ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಾ.ಕೆ.ಸುಧಾಕರ್ ಒಬ್ಬ ಭ್ರಷ್ರ ಮಂತ್ರಿ: ಚಿಕ್ಕಬಳ್ಳಾಪುರಲ್ಲಿ ಸಿದ್ಧರಾಮಯ್ಯ ಕೆಂಡಾಮಂಡಲ

By ಚಿಕ್ಕಬಳ್ಳಾಪುರ ಪ್ರತಿನಿಧಿ
|
Google Oneindia Kannada News

ಚಿಕ್ಕಬಳ್ಳಾಪುರ, ಜನವರಿ, 23: ನಿಮಗೆ ಧಮ್ಮು, ತಾಕತ್ತು ಇದ್ದರೆ ಒಂದೇ ವೇದಿಕೆಗೆ ಬನ್ನಿ ಬಸವರಾಜ ಬೊಮ್ಮಾಯಿ ಅವರೇ. ಸುಧಾಕರ್ ಈ ಭಾಗದ ಎಂಎಲ್‌ಎ, ಅವರಿಗೆ ರಾಜಕೀಯ ಜನ್ಮ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಅವರಿಗೆ ಟಿಕೆಟ್ ಕೊಟ್ಟು ಇವತ್ತು ಪಶ್ಚಾತಾಪ ಪಡುವಂತಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಚಿಕ್ಕಬಳ್ಳಾಪುರದಲ್ಲಿ ಹೇಳಿದರು. ಹಾಗೆಯೇ ಸುಧಾಕರ್‌ ಒಬ್ಬ ಭ್ರಷ್ರ ಮಂತ್ರಿಯಾಗಿದ್ದಾನೆ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

ನಗರದಲ್ಲಿ ಕಾಂಗ್ರೆಸ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಚಿವರಾದ ಡಾ.ಅಶ್ವತ್ಥ್‌ ನಾರಾಯಣ, ಡಾ.ಕೆ.ಸುಧಾಕರ್ ನಮ್ಮ ವಿರುದ್ಧ ಆರೋಪ ಮಾಡಿದ್ದಾರೆ. "ಅವರು ಡಾಕ್ಟರ್ ಎಲ್ಲಿ ಓದಿದ್ದಾರೆಯೋ ನಮಗೆ ಗೊತ್ತಿಲ್ಲ. ಈ ಬಗ್ಗೆ ಅನುಮಾನ ಇದೆ. ಆ ಸ್ವಾಮಿ ನಮ್ಮ ಬಳಿ ಶಾಸಕನಾಗಿದ್ದ. 2013ರಲ್ಲಿ, 2018ರಲ್ಲಿ ಆಯ್ಕೆಯಾಗಿ ನಮ್ಮ ಜೊತೆಗೆ ಇದ್ದರು. ಆಗ ಯಾವತ್ತೂ ಕೂಡ ಭ್ರಷ್ಟಚಾರದ ಬಗ್ಗೆ ಮಾತನಾಡಿಲ್ಲ. ಹಾಗೆಯೇ "ರಿಡು" ಎಂಬ ಪದವನ್ನು ಹೈಕೋರ್ಟ್‌ ಬಳಕೆ ಮಾಡಿರುವುದು," ಎಂದು ಕಿಡಿಕಾರಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ; ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತನ್ನ ಸಂಪೂರ್ಣ ಶಕ್ತಿ ಬಳಕೆ: ರಾಹುಲ್ ಗಾಂಧಿ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ; ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತನ್ನ ಸಂಪೂರ್ಣ ಶಕ್ತಿ ಬಳಕೆ: ರಾಹುಲ್ ಗಾಂಧಿ

ಸುಧಾಕರ್ ಒಬ್ಬ ಭ್ರಷ್ಟ ಮಂತ್ರಿ

ಕರ್ನಾಟಕದ ಇತಿಹಾಸದಲ್ಲಿ ಭ್ರಷ್ಟಮಂತ್ರಿ ಅಂತ ಇದ್ದರೆ ಅದು ಸುಧಾಕರ್. ಅವರು ಆರೋಗ್ಯ ಸಚಿವರಾಗಿದ್ದಾರೆ. ಕೊರೊನಾ ಸಾಂಕ್ರಾಮಿಕ ಕಾಯಿಲೆ ಬಂತು. ಆಗ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದರು. ಮಾಸ್ಕ್, ಪಿಪಿಇ ಕಿಟ್, ಮೆಡಿಸಿನ್ ಖರೀದಿ ಮಾಡುವಲ್ಲಿ 3 ಸಾವಿರ ಕೋಟಿ ಲಂಚ ಪಡೆಯಲಾಗಿದೆ. ದಾಖಲೆ ಸಮೇತ ಆರೋಪ ಮಾಡಿದೆ, ಆದರೆ ಉತ್ತರ ಕೊಡಲಿಲ್ಲ. ಆಗ ನಗರದಲ್ಲಿ 36 ಮಂದಿ ಮೃತಪಟ್ಟಿದ್ದರು. ಆದರೆ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಸುಧಾಕರ್ ಕೇಲವ 3 ಜನ ಮಾತ್ರ ಸತ್ತಿದ್ದು ಎಂದು ಹೇಳಿಕೆ ನೀಡಿದ್ದರು. ಅಂದು ಅಕ್ಸಿಜನ್ ಕೊಟ್ಟಿದ್ದರೆ 36 ಮಂದಿ ಉಳಿಯುತ್ತಿದ್ದರು. ನಾವು ಸ್ಥಳಕ್ಕೆ ಭೇಟಿ ನೀಡಿದ್ದಾಗ ವೈದ್ಯರು ಸತ್ಯವನ್ನು ತಿಳಿಸಿದ್ದರು. ಮೃತಪಟ್ಟ ಕುಟುಂಬಗಳಿಗೆ ಪರಿಹಾರ ಕಲ್ಪಿಸಲಿಲ್ಲ. ಸುಧಾಕರ್ ಆರೋಗ್ಯ ಮಂತ್ರಿಯಾಗಲು ಯೋಗ್ಯತೆ ನಾಲಯಕ್‌ ಎಂದು ವಾಗ್ದಾಳಿ ನಡೆಸಿದರು.

Dr. K. Sudhakar is corrupt minister: Siddaramaiah outrage

ನ್ಯಾಯಾಧೀಶರ ಸಮಿತಿಯಿಂದ ತನಿಖೆ ಮಾಡಿಸಿ

"ಅಪರೇಷನ್ ಕಮಲಕ್ಕೆ ಹೋಗಬೇಡ ಎಂದು ಹೇಳಿದಾಗ ರಾತ್ರಿ ಒಪ್ಪಿಕೊಂಡು ಹೋಗಲ್ಲ ಎಂದಿದ್ದರು. ಆದರೆ ಬೆಳಗ್ಗೆನೇ ಬಾಂಬೆಗೆ ಹೊರಟು ಹೋದ. ಇವನು ಭ್ರಷ್ಟಾಚಾರ ಮೌಲ್ಯಗಳ ಬಗ್ಗೆ ಮಾತನಾಡುತ್ತಾನೆ. ಬಿಜೆಪಿ ಶೇಕಡಾ 40ರಷ್ಟು ಕಮಿಷನ್‌ ಸರ್ಕಾರವಾಗಿದೆ. ಧಮ್ಮು ತಕಾತ್ತು ಇದ್ದರೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಮಿತಿಯ ಮೂಲಕ ತನಿಖೆ ನಡೆಸಲಿ. ನ್ಯಾಯಾಲಯದ ಆದೇಶದ ಮೇರೆಗೆ ಎಸಿಬಿಯನ್ನು ಮುಚ್ಚಬೇಕಾಯಿತು. ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಎಸಿಬಿ ಜಾರಿಯಲ್ಲಿದೆ. ಸುಪ್ರಿಂ ಕೋರ್ಟ್ ನ್ಯಾಯಾಧೀಶರ ಸಮಿತಿ ರಚನೆ ಮಾಡಿಸಿ ಎರಡೂ ಸರ್ಕಾರಗಳ ತನಿಖೆ ನಡೆಸಿ. ಎಲ್ಲಾ ಸತ್ಯಾಂಶ ಹೊರಗಡೆಗೆ ಬರಲಿ. ಎಚ್‌ಎನ್ ವ್ಯಾಲಿ, ಎತ್ತಿನ ಹೊಳೆ, ಮೆಡಿಕಲ್ ಕಾಲೇಜು ಮಾಡಿದ್ದು ನಾವು. ಆದರೆ ಸುಧಾಕರ್ ಲೂಟಿ ಮಾಡಿದ್ದೇ ಸಾಧನೆಯಾಗಿದೆ," ಎಂದು ಆಕ್ರೋಶ ವ್ಯಕ್ತಪಡಿಸಿದರು.

Dr. K. Sudhakar is corrupt minister: Siddaramaiah outrage

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಕೆ.ಆರ್.ರಮೇಶ್ ಕುಮಾರ್, ಕೃಷ್ಣಬೈರೇಗೌಡ, ರಾಮಲಿಂಗಾರೆಡ್ಡಿ, ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ತ್, ಯುವ ಘಟಕದ ಅಧ್ಯಕ್ಷ ಮಹಮದ್ ನಲಪಾಡ್, ಶಾಸಕರಾದ ಸುಬ್ಬಾರೆಡ್ಡಿ, ಶಿವಶಂಕರರೆಡ್ಡಿ, ಎಂಎಲ್‌ಸಿ ಎಂ.ಎಲ್.ಅನಿಲ್ ಕುಮಾರ್, ಮಾಜಿ ಶಾಸಕರಾದ ಡಾ.ಎಂ.ಸಿ.ಸುಧಾಕರ್, ನಾಗರಾಜ್, ಕೊತ್ತೂರು ಮಂಜುನಾಥ್ ಸೇರಿದಂತೆ ಮತ್ತಿತರರು ಹಾಜರಿದ್ದರು.

English summary
Dr. K. Sudhakar is corrupt minister says Siddaramaiah in Chikkaballapur,know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X