ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫಲಿತಾಂಶಕ್ಕೂ ಮುನ್ನವೇ ಸೋಲೊಪ್ಪಿಕೊಂಡ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ

|
Google Oneindia Kannada News

ಚಿಕ್ಕಬಳ್ಳಾಪುರ, ಮೇ 22: ಸಮ್ಮಿಶ್ರ ಸರಕಾರದ ಬಗ್ಗೆ ಹಿಂದಿನಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಬಂದಿರುವ, ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಡಾ. ಸುಧಾಕರ್, ಜೆಡಿಎಸ್ ಜೊತೆಗಿನ ಮೈತ್ರಿ, ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಭಾರೀ ಹಿನ್ನಡೆಯಾಗಲಿದೆ ಎಂದಿದ್ದಾರೆ.

ಒಂದು ದಿನದ ಹಿಂದೆ ಇವಿಎಂ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿಗಳಿಗೆ ವ್ಯಂಗ್ಯವಾಗಿ ತಿರುಗೇಟು ನೀಡಿದ್ದ ಸುಧಾಕರ್, ಈಗ ನೇರವಾಗಿ ಜೆಡಿಎಸ್ ಜೊತೆಗಿನ ಮೈತ್ರಿಯ ಬಗ್ಗೆ ಮತ್ತೆ ಅಪಸ್ವರ ಎತ್ತಿದ್ದಾರೆ.

ಕೆಪಿಸಿಸಿ ಕಚೇರಿಗಿಂತ ಗೌಡ್ರ ಮನೆಯಂಗಣದಲ್ಲೇ ರೋಷನ್ ಬೇಗ್ ಓಡಾಟ? ಕೆಪಿಸಿಸಿ ಕಚೇರಿಗಿಂತ ಗೌಡ್ರ ಮನೆಯಂಗಣದಲ್ಲೇ ರೋಷನ್ ಬೇಗ್ ಓಡಾಟ?

ಜೆಡಿಎಸ್ ಜೊತೆಗಿನ ಮೈತ್ರಿಯಿಂದ ಕಾಂಗ್ರೆಸ್ ಹಲವು ಕ್ಷೇತ್ರಗಳನ್ನು ಕಳೆದುಕೊಳ್ಳುವುದು ನಿಶ್ಚಿತ ಎಂದಿರುವ ಸುಧಾಕರ್, ಇಂದಲ್ಲಾ ನಾಳೆ, ಮೈತ್ರಿಯ ಕೆಟ್ಟ ಅನುಭವ ನಮ್ಮನ್ನು ಕಾಡಲಿದೆ ಎಂದಿದ್ದಾರೆ.

Due to unholy allianace with JDS, we will loose key constituency: Dr. Sudhakar

ವಿರೋಧ ಪಕ್ಷದಲ್ಲಿದ್ದರೆ ಶೇ. 50ರಷ್ಟು ಮತಗಳನ್ನು ನಾವು ಪಡೆಯಬಹುದಾಗಿತ್ತು ಎಂದಿರುವ ಸುಧಾಕರ್, ದಕ್ಷಿಣ, ಕರಾವಳಿ ಕರ್ನಾಟಕದ ಭಾಗದಲ್ಲಿ ಕಾಂಗ್ರೆಸ್ಸಿಗೆ ಹಿನ್ನಡೆಯಾಗಲಿದೆ ಎನ್ನುವ ಆಂತಕ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್ ಜೊತೆಗಿನ ಮೈತ್ರಿಯನ್ನು 'ಅಪವಿತ್ರ ಮೈತ್ರಿ' ಎಂದು ಬಣ್ಣಿಸಿರುವ ಡಾ. ಸುಧಾಕರ್, ಒಂದು ವೇಳೆ ದಕ್ಷಿಣದಲ್ಲಿ ಬಿಜೆಪಿಗೆ ನೆಲೆ ಸಿಕ್ಕಿದ್ದೇ ಆದರೆ, ಅದು ಸ್ಪಷ್ಟವಾಗಿ ಕುಮಾರಸ್ವಾಮಿಯವರಿಂದ ಎಂದು ಸುಧಾಕರ್ ದೂರಿದ್ದಾರೆ.

ಎಕ್ಸಿಟ್ ಪೋಲ್ ಬಗ್ಗೆ ಉಲ್ಲೇಖಿಸುತ್ತಾ ಸಿಎಂ ಕುಮಾರಸ್ವಾಮಿ ಇವಿಎಂ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದ ಸುಧಾಕರ್, ಇವಿಎಂ ವಿಷಯವನ್ನು ಇಲ್ಲಿ ಯಾಕೆ ಎಳೆದು ತರಲಾಗುತ್ತಿದೆ. ಎಕ್ಸಿಟ್ ಪೋಲ್ ಜನರ ಒಟ್ಟಾರೆ ಅಭಿಪ್ರಾಯವನ್ನು ತಿಳಿಸುವಂತದ್ದು ಎಂದು ಹೇಳಿದ್ದರು.

English summary
Due to unholy allianace with JDS, we will loose key constituency: Chikkaballapura Congress MLA Dr. Sudhakar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X