ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊತ್ತಿ ಉರಿದ ನಂದಿ ಬೆಟ್ಟ, 80 ಎಕರೆ ಅರಣ್ಯ ನಾಶ

|
Google Oneindia Kannada News

ಚಿಕ್ಕಬಳ್ಳಾಪುರ, ಫೆ 24: ಕಳೆದ ನಾಲ್ಕು ದಿನಗಳ ಹಿಂದೆ ಚಾಮರಾಜನಗರದ ಬಂಡೀಪುರ ಅರಣ್ಯದಲ್ಲಿ ಉಂಟಾದ ಕಾಡ್ಗಿಚ್ಚು ಆರುವ ಮುನ್ನವೇ ಚಿಕ್ಕಬಳ್ಳಾಪುರದ ಕಾಡಿನಲ್ಲಿಯೂ ಬೆಂಕಿ ಕಾಣಿಸಿಕೊಂಡಿದೆ.

ಹೊತ್ತಿ ಉರಿದ ಬಂಡೀಪುರ: ಬೆಂಕಿಯಲ್ಲಿ ಬೆಂದ ಪ್ರಾಣಿಗಳು, 2500 ಎಕರೆ ಅರಣ್ಯ ಪ್ರದೇಶ ನಾಶ

ಸುಮಾರು 80 ಎಕರೆಯಷ್ಟು ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ನಂದಿ ಗಿರಿಧಾಮದ ಸುಲ್ತಾನಪೇಟೆ ಭಾಗದಿಂದ ಗಿರಿಧಾಮದ ಟಿಪ್ಪು ಬೇಸಿಗೆ ಆರಮನೆಯ ಹಿಂಭಾಗದವರೆಗೂ ಬೆಂಕಿ ಹೊತ್ತಿಕೊಂಡು ಬೆಟ್ಟದಮೇಲಿನ ಕೋಟೆಯ ಕಾಲ್ನಡಿಗೆ ಮಾರ್ಗದ ಸುತ್ತಮುತ್ತಲೂ ಸಂಪೂರ್ಣ ಬೆಂಕಿ ಆವರಿಸಿ ಆತಂಕ ಸೃಷ್ಟಿಯಾಗಿದೆ.

ಬರಡಾದ ಬಂಡೀಪುರ ಅರಣ್ಯ;ಎಲ್ಲೆಲ್ಲೂ ಬೆಂಕಿಯಲ್ಲಿ ಬೆಂದ ಪ್ರಾಣಿಗಳ ದರ್ಶನ ಬರಡಾದ ಬಂಡೀಪುರ ಅರಣ್ಯ;ಎಲ್ಲೆಲ್ಲೂ ಬೆಂಕಿಯಲ್ಲಿ ಬೆಂದ ಪ್ರಾಣಿಗಳ ದರ್ಶನ

ನಂದಿಬೆಟ್ಟ ಸಾಕಷ್ಟು ಎತ್ತರ ಹಾಗೂ ವಿಶಾಲವಾಗಿದ್ದು, ನಂದಿಬೆಟ್ಟದ ತಪ್ಪಲಿನ ಜಾಗ ಯಾರೂ ಹೋಗಲಾಗದಷ್ಟು ಕಲ್ಲು ಮುಳ್ಳುಗಳ ದುರ್ಗುಮ ಹಾದಿ. ಹೀಗಾಗಿ ಬೆಂಕಿ ಬಿದ್ದ ಜಾಗಕ್ಕೆ ಹೋಗಿ ಬೆಂಕಿ ನಂದಿಸೋದು ಅಸಾಧ್ಯವಾದ ಕೆಲಸ, ಇದ್ರಿಂದ ನಂದಿಬೆಟ್ಟದಲ್ಲಿ ಬೆಂಕಿ ಹೊತ್ತಿಕೊಂಡರೂ ತಾನಾಗೇ ನಂದಿ ಹೋಗಬೇಕೆ ಹೊರತು ಯಾರೂ ಬೆಂಕಿಯ ಜಾ್ವಲೆಯನ್ನು ಬಲವಂತವಾಗಿ ನಂದಿಸಲಾಗವುದಿಲ್ಲ. ಹೀಗಾಗಿ ಪ್ರತಿ ವರ್ಷವೂ ಬೇಸಿಗೆಯಲ್ಲಿ ಇಂತಹ ಅವಘಡಗಳು ಮರುಕಳಿಸುತ್ತಲೇ ಇರುತ್ತವೆ.

Fire at Nandi Hills again

ಬೆಂಕಿ ಹೊತ್ತಿಕೊಂಡ ವಿಷಯ ತಿಳಿದ ನಂಧಿಗಿರಿಧಾಮದ ಸಿಬ್ಬಂದಿ ಸಾಕಷ್ಟು ಹರಸಾಹಸ ಪಟ್ಟು ಬೆಂಕಿ ನಂದಿಸಲು ಪ್ರಯತ್ನಿಸಲು ಯತ್ನಿಸಿದರಾದರೂ ಸಿಬ್ಬಂದಿಯ ಪ್ರಯತ್ನ ಫಲಪ್ರದವಾಗಿಲ್ಲ, ಆದರೂ ಬೆಂಕಿ ಬೆಟ್ಟದ ಮೇಲೆ ತಾಗದಂತೆ ಗಂಟೆಗಟ್ಟಲೇ ಹರಸಾಹಸಪಟ್ಟು ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಬಂಡೀಪುರ ಅರಣ್ಯದಲ್ಲಿ ಕಾಡ್ಗಿಚ್ಚು, ಒಂದು ವಾರ ಸಫಾರಿ ಬಂದ್ ಬಂಡೀಪುರ ಅರಣ್ಯದಲ್ಲಿ ಕಾಡ್ಗಿಚ್ಚು, ಒಂದು ವಾರ ಸಫಾರಿ ಬಂದ್

ಬೆಟ್ಟದ ಸುತ್ತಮುತ್ತಲೂ ಹೊತ್ತಿಕೊಂಡಿರೋ ಜಾಗಕ್ಕೆ ಆಗ್ನಿಶಾಮಕ ವಾಹನವಾನ ಸೇರಿದಂತೆ ಇನ್ನಿತರರು ಯಾರೂ ಸಹ ಹೋಗಲು ಸಾಧ್ಯವಾಗದ ಕಾರಣ ನೋಡು ನೋಡುತ್ತಲೇ ಬೆಂಕಿ ಮುಗಿಲೆತ್ತರಕ್ಕೆ ಆವರಿಸಿ ನರ್ತನ ಮಾಡಿತ್ತು.

English summary
PARTS of Nandi Hills caught fire on Sunday. Forest officials, who managed to douse the fire, said that the fire was caused by an unknown person
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X