ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಕಂದಗಿರಿ ಬೆಟ್ಟಕ್ಕೆ ಬೆಂಕಿ: ಧಗ ಧಗ ಉರಿದ ಮರ ಗಿಡ

|
Google Oneindia Kannada News

ಚಿಕ್ಕಬಳ್ಳಾಪುರ, ಮಾರ್ಚ್ 6: ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಸ್ಕಂದಗಿರಿ ಬೆಟ್ಟಕ್ಕೆ ಬೆಂಕಿ ಹತ್ತಿಕೊಂಡಿದೆ. ಬೆಂಕಿಯಿಂದ ಬೆಟ್ಟದ ಮರಗಿಡಗಳು ಹೊತ್ತಿ ಉರಿಯುತ್ತಿವೆ.

ಇಂದು (ಮಾರ್ಚ್ 6) ಸಂಜೆ ಮೇಲೆ ಈ ಘಟನೆ ನಡೆದಿದೆ. ಮರದಿಂದ ಮರಕ್ಕೆ ಬೆಂಕಿ ಹಬ್ಬಿದೆ. ಸುದ್ದಿ ತಿಳಿದ ತಕ್ಷಣ ಬೆಂಕಿ ನಂದಿಸುವ ಕೆಲಸದಲ್ಲಿ ಅರಣ್ಯ ಇಲಾಖೆ ನಿರತವಾಗಿದೆ. ಚಿಕ್ಕಬಳ್ಳಾಪುರದ ಕಳವಾರಗ್ರಾಮ ಬಳಿಯಲ್ಲಿ ಸ್ಕಂದಗಿರಿ ಬೆಟ್ಟ ಇದೆ.

ನಂದಿ ಬೆಟ್ಟದ ಮಂಜು, ಸೊಗಸು ಕಾಣುವ ರೋಮಾಂಚಕ ಅನುಭವನಂದಿ ಬೆಟ್ಟದ ಮಂಜು, ಸೊಗಸು ಕಾಣುವ ರೋಮಾಂಚಕ ಅನುಭವ

ಸ್ಕಂದಗಿರಿ ಬೆಟ್ಟ ಬೆಂಗಳೂರಿನಿಂದ ಸುಮಾರು 65 ಕಿಲೋ ಮೀಟರ್ ದೂರವಿದೆ. ಟ್ರಕ್ಕಿಂಗ್ ಇಷ್ಟಪಡುವ ಮಂದಿಯ ಫೇವರೇಟ್ ಜಾಗವಾಗಿದೆ. ವೀಕೆಂಡ್ ನಲ್ಲಿ ಬೆಂಗಳೂರು ಮಂದಿ ಇಲ್ಲಿಗೆ ಹೋಗುವುದು ಸಾಮಾನ್ಯವಾಗಿದೆ.

Fire Falls To Skandagiri Hills Chikkaballapurv

ಸ್ಕಂದಗಿರಿಯನ್ನು ಕಾಲವರ ದುರ್ಗ ಎಂದೂ ಕರೆಯುತ್ತಾರೆ. ಟಿಪ್ಪು ಸುಲ್ತಾನನ ಕಾಲದ ಹಿನ್ನೆಲೆ ಹೊಂದಿರುವ ನಂದಿಬೆಟ್ಟದ ವ್ಯಾಪ್ತಿಯಲ್ಲಿ ಬರುವ ಸ್ಕಂದಗಿರಿಯಲ್ಲಿನ ಕೋಟೆಯು 1350 ಮೀ ಉದ್ದವಿದೆ. ಇಲ್ಲಿ ಐತಿಹಾಸಿಕ ಹಿನ್ನೆಲೆಯುಳ್ಳ ಎರಡು ಗುಹೆಗಳಿವೆ.

English summary
Fire falls to Skandagiri hills Chikkaballapur. The incident happened Today (March 6th).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X