ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಬಳ್ಳಾಪುರ ತಾಲೂಕಲ್ಲಿ ಗುರುವಾರವೂ ಭೂಕಂಪನದ ಅನುಭವ!

|
Google Oneindia Kannada News

ಚಿಕ್ಕಬಳ್ಳಾಪುರ, ಡಿಸೆಂಬರ್ 23: ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಗುರುವಾರವೂ ಭೂಕಂಪನದ ಅನುಭವವಾಗಿದೆ. ಬುಧವಾರ ಮುಂಜಾನೆ ಭೂಮಿ ನಡುಗಿತ್ತು. ಬಂಡಹಳ್ಳಿ, ಆರೂರು, ದೊಡ್ಡಹಳ್ಳಿ, ಭೋಗಪರ್ತಿ ಮುಂತಾದ ಕಡೆ ಭೂಮಿ ಕಂಪಿಸಿತ್ತು. ಗುರುವಾರದಂದು ರೆಡ್ಡಿ ಗೊಲ್ಲರಹಳ್ಳಿ ಪೆರೇಸಂದ್ರದಲ್ಲಿ ಕಂಪನದ ಅನುಭವವಾಗಿದೆ. ಲಘು ಕಂಪನದ ಅನುಭವವಾಗಿದ್ದು ರಾಷ್ಟ್ರೀಯ ಭೂಕಂಪ ಕೇಂದ್ರ(NCS) ಇನ್ನೂ ಅಧಿಕೃತ ಪ್ರಕಟಣೆ ನೀಡಿದೆ.

ಗುರುವಾರದಂದು ಪೆರೇಸಂದ್ರದಲ್ಲಿ ಮಧ್ಯಾಹ್ನ 2.16ರ ಸುಮಾರಿಗೆ ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆಯ ಕಂಪನ ದಾಖಲಾಗಿದೆ ಎಂದು ಮಾಹಿತಿ NCS ನೀಡಿದೆ.

ಬುಧವಾರ ಬೆಳಗ್ಗೆ 7.10ರ ಸುಮಾರಿಗೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 2.9 ಮತ್ತು 3.0 ತೀವ್ರತೆಯ ಕಂಪನ ದಾಖಲಾಗಿದೆ. ಭೂಮಿ ಕಂಪಿಸಿದ ಅನುಭವ ಆಗುತ್ತಲೇ ಜನರು ಮನೆಯಿಂದ ಹೊರಕ್ಕೆ ಓಡಿ ಬಂದಿದ್ದರು.

ಭೂಮಿ ಕಂಪಿಸಿದ ಅನುಭವವಾಯಿತು. ಪಾತ್ರೆಗಳು ಅಲುಗಾಡಿದವು ಎಂದು ರೆಡ್ಡಿ ಗೊಲ್ಲಹಳ್ಳಿ, ಪೆರೇಸಂದ್ರ ಗ್ರಾಮಸ್ಥರು ಹೇಳಿದ್ದಾರೆ. ಬಂಡಹಳ್ಳಿಯಲ್ಲಿ ಕೆಲವು ಮನೆಗಳಲ್ಲಿ ಇಂದು ಬಿರುಕು ಕಾಣಿಸಿಕೊಂಡಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ(KSNMDC) ನಿನ್ನೆಯೇ ಟ್ವೀಟ್ ಮಾಡಿ, ಭೂಕಂಪದ ನಂತರ ಪರಿಣಾಮದ ಬಗ್ಗೆ ಸೂಚನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಚಿಕ್ಕಬಳ್ಳಾಪುರ ತಾಲೂಕಿನ ಶೆಟ್ಟಿಗೆರೆ, ಪಿಲ್ಲಗುಂಡ್ಲಹಳ್ಳಿ, ಬೈಯಪ್ಪನಹಳ್ಳಿ, ಆದನ್ನಗಾರಹಳ್ಳಿ, ರೆಡ್ಡಿಗೊಲ್ಲವಾರಹಳ್ಳಿ, ಪರೇಸಂದ್ರ ಗ್ರಾಮದ ಸುತ್ತ-ಮುತ್ತ ಸ್ಫೋಟದ ಸದ್ದು ಸಹ ಕೇಳಿ ಬಂದಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಈ ಪೈಕಿ ರೆಡ್ಡಿಗೊಲ್ಲವಾರಹಳ್ಳಿ, ಪರೇಸಂದ್ರದಲ್ಲಿ ಇಂದು ಮತ್ತೊಮ್ಮೆ ಕಂಪನದ ಅನುಭವಾಗಿದೆ.

ಮಂಡಿಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ 2.9 ಮತ್ತು ಭೋಗಪರ್ತಿ ಗ್ರಾಮದ ಬಳಿ 3.0 ತೀವ್ರತೆಯ ಸಣ್ಣ ಪ್ರಮಾಣದ ಭೂಕಂಪವಾಗಿತ್ತು. ಆದರೆ, ಈ ಗ್ರಾಮವನ್ನೇ ಕೇಂದ್ರ ಬಿಂದು ಎಂದು ಗುರುತಿಸಲಾಗಿದೆ. ಆದರೆ, "ಜನರು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ" ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತಾ ಆರ್. ಹೇಳಿದ್ದಾರೆ.

Chikkaballapur taluk Peresandra Hit by Mild Earthquake again

ರಾಷ್ಟ್ರೀಯ ಭೂಕಂಪ ಕೇಂದ್ರ (ಎನ್‌ಸಿಎಸ್‌) ಈ ಕುರಿತು ಟ್ವೀಟ್ ಮಾಡಿ, 3.1 ತೀವ್ರತೆಯ ಭೂಕಂಪನ ಡಿಸೆಂಬರ್ 22ರಂದು ಬೆಳಗ್ಗೆ 7.09ರ ವೇಳೆಗೆ ಸಂಭವಿಸಿದೆ. ಬೆಂಗಳೂರಿನ ಉತ್ತರ ಈಶಾನ್ಯ ಭಾಗದ 70 ಕಿ. ಮೀ. ದೂರದಲ್ಲಿ 11 ಕಿ. ಮೀ. ಆಳದಲ್ಲಿ ಭೂಕಂಪ ಉಂಟಾಗಿದೆ ಎಂದು ಹೇಳಿದೆ.

English summary
Karnataka hit by earthquake: An earthquake of low intensity hit the Chikkaballapur taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X