ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೀರಪ್ಪ ಮೊಯ್ಲಿ ಅವರ ಒಟ್ಟು ಆಸ್ತಿಗಿಂತಲೂ 14 ಪಟ್ಟು ಹೆಚ್ಚು ಸಾಲವಿದೆ

|
Google Oneindia Kannada News

ಬೆಂಗಳೂರು, ಮಾರ್ಚ್ 29: ಮಾಜಿ ಸಿಎಂ, ಮಾಜಿ ಕೇಂದ್ರ ಸಚಿವ , ಎರಡು ಬಾರಿ ಸಂಸದರೂ ಆಗಿರುವ ವೀರಪ್ಪ ಮೊಯ್ಲಿ ಅವರು ಮೂರಬೇ ಬಾರಿ ಸಂಸದರಾಗಿ ಆಯ್ಕೆ ಆಗುವ ಉಮೇದಿನಿಂದ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕಾಂಗ್ರೆಸ್ಸಿನ ಹಿರಿಯ ಸಂಸದರಾಗಿರುವ ವೀರಪ್ಪ ಮೊಯ್ಲಿ ಅವರು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಎರಡು ಬಾರಿ ಆಯ್ಕೆ ಆಗಿದ್ದಾರೆ. ಕಳೆದ ಬಾರಿ ಅವರು ಸೋಲಿಸಿದ್ದ ಬಚ್ಚೇಗೌಡ ಅವರೇ ಈ ಬಾರಿಯೂ ಅವರ ಎದುರಾಳಿಯಾಗಿದ್ದಾರೆ. ವಿಶೇಷವೆಂದರೆ ವೀರಪ್ಪ ಮೊಯ್ಲಿ ಅವರ ಒಟ್ಟು ಆಸ್ತಿಗಿಂತಲೂ ಅವರ ಮೇಲಿರುವ ಸಾಲದ ಮೊತ್ತ 10 ಪಟ್ಟು ಹೆಚ್ಚಿದೆ.

ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ ಅವರ ಆಸ್ತಿ ಎಷ್ಟು?ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ ಅವರ ಆಸ್ತಿ ಎಷ್ಟು?

ವೀರಪ್ಪ ಮೊಯ್ಲಿ ಅವರ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆಗಳಿಲ್ಲ, ಮೊಯ್ಲಿ ಅವರು ಬಿ.ಎ. ಮತ್ತು ಬಿಎಲ್ ಶಿಕ್ಷಣ ಮುಗಿಸಿದ್ದಾರೆ. ವೀರಪ್ಪ ಮೊಯ್ಲಿ ಅವರ ಈ ವರ್ಷದ ಆದಾಯ 7.45 ಲಕ್ಷ, ಪತ್ನಿ ಅವರ ವಾರ್ಷಿಕ ಆದಾಯ 16.94 ಲಕ್ಷ. ಮೊಯ್ಲಿ ಅವರ ಬಳಿ 1.40 ಲಕ್ಷ ರೂಪಾಯಿ ನಗದಿದ್ದರೆ, ಪತ್ನಿ ಬಳಿ 1.03 ಲಕ್ಷ ನಗದಿದೆ.

ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣವಿದೆ?

ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣವಿದೆ?

ಮೊಯ್ಲಿ ಅವರ ಬ್ಯಾಂಕ್ ಖಾತೆಗಳಲ್ಲಿ 17.10 ಲಕ್ಷ ನಗದಿದೆ. ಪತ್ನಿ ಅವರ ಬ್ಯಾಂಕ್ ಖಾತೆಗಳಲ್ಲಿ 34.98 ಲಕ್ಷ ನಗದಿದೆ. ಮೋಯ್ಲಿ ಅವರು ಮಗ ಮತ್ತು ಪತ್ನಿಗೆ ಬೃಹತ್ ಮೊತ್ತದ ಸಾಲ ನೀಡಿದ್ದಾರೆ, ಮಗ ಹರ್ಷಗೆ 1.23 ಕೋಟಿ ಸಾಲ ಕೊಟ್ಟಿದ್ದರೆ, ಪತ್ನಿಗೆ 52.11 ಲಕ್ಷ ಸಾಲ ನೀಡಿದ್ದಾರೆ. ಪತ್ನಿ ಸಹ ಮಗ ಹರ್ಷಗೆ 4.84 ಕೋಟಿ ಸಾಲ ನೀಡಿದ್ದಾರೆ.

ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಡಿವಿಎಸ್ ಅಸ್ತಿ ಎಷ್ಟಿದೆ?ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಡಿವಿಎಸ್ ಅಸ್ತಿ ಎಷ್ಟಿದೆ?

ಮೊಯ್ಲಿ ಅವರ ಬಳಿ ಇರುವ ಕಾರೆಷ್ಟು?

ಮೊಯ್ಲಿ ಅವರ ಬಳಿ ಇರುವ ಕಾರೆಷ್ಟು?

ಮೊಯ್ಲಿ ಅವರ ಬಳಿ 1.93 ಲಕ್ಷ ಮೌಲ್ಯದ ಒಂದು ಕಾರಿದೆ, ಪತ್ನಿ ಅವರ ಬಳಿ 9.75 ಲಕ್ಷ ಮೌಲ್ಯದ ಎರಡು ಕಾರಿದೆ. ಮೋಯ್ಲಿ ಅವರ ಬಳಿ ಆಭರಣ ಇಲ್ಲ, ಪತ್ನಿ ಬಳಿ 14.33 ಲಕ್ಷದ ಚಿನ್ನಾಭರಣ ಇದೆ. ಬಾಡಿಗೆ ಮುಂಗಡ, ಬೆಸ್ಕಾಂ ಬಡ್ಡಿ ಇನ್ನಿತರೆ ಮೂಲಗಳಿಂದ ಮೊಯ್ಲಿ ಅವರಿಗೆ 6.99 ಲಕ್ಷ ಹಣ ಬರುತ್ತದೆ, ಪತ್ನಿ ಅವರಿಗೆ 10.28 ಲಕ್ಷ ಹಣ ಬರುತ್ತಿದೆ.

ಲಕ್ಷ್ಮೀ ಪುತ್ರ ಡಿ.ಕೆ.ಸುರೇಶ್ ಅವರ ಒಟ್ಟು ಆಸ್ತಿ ಎಷ್ಟು? ಲಕ್ಷ್ಮೀ ಪುತ್ರ ಡಿ.ಕೆ.ಸುರೇಶ್ ಅವರ ಒಟ್ಟು ಆಸ್ತಿ ಎಷ್ಟು?

ವೀರಪ್ಪ ಮೊಯ್ಲಿ ಅವರ ಹೆಸರಿನಲ್ಲಿರುವ ಜಮೀನೆಷ್ಟು?

ವೀರಪ್ಪ ಮೊಯ್ಲಿ ಅವರ ಹೆಸರಿನಲ್ಲಿರುವ ಜಮೀನೆಷ್ಟು?

ವೀರಪ್ಪ ಮೊಯ್ಲಿ ಅವರ ಹೆಸರಲ್ಲಿ ಯಾವುದೇ ಕೃಷಿ ಜಮೀನಿಲ್ಲ, ಕೃಷಿಯೇತರ ಜಮೀನು ಸಹ ಇಲ್ಲ. ಪತ್ನಿ ಹೆಸರಲ್ಲಿ 26.37 ಎಕರೆ ಕೃಷಿ ಜಮೀನು ಇದೆ. ಇದರ ಈಗಿನ ಮಾರುಕಟ್ಟೆ ಮೌಲ್ಯ 4.66 ಕೋಟಿ ಇದೆ. ಮೊಯ್ಲಿ ಅವರಿಗೆ ವಾಣಿಜ್ಯ ಕಟ್ಟಡಗಳೂ ಇಲ್ಲ, ವಸತಿ ಕಟ್ಟಡಗಳೂ ಇಲ್ಲ, ಪತ್ನಿ ಅವರ ಹೆಸರಲ್ಲಿ ಎರಡು ವಸತಿ ಕಟ್ಟಡಗಳು ಇದ್ದು ಅದರ ಒಟ್ಟು ಮೌಲ್ಯ 10.55 ಕೋಟಿ ಇದೆ.

ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಹೊಂದಿರುವ ಆಸ್ತಿ ಎಷ್ಟು? ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಹೊಂದಿರುವ ಆಸ್ತಿ ಎಷ್ಟು?

ಮೊಯ್ಲಿ ಮೇಲಿರುವ ಸಾಲವೆಷ್ಟು?

ಮೊಯ್ಲಿ ಮೇಲಿರುವ ಸಾಲವೆಷ್ಟು?

ಮೊಯ್ಲಿ ಅವರ ಮೇಲೆ 1.33 ಕೋಟಿ ಸಾಲವಿದೆ. ಆದರೆ ಬ್ಯಾಂಕ್ ಸಾಲಗಳು ಇಲ್ಲ, ಎಲ್ಲವೂ ವೈಯಕ್ತಿಕ ಸಾಲಗಳೇ. ಹಂಸಾ ಮೊಯ್ಲಿಯಿಂದ 2.50 ಲಕ್ಷ ಸಾಲ ಪಡೆದಿದ್ದಾರೆ. ಪತ್ನಿ ಅವರ ಮೇಲಿರುವ ಬ್ಯಾಂಕ್ ಹಾಗೂ ಗೃಹ ಸಾಲದ ಮೊತ್ತ 2.68 ಕೋಟಿ. ಜೊತೆಗೆ ವೈಯಕ್ತಿಕ ಪಡೆದಿರುವ ವೈಯಕ್ತಿಕ ಸಾಲದ ಮೊತ್ತ 3.24 ಕೋಟಿ ಇದೆ. ಮೊಯ್ಲಿ ಅವರಿಗೆ ಒಟ್ಟು 1.51 ಕೋಟಿ ಸಾಲ ಇದ್ದರೆ, ಮೊಯ್ಲಿ ಪತ್ನಿಗೆ 8.91 ಕೋಟಿ ಸಾಲ ಇದೆ.

ವೀರಪ್ಪ ಮೊಯ್ಲಿ ಒಟ್ಟು ಆಸ್ತಿ ಎಷ್ಟು?

ವೀರಪ್ಪ ಮೊಯ್ಲಿ ಒಟ್ಟು ಆಸ್ತಿ ಎಷ್ಟು?

ವೀರಪ್ಪ ಮೊಯ್ಲಿ ಅವರ ಆಸ್ತಿಗಿಂತಲೂ ಹೆಚ್ಚು ಸಾಲ ಇದೆ. ಅವರ ಚರಾಸ್ತಿ 4.90 ಲಕ್ಷ ಇದೆ, ಈ ವರ್ಷದ ಆದಾಯ 7.45 ಲಕ್ಷ ಇದೆ. ಒಟ್ಟು 12.35 ಲಕ್ಷ ಮಾತ್ರವೇ ಅವರು ಆಸ್ತಿ ಹೊಂದಿದ್ದಾರೆ ಆದರೆ ಅವರ ಮೇಲಿರುವ ಸಾಲದ ಮೊತ್ತ 1.51 ಕೋಟಿ ರೂಪಾಯಿ. ಮೊಯ್ಲಿ ಅವರ ಪತ್ನಿ ಅವರ ಚರಾಸ್ತಿ 30.54 ಲಕ್ಷ, ಸ್ಥಿರಾಸ್ತಿ 15.65 ಕೋಟಿ ಒಟ್ಟು ಆಸ್ತಿ 16.19 ಕೋಟಿ ಆಸ್ತಿ ಇದೆ. ಶ್ರೀಮತಿ ಮೊಯ್ಲಿ ಅವರ ಮೇಲಿರುವ ಸಾಲದ ಮೊತ್ತ 8.91 ಕೋಟಿ.

English summary
Chikkaballapura lok sabha constituency congress candidate Veerappa Moily asset details. He has 14 times more loan than his total asset.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X