ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಬಳ್ಳಾಪುರದಲ್ಲಿ ಮತ್ತೆ ಭೂಕಂಪನ: 2.6ರಷ್ಟು ತೀವ್ರತೆ ದಾಖಲು

|
Google Oneindia Kannada News

ಚಿಕ್ಕಬಳ್ಳಾಪುರ, ಜನವರಿ 5: ಚಿಕ್ಕಬಳ್ಳಾಪುರ ತಾಲೂಕಿನ ವಿವಿಧೆಡೆ ಭೂ ಕಂಪನವಾಗಿದ್ದು, ಭಯಗೊಂಡ ಜನರು ಮನೆಯಿಂದ ಹೊರ ಓಡಿ ಬಂದಿದ್ದಾರೆ. ಚಿಕ್ಕಬಳ್ಳಾಫುರ ತಾಲೂಕಿನ ಶೆಟ್ಟಗೆರೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮತ್ತೆ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ.

ಬುಧವಾರ ಬೆಳಗಿನ ಜಾವ ಸುಮಾರು ಮೂರು ಗಂಟೆಗೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಭೂಮಿ ಕಂಪನದ ಹಿನ್ನೆಲೆ ಜನರು ಮನೆಯಲ್ಲಿರಲು ಭಯಗೊಂಡು ಹೊರಗೆ ಬಂದು ಚಳಿಯಲ್ಲಿ ಕುಳಿತುಕೊಳ್ಳುವಂತಾಗಿದೆ.

ಇದಕ್ಕೂ ಮೊದಲು ಎರಡು ಭಾರಿ ಭೂಮಿ ಕಂಪಿಸಿತ್ತು ಎಂದು ಜನರು ಹೇಳುತ್ತಿದ್ದಾರೆ. ಭೂಮಿ ಕಂಪನದ ಹಿನ್ನೆಲೆ ಗ್ರಾಮದ ಕೆಲವು ಮನೆಗಳ ಗೊಡೆಗಳಲ್ಲಿ ಕಾಣಿಸಿಕೊಂಡ ಬಿರುಕು ಕಾಣಿಸಿಕೊಂಡಿದೆ. ಭೂಕಂಪನದ ತೀವ್ರತೆ 2.6ರಷ್ಟು ದಾಖಲಾಗಿದೆ ಎಂದು ಭೂ ಮಾಪನ ಅಧಿಕಾರಿಗಳು ತಿಳಿಸಿದ್ದಾರೆ.

Chikkaballapura: Earthquakes of Magnitude 2.6 hit Shettigere And other Places

ಬೆಳಗಿನ ಜಾವ 3.16ಕ್ಕೆ ಭೂಮಿ ಕಂಪಿಸಿದೆ. ಭೂ ಕಂಪನದ ತೀವ್ರತೆ ಕಡಿಮೆಯಾಗಿದ್ದು, ಸುಮಾರು 7ರಿಂದ 15 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಈ ಅನುಭವ ಬಂದಿದೆ. ಈ ಪ್ರದೇಶ ಭೂಕಂಪನದ ಎರಡದರಲ್ಲಿದ್ದು, ಇದು ಅಪಾಯಕಾರಿ ಅಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಭೂಕಂಪನದಿಂದ ಹಾನಿಯಾಗುವ ಸಾಧ್ಯತೆ ಕಡಿಮೆ. ಈ ಕಂಪನ ಗಮನಿಸಿದರೆ ಇದರ ತೀವ್ರತೆಯು ಮಧ್ಯಮ ಹಾಗೂ ಇದು ವಿನಾಶಕಾರಿ ಅಲ್ಲ. ಜನರು ಆತಂಕಕ್ಕೆ ಒಳಗಾಗುವುದು ಬೇಡ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ಚಿಕ್ಕಬಳ್ಳಾಪುರದಲ್ಲಿ ಮೂರು ಬಾರಿ ಭೂಮಿ ಕಂಪನವಾಗಿತ್ತು. ಮೂರನೇ ಬಾರಿ ಭೂಮಿ ಕಂಪಿಸಿದಾಗ 3.6ರಷ್ಟು ತೀವ್ರತೆ ದಾಖಲಾಗಿತ್ತು.

Recommended Video

Shardul Thakur ಆಟ ನೋಡಿ Ashwin ತಮಿಳಿನಲ್ಲಿ ಹೇಳಿದ್ದೇನು | Oneindia Kannada

English summary
Earthquakes of Magnitude 2.6 hit Shettigere And other Places Of Chikkaballapura Taluk on Wednesday morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X