ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಬಳ್ಳಾಪುರ ಕ್ಷೇತ್ರ ಉಪಚುನಾವಣೆ: ಜಾತಿ ಲೆಕ್ಕಾಚಾರ ಏನು?

|
Google Oneindia Kannada News

ಚಿಕ್ಕಬಳ್ಳಾಪುರ, ಡಿಸೆಂಬರ್ 05: ಹದಿನೈದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮತದಾನ ಇಂದು ನಡೆಯುತ್ತಿದ್ದು, ಮತದಾನದ ದಿನವೇ ಗೆಲುವಿನ ಲೆಕ್ಕಾಚಾರಗಳೂ ಪ್ರಾರಂಭವಾಗಿವೆ.

ಕುತೂಹಲ ಕೆರಳಿಸಿರುವ ಉಪಚುನಾವಣೆಯ ಪ್ರಮುಖ ಕ್ಷೇತ್ರಗಳಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರವೂ ಒಂದಾಗಿದ್ದು. ಇಲ್ಲಿನ ಜಾತಿ ಲೆಕ್ಕಾಚಾರ ಚುನಾವಣಾ ಗೆಲುವಿನ ಮೇಲೆ ನೇರ ಪರಿಣಾಮ ಬೀರಲಿದೆ.

LIVE : ಶರತ್ ಬಚ್ಚೇಗೌಡ ಹಾಗೂ ಎಂಟಿಬಿ ಬೆಂಬಲಿಗರ ನಡುವೆ ಮಾತಿನ ಚಕಮಕಿLIVE : ಶರತ್ ಬಚ್ಚೇಗೌಡ ಹಾಗೂ ಎಂಟಿಬಿ ಬೆಂಬಲಿಗರ ನಡುವೆ ಮಾತಿನ ಚಕಮಕಿ

ಒಕ್ಕಲಿಗರು ಮತ್ತು ಬಲಿಜಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಈ ಎರಡೂ ಸಮುದಾಯಗಳು ಯಾವ ಅಭ್ಯರ್ಥಿಗೆ ಬೆಂಬಲ ನೀಡುತ್ತಾರೋ ಅವರಿಗೆ ಗೆಲುವು ಸರಳ. ಆದರೆ ಈ ಬಾರಿ ಕಣದಲ್ಲಿರುವ ಮೂವರು ಅಭ್ಯರ್ಥಿಗಳು ಘಟಾನುಘಟಿ ಅಭ್ಯರ್ಥಿಗಳೇ ಆಗಿರುವ ಕಾರಣ ಸಮುದಾಯದ ಮತಗಳು ಒಡೆಯುವ ಸಾಧ್ಯತೆ ಇದೆ.

Chikkaballapura Assembly Seat By Elections 2019

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ ಬಯಸಿ ಬಿಜೆಪಿಯಿಂದ 'ಅನರ್ಹ' ಸುಧಾಕರ್ ಕಣಕ್ಕೆ ಇಳಿದಿದ್ದಾರೆ. ಇವರು ಈ ಮುನ್ನಾ ಕಾಂಗ್ರೆಸ್‌ ನಲ್ಲಿದ್ದರು. ಕಾಂಗ್ರೆಸ್‌ ಪಕ್ಷದಿಂದ ಹಿರಿಯ ಆಂಜಿನಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ. ಇನ್ನು ಜೆಡಿಎಸ್‌ ನಿಂದ ಅನಿತಾ ಕುಮಾರಸ್ವಾಮಿ ಅವರ ಸೋದರ ಸಂಬಂಧಿ ರಾಧಾಕೃಷ್ಣ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಮೂವರ ನಡುವೆ ತುರುಸಿನ ಪೈಪೋಟಿ ಇದೆ.

ಶಿವಾಜಿನಗರದ ಸುಲ್ತಾನ ಆಗುವವರು ಯಾರು?ಶಿವಾಜಿನಗರದ ಸುಲ್ತಾನ ಆಗುವವರು ಯಾರು?

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 200218, ಇದರಲ್ಲಿ ಮಹಿಳಾ ಮತದಾರರು 100747,
ಪುರುಷ ಮತದಾರರು 99449. ಇತರೆ 22, ಸರ್ವೀಸ್ ವೋಟರ್ಸ್ 46 ಇದ್ದಾರೆ.

ಕ್ಷೇತ್ರದ ಜಾತಿವಾರು ಲೆಕ್ಕಾಚಾರ ಇಂತಿದೆ.
ಒಕ್ಕಲಿಗರು-50000
ಬಲಿಜಿಗರು-30000
ಕುರುಬರು-15000
ಅಲ್ಪಸಂಖ್ಯಾತರು-15000
ಪರಿಶಿಷ್ಟ ಜಾತಿ-50000 ಪರಿಶಿಷ್ಟ ಪಂಗಡ-25000
ಇತರೆ ಸಮುದಾಯ-20000 (ಅಂದಾಜು)

ಯಶವಂತಪುರದ ಯಶಸ್ಸು ಯಾರ ಪಾಲಿಗೆ?ಯಶವಂತಪುರದ ಯಶಸ್ಸು ಯಾರ ಪಾಲಿಗೆ?

ವಾರ್ಡ್‌ ಮತ್ತು ಹೋಬಳಿ
ಚಿಕ್ಕಬಳ್ಳಾಪುರ ನಗರಸಭೆ
ಕಸಬಾ ಹೋಬಳಿ
ಮಂಚೇನಹಳ್ಳಿ
ನಂದಿ
ಮಂಡಿಕಲ್ಲು

English summary
Chikkaballapura assembly seat by elections: What is the caste calculations in the constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X