ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೂನ್‌ಗಿಂತ ಜುಲೈನಲ್ಲಿ ಹೆಚ್ಚು ಕೊರೊನಾ ಕೇಸ್‌- ಸುಧಾಕರ್

|
Google Oneindia Kannada News

ಚಿಕ್ಕಬಳ್ಳಾಪುರ, ಜೂನ್ 10: ಜುಲೈ ತಿಂಗಳಿನಲ್ಲಿ ಹೆಚ್ಚು ಕೊರೊನಾ ವೈರಸ್‌ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಹೇಳಿದ್ದಾರೆ.

Recommended Video

ಕೊರೊನಾದಿಂದ ಪ್ರಾಣಕಳೆದುಕೊಂಡ ಶಾಸಕ | DMK MLA | J Anbazhagan | Oneindia Kannada

ಚಿಕ್ಕಬಳ್ಳಾಪುರದಲ್ಲಿ ಈ ಬಗ್ಗೆ ಸುಧಾಕರ್ ಮಾತನಾಡಿದ್ದಾರೆ. ಪರಿಣತರು ಕೊರೊನಾ ಬಗ್ಗೆ ಮಾಹಿತಿ ನೀಡಿದ್ದಾರೆ. ನಿಜವಾದ ಕೊರೊನಾ ಸ್ಪೈಕ್ ಜುಲೈನಲ್ಲಿ ಬರಬಹುದು ಅಂತ ತಿಳಿಸಿದ್ದಾರೆ ಎಂದು ಸುಧಾಕರ್ ಹೇಳಿದ್ದಾರೆ.

ಉಡುಪಿಯನ್ನು 1 ತಿಂಗಳಲ್ಲಿ ಹಸಿರು ವಲಯ ಮಾಡುತ್ತೇವೆ: ಸುಧಾಕರ್ಉಡುಪಿಯನ್ನು 1 ತಿಂಗಳಲ್ಲಿ ಹಸಿರು ವಲಯ ಮಾಡುತ್ತೇವೆ: ಸುಧಾಕರ್

ಮೇ ತಿಂಗಳಿನಲ್ಲಿ ಕೊರೊನಾ ವೈರಸ್‌ ಪ್ರಕರಣಗಳು ಹೆಚ್ಚಾದವು. ಜೂನ್‌ನಲ್ಲಿ ಆ ಸಂಖ್ಯೆಯಲ್ಲಿ ಇನ್ನಷ್ಟು ಏರಿಕೆ ಬಂತು. ಸದ್ಯ, ದಿನಕ್ಕೆ 200 ರಿಂದ 300 ಪ್ರಕರಣಗಳು ಕರ್ನಾಟಕದಲ್ಲಿ ಪತ್ತೆಯಾಗುತ್ತಿವೆ. ಆದರೆ, ಮುಂದಿನ ತಿಂಗಳು ಇದಕ್ಕಿಂತ ಹೆಚ್ಚಿನ ಪ್ರಕರಣಗಳು ಕಂಡು ಬರಲಿದೆಯಂತೆ.

Coronavirus Cases Number Will High In July Says Sudhakar

''ನಮ್ಮ ಸರ್ಕಾರಗಳು ತೆಗೆದುಕೊಂಡ ನಿಯಮಗಳಿಂದ ಕೊರೊನಾ ನಿಯಂತ್ರಣದಲ್ಲಿದೆ. ಆದರೆ, ಬೇರೆ ದೇಶಗಳಲ್ಲಿ ಒಂದೆರಡು ತಿಂಗಳಲ್ಲೇ ಸ್ಪೈಕ್ ಬಂದಿತ್ತು. ಭಾರತದಲ್ಲಿ ಐದು ತಿಂಗಳಾದರು ಸ್ಪೈಕ್ ಬಂದಿಲ್ಲ. ಸಾರ್ವಜನಿಕರು ಸಹಕಾರ ಕೊಟ್ಟರೆ ಕರ್ನಾಟಕದಲ್ಲಿ ಸ್ಪೈಕ್ ಆಗಲ್ಲ'' ಎಂದು ಸುಧಾಕರ್ ಮನವಿ ಮಾಡಿದ್ದಾರೆ.

ಸದ್ಯ, ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 276583ಕ್ಕೆ ಏರಿಕೆಯಾಗಿದೆ. ಈವರೆಗೂ ದೇಶದಲ್ಲಿ ಒಟ್ಟು 7745 ಜನರು ಮೃತಪಟ್ಟಿದ್ದಾರೆ.

English summary
Coronavirus cases number will high in july says Minister for Medical Education DR Sudhakar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X