ಪ ಮೋಯ್ಲಿ ವಿರುದ್ಧ #goback ಅಭಿಯಾನ

|
Google Oneindia Kannada News

ಚಿಕ್ಕಬಳ್ಳಾಪುರ, ಮಾರ್ಚ್‌ 15: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ನ ಹಾಲಿ ಸಂಸದ ವೀರಪ್ಪ ಮೊಯ್ಲಿ ವಿರುದ್ಧ ಕ್ಷೇತ್ರದಲ್ಲಿ ಅಸಹನೆ ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್‌ಗೆ ಸಹಜವಾಗಿಯೇ ಆತಂಕ ಮೂಡಿಸಿದೆ.

ವೀರಪ್ಪ ಮೊಯ್ಲಿ ಅವರು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಎರಡು ಬಾರಿ ಸ್ಪರ್ಧಿಸಿ ಜಯಗಳಸಿದ್ದು, ಮೂರನೇ ಬಾರಿಗೆ ಅಖಾಡಕ್ಕೆ ಇಳಿಯುತ್ತಿದ್ದಾರೆ. ಆದರೆ ಈ ಬಾರಿ ಕ್ಷೇತ್ರದಲ್ಲಿ ಆಡಳಿತವಿರೋಧಿ ಅಲೆ ಇದ್ದಂತೆ ತೋರುತ್ತಿದೆ.

ಚಿಕ್ಕಬಳ್ಳಾಪುರ ಜೆಡಿಎಸ್‌ಗೆ : ವೀರಪ್ಪ ಮೊಯ್ಲಿ ಹೇಳುವುದೇನು?ಚಿಕ್ಕಬಳ್ಳಾಪುರ ಜೆಡಿಎಸ್‌ಗೆ : ವೀರಪ್ಪ ಮೊಯ್ಲಿ ಹೇಳುವುದೇನು?

ವೀರಪ್ಪ ಮೋಯ್ಲಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವೀರಪ್ಪ ಮೋಯ್ಲಿ ಅವರು ವಿರುದ್ಧ #goback ಅಭಿಯಾನ ನಡೆಯುತ್ತಿದ್ದು, ಮೊಯ್ಲಿ ಸೋಲಿಸಿ ಚಿಕ್ಕಬಳ್ಳಾಪುರ ಉಳಿಸಿ ಎಂದು ಸಹ ಕೆಲವರು ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ.

ಎರಡು ಬಾರಿ ಗೆದ್ದಿದ್ದಾರೆ ಮೊಯ್ಲಿ

ಎರಡು ಬಾರಿ ಗೆದ್ದಿದ್ದಾರೆ ಮೊಯ್ಲಿ

ವೀರಪ್ಪ ಮೊಯ್ಲಿ ಅವರು ಮೊದಲ ಬಾರಿಗೆ 2009ರಲ್ಲಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು, ಯುಪಿಎ ಸರ್ಕಾರದಲ್ಲಿ ಕಾನೂನು ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ನಂತರ 2014 ರಲ್ಲಿ ಬಿ.ಎನ್.ಬಚ್ಚೇಗೌಡ, ಕುಮಾರಸ್ವಾಮಿ ಅವರಂತಹಾ ಎದುರಾಳಿಗಳ ನಡುವೆಯೂ 9500 ಮತಗಳ ಅಂತರದಿಂದ ಜಯಶಾಲಿಯಾಗಿದ್ದರು. ಈ ಬಾರಿ ಸಹ ಅವರು ಚುನಾವಣೆಗೆ ಸ್ಪರ್ಧಿಸುವುದು ಬಹುತೇಕ ಖಚಿತ.

ಎತ್ತಿನ ಹೊಳೆಯ ಹುಸಿ ಕನಸು

ಎತ್ತಿನ ಹೊಳೆಯ ಹುಸಿ ಕನಸು

ಮೊಯ್ಲಿ ಅವರು 2014ರ ಚುನಾವಣೆ ಸಮಯದಲ್ಲಿ ಎತ್ತಿನಹೊಳೆ ಯೋಜನೆಗೆ ಆತುರವಾಗಿ ಶಂಕುಸ್ಥಾಪನೆ ಮಾಡಿ, ಬಯಲುಸೀಮೆಗೆ ಸೀರು ಹರಿಸುವ ಕನಸನ್ನು ತೋರಿಸಿದ್ದರು. ಆದರೆ ಶಂಕುಸ್ಥಾಪನೆ ಆಗಿ ಐದುವರೆ ವರ್ಷ ಆದರೂ ಸಹ ಕಾಮಗಾರಿ ಶುರುವಾದ ಕಡೆಯಲ್ಲಿಯೇ ನಿಂತಿದೆ. ಇದು ಕ್ಷೇತ್ರದ ಜನರಲ್ಲಿ ಆಕ್ರೋಶ ಹೆಚ್ಚಿಸಿದೆ.

ಬರದ ಕ್ಷೇತ್ರ ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಪಾರಮ್ಯ ಮುರಿಯಲು ಸಾಧ್ಯವೆ?ಬರದ ಕ್ಷೇತ್ರ ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಪಾರಮ್ಯ ಮುರಿಯಲು ಸಾಧ್ಯವೆ?

'ಕಾಂಗ್ರೆಸ್ ಗೆ ಮತ ಮೊಯ್ಲಿಗಲ್ಲ'

'ಕಾಂಗ್ರೆಸ್ ಗೆ ಮತ ಮೊಯ್ಲಿಗಲ್ಲ'

ಮೊಯ್ಲಿ ವಿರೋಧಿಗಳ ಜೊತೆಗೆ ಕಾಂಗ್ರೆಸ್‌ ನಿಷ್ಠಾವಂತ ಕಾರ್ಯಕರ್ತರು ಮೊಯ್ಲಿ ಬೆಂಬಲಕ್ಕೆ ನಿಂತಿದ್ದಾರೆ. ಆದರೆ ಅವರು ಸಹ ಕಾಂಗ್ರೆಸ್‌ ಪಕ್ಷಕ್ಕೆ ಮತನೀಡುವಂತೆ ಕೇಳುತ್ತಿದ್ದಾರೆಯೇ ಹೊರತು. ಮೊಯ್ಲಿ ಅವರ ಪರ ನೇರವಾಗಿ ನಿಲ್ಲುತ್ತಿಲ್ಲ.

ಮೈತ್ರಿ ಕಾರಣ ಗೆಲ್ಲುವ ಸಾಧ್ಯತೆ ಇದೆ

ಮೈತ್ರಿ ಕಾರಣ ಗೆಲ್ಲುವ ಸಾಧ್ಯತೆ ಇದೆ

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಗಿರುವ ಕಾರಣ ಮೊಯ್ಲಿ ಅವರು ಈ ಬಾರಿಯೂ ಗೆಲ್ಲುವ ಸಾಧ್ಯತೆ ಇದೆ. ಆದರೆ ಕ್ಷೇತ್ರದಲ್ಲಿ ಇರುವ ಮೊಯ್ಲಿ ವಿರೋಧಿ ಅಲೆ ಹೋರಾಗಿಯೇ ಇದೆ. ಜೊತೆಗೆ ಬಿಜೆಪಿಯ ಬಚ್ಚೇಗೌಡ ಅವರು ಕಳೆದ ಬಾರಿ ಸೋತಿರುವ ಅಭ್ಯರ್ಥಿ, ಜೊತೆಗೆ ಅವರ ಪುತ್ರ ವಿಧಾನಸಭೆ ಚುನಾವಣೆಯಲ್ಲಿ ಸಹ ಸೋತಿದ್ದಾರೆ ಹಾಗಾಗಿ ಅವರ ಪರ ಅನುಕಂಪ ಕೆಲಸ ಮಾಡುವ ಸಾಧ್ಯತೆಯೂ ಇದೆ.

2014 ಲೋಕಸಭಾ ಚುನಾವಣೆ: ಕುಮಾರಸ್ವಾಮಿ ಸ್ಪರ್ಧೆಯ ಹಿಂದಿನ ರಹಸ್ಯವೇ ಬೇರೆ ಇತ್ತು 2014 ಲೋಕಸಭಾ ಚುನಾವಣೆ: ಕುಮಾರಸ್ವಾಮಿ ಸ್ಪರ್ಧೆಯ ಹಿಂದಿನ ರಹಸ್ಯವೇ ಬೇರೆ ಇತ್ತು

English summary
Go back campaign happening against MP Veerappa Moily in Chikkaballapur constituency. BN Bachegowda contesting for Chikkaballapura constituency from BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X