ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಗ ಪರೀಕ್ಷೆ ಬರೆಯುವ ಕೋಣೆಗೆ ತಂದೆಯೇ ಸ್ಕ್ವಾಡ್!

|
Google Oneindia Kannada News

ಚಿಕ್ಕಬಳ್ಳಾಪುರ, ಏ.3: ಮಗ ಪರೀಕ್ಷೆ ಬರೆಯುತ್ತಿದ್ದ ಕೋಣೆಗೆ ತಂದೆಯೇ ಸ್ಕ್ವಾಡ್ ಆಗಿ ಬಂದಿದ್ದಲ್ಲದೆ ನೆರವು ನೀಡಲು ಯತ್ನಿಸಿದ ಆರೋಪ ಕೇಳಿಬಂದಿದೆ.

ಶಿಕ್ಷಣ ಇಲಾಕೆಯ ನಿಯಮದ ಪ್ರಕಾರ ಪರೀಕ್ಷೆ ವೇಳೆ ಯಾವುದೇ ಪರೀಕ್ಷಾ ಅಧಿಕಾರಿ ತಮ್ಮ ಮಕ್ಕಳು ಪರೀಕ್ಷೆ ಬರೆಯುತ್ತಿರುವ ಕೋಣೆಗೆ ಪರೀಕ್ಷಾ ಮೇಲ್ವಿಚಾರಕರಾಗಿ ಬರುವಂತಿಲ್ಲ ಆದರೆ ಇಲ್ಲೊಬ್ಬ ಶಿಕ್ಷಕರು ಶಿಕ್ಷನ ಇಲಾಖೆಯ ನಿಯಮವನ್ನು ಲೆಕ್ಕಿಸದೆ ಮಗನಿಗೆ ಸಹಾಯ ಮಾಡಿ ಸಿಕ್ಕಿಬಿದ್ದಿದ್ದಾರೆ.

ಎಸ್‌ಎಸ್‌ಎಲ್‌ಸಿ ಅಂತಿಮ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ ಎಸ್‌ಎಸ್‌ಎಲ್‌ಸಿ ಅಂತಿಮ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

ಬಾಗೇಪಲ್ಲಿ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಪ್ರಸ್ತುತ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯುತ್ತಿದ್ದು ಈ ಪರೀಕ್ಷಾ ಕೇಂದ್ರದ ಜಾಗೃತ ದಳದ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕ ರಾಜಣ್ಣ ಅವರೇ ವಿವಾದಕ್ಕೆ ಗುರಿಯಾದವರು.

Father became exam squad for son examination centre

ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನಕ್ಕೆ ಸಾಫ್ಟ್‌ವೇರ್‌, ಏಪ್ರಿಲ್‌ಗೆ ಫಲಿತಾಂಶ ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನಕ್ಕೆ ಸಾಫ್ಟ್‌ವೇರ್‌, ಏಪ್ರಿಲ್‌ಗೆ ಫಲಿತಾಂಶ

ಗಣಿತ ಪರೀಕ್ಷೆ ದಿನ ತಮ್ಮ ಮಗನಿಗೆ ಉತ್ತರ ಹೇಳಿಕೊಟ್ಟಿದ್ದಾರೆ ಎಂಬ ಕುರಿತು ಪೋಷಕರಿಂದ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಕ್ಷೇತ್ರ ಶಿಕ್ಷಣಾಧಿಕಾರಿಗಳು ರಾಜಣ್ಣ ಅವರನ್ನು ತಕ್ಷಣದಿಂದಲೇ ಪರೀಕ್ಷಾ ಕರ್ತವ್ಯದಿಂದ ಮುಕ್ತಿಗೊಳಿಸಿದ್ದಾರೆ.

English summary
By violation rules education department has appointed father as exam squad for son's examination centre. He helped for his exam writing too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X