ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅವರು ಮಾತ್ರವೇ ಗೌಡರಾ? ನಾವು ಗೌಡರಲ್ಲವಾ?: ಡಿಕೆಶಿ

|
Google Oneindia Kannada News

ದೇವನಹಳ್ಳಿ, ಏಪ್ರಿಲ್ 10: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಕಾಂಗ್ರೆಸ್ ನ ವೀರಪ್ಪ ಮೊಯ್ಲಿ ಅವರ ಪರವಾಗಿ ಸಚಿವ ಡಿ.ಕೆ.ಶಿವಕುಮಾರ್ ಇಂದು ಪ್ರಚಾರ ನಡೆಸಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ದೇವನಹಳ್ಳಿ ತಾಲ್ಲೂಕು ವಿಜಯಪುರದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ ವಿರುದ್ಧ ವಾಗ್ದಾಳಿ ನಡೆಸಿದರು.

ಕ್ಷೇತ್ರದಲ್ಲಿ ನಡೆಯುತ್ತಿರುವ ಜಾತಿ ಲೆಕ್ಕಾಚಾರಕ್ಕೆ ಮಾತಿನ ಪೆಟ್ಟು ಕೊಟ್ಟ ಡಿ.ಕೆ.ಶಿ, ಬಿಜೆಪಿಯವರು ಮಾತ್ರವೇ ಹಿಂದೂಗಳಾ, ನಾವು ಹಿಂದೂಗಳಲ್ಲವಾ, ನಾನು ಗೌಡನಲ್ಲವಾ, ದೇವೇಗೌಡ, ಕುಮಾರಸ್ವಾಮಿ ಗೌಡರಲ್ಲವಾ? ಬಚ್ಚೇಗೌಡ ಮಾತ್ರವೇ ಗೌಡರಾ? ಎಂದು ಪ್ರಶ್ನೆ ಮಾಡಿದರು.

ಪ್ರಚಾರದ ವೇಳೆ ಸಚಿವ ಎಂಟಿಬಿ ನಾಗರಾಜ್ ನಾಗಿಣಿ ಡ್ಯಾನ್ಸ್: ವೈರಲ್ ವಿಡಿಯೋ ಪ್ರಚಾರದ ವೇಳೆ ಸಚಿವ ಎಂಟಿಬಿ ನಾಗರಾಜ್ ನಾಗಿಣಿ ಡ್ಯಾನ್ಸ್: ವೈರಲ್ ವಿಡಿಯೋ

ಕಳೆದ ಹತ್ತು ವರ್ಷದಿಂದ ಬಚ್ಚೇಗೌಡ ದಬ್ಬಾಳಿಕೆಗೆ ಅಂಕುಶ ಹಾಕಿ ಇಡಲಾಗಿದೆ. ಈಗ ಅವರಿಗೆ ಮತ ನೀಡಿ ಗೆಲ್ಲಿಸಿ ಮತ್ತೆ ಗೂಂಡಾ ರಾಜ್ಯ ತಂದುಕೊಳ್ಳಬೇಡಿ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

‘ವೀರಪ್ಪ ಮೊಯ್ಲಿ ಅಲ್ಲ ನಾನೇ ಚುನಾವಣೆಗೆ ನಿಂತಿದ್ದೀನಿ’

‘ವೀರಪ್ಪ ಮೊಯ್ಲಿ ಅಲ್ಲ ನಾನೇ ಚುನಾವಣೆಗೆ ನಿಂತಿದ್ದೀನಿ’

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ವೀರಪ್ಪ ಮೊಯ್ಲಿ ಚುನಾವಣೆಗೆ ನಿಂತಿದ್ದಾರೆ ಎಂಬುದನ್ನು ಮರೆತುಬಿಡಿ, ನಾನೇ ಚುನಾವಣೆಗೆ ನಿಂತಿದ್ದೇನೆ ಎಂದು ತಿಳಿದುಕೊಂಡು ಮತ ಹಾಕಿ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

'ನನ್ನ ಪಾರ್ಥಿವ ಶರೀರದ ಮೇಲೆ ಹೂಗುಚ್ಛ ಇಡುವಂತೆ ಮೋದಿಗೆ ಹೇಳಿದ್ದೆ' 'ನನ್ನ ಪಾರ್ಥಿವ ಶರೀರದ ಮೇಲೆ ಹೂಗುಚ್ಛ ಇಡುವಂತೆ ಮೋದಿಗೆ ಹೇಳಿದ್ದೆ'

‘ಹಳೆಯದ್ದು ಮರೆಯಿರಿ ಒಟ್ಟಾಗಿ ಕೆಲಸ ಮಾಡಿ’

‘ಹಳೆಯದ್ದು ಮರೆಯಿರಿ ಒಟ್ಟಾಗಿ ಕೆಲಸ ಮಾಡಿ’

ಜೆಡಿಎಸ್-ಕಾಂಗ್ರೆಸ್ ಈ ಭಾಗದಲ್ಲಿ ದಶಕಗಳಿಂದಲೂ ಜಿದ್ದಾ-ಜಿದ್ದಿ ರಾಜಕಾರಣ ಮಾಡಿಕೊಂಡು ಬಂದಿದೆ, ಆದರೆ ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಹಳೆಯದನ್ನು ಮರೆತು ನಾವು ಒಂದಾಗಿದ್ದೇವೆ, ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಿ ವೀರಪ್ಪ ಮೊಯ್ಲಿ ಅವರನ್ನು ಗೆಲ್ಲಿಸಿ ಎಂದು ಅವರು ಹೇಳಿದರು.

ವೀರಪ್ಪ ಮೊಯ್ಲಿ ಅವರ ಒಟ್ಟು ಆಸ್ತಿಗಿಂತಲೂ 14 ಪಟ್ಟು ಹೆಚ್ಚು ಸಾಲವಿದೆ ವೀರಪ್ಪ ಮೊಯ್ಲಿ ಅವರ ಒಟ್ಟು ಆಸ್ತಿಗಿಂತಲೂ 14 ಪಟ್ಟು ಹೆಚ್ಚು ಸಾಲವಿದೆ

ಬಿಜೆಪಿಯವರು ಕೇವಲ ಸುಳ್ಳು ಹೇಳಿದ್ದಾರೆ

ಬಿಜೆಪಿಯವರು ಕೇವಲ ಸುಳ್ಳು ಹೇಳಿದ್ದಾರೆ

ಬಿಜೆಪಿಯವರು ವೋಟು ಕೇಳಲು ಬಂದರೆ ಹದಿನೈದು ಲಕ್ಷ ಖಾತೆಗೆ ಏಕೆ ಬರಲಿಲ್ಲ ಎಂದು ಪ್ರಶ್ನೆ ಮಾಡಿ, ಉದ್ಯೋಗಗಳನ್ನು ಏಕೆ ನೀಡಲಿಲ್ಲ ಎಂದು ಪ್ರಶ್ನಿಸಿ, ಬಿಜೆಪಿಯವರು ಕೇವಲ ಸುಳ್ಳು ಹೇಳುತ್ತಲೇ ಬಂದಿದ್ದಾರೆ ಎಂದು ಡಿಕೆಶಿ ಹೇಳಿದರು.

ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ ಅವರ ಆಸ್ತಿ ಎಷ್ಟು? ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ ಅವರ ಆಸ್ತಿ ಎಷ್ಟು?

ಮೂರು ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ

ಮೂರು ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ

ಡಿಕೆ ಶಿವಕುಮಾರ್ ಅವರು ಇಂದು ಕೋಲಾರ, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಲ್ಲಿಯೂ ಪ್ರಚಾರ ಮಾಡಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜು, ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ವೀರಪ್ಪ ಮೊಯ್ಲಿ ಪುತ್ರ ಹರ್ಷ ಮೊಯ್ಲಿ ಹಾಗೂ ಸ್ಥಳೀಯ ಕಾಂಗ್ರೆಸ್-ಜೆಡಿಎಸ್ ಮುಖಂಡರು ಇದ್ದರು.

ಜಾತಿ ನೋಡಿ ಬಿಜೆಪಿ ಮತ ಹಾಕಿದರೆ ಎಚ್‌ಡಿಕೆ ಕುರ್ಚಿಗೆ ಆಪತ್ತು: ಮೊಯ್ಲಿ ಜಾತಿ ನೋಡಿ ಬಿಜೆಪಿ ಮತ ಹಾಕಿದರೆ ಎಚ್‌ಡಿಕೆ ಕುರ್ಚಿಗೆ ಆಪತ್ತು: ಮೊಯ್ಲಿ

English summary
DK Shivakumar today campaigned in Chikkaballapura lok sabha constituency for congress candidate Veerappa Moily. He said BJP only lying to people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X