ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್ ಭದ್ರಕೋಟೆಯಲ್ಲಿ ಕಮಲ ಅರಳಿಸಲು ಸುಧಾಕರ್ ಸರ್ಕಸ್!

|
Google Oneindia Kannada News

ಚಿಕ್ಕಬಳ್ಳಾಪುರ, ಡಿಸೆಂಬರ್ 01 : ಚಿಕ್ಕಬಳ್ಳಾಪುರ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆ. ಕಾಂಗ್ರೆಸ್‌ಗೆ ಎದುರಾಳಿಯಾಗಿ ನಿಲ್ಲಬಲ್ಲಷ್ಟು ಪ್ರಭಾವ ಹೊಂದಿರುವುದು ಜೆಡಿಎಸ್. ಆದರೆ, ಉಪ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಮಲ ಅರಳಿಸಲು ಶತ ಪ್ರಯತ್ನ ನಡೆದಿದೆ.

ಡಾ. ಕೆ. ಸುಧಾಕರ್ ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್‌ನಿಂದ ಎಂ. ಅಂಜನಪ್ಪ, ಜೆಡಿಎಸ್‌ನಿಂದ ಎನ್.ರಾಧಾಕೃಷ್ಣ ಕಣದಲ್ಲಿದ್ದಾರೆ. ಉಪ ಚುನಾವಣೆಗೆ 4 ದಿನಗಳು ಬಾಕಿ ಉಳಿದಿದ್ದು ಪ್ರಚಾರ ಬಿರುಸಿನಿಂದ ಸಾಗಿದೆ.

ಚಿಕ್ಕಬಳ್ಳಾಪುರ: ಸುಧಾಕರ್ ಪರ ಖ್ಯಾತ ಹಾಸ್ಯನಟ ಬ್ರಹ್ಮಾನಂದಂ ಪ್ರಚಾರಚಿಕ್ಕಬಳ್ಳಾಪುರ: ಸುಧಾಕರ್ ಪರ ಖ್ಯಾತ ಹಾಸ್ಯನಟ ಬ್ರಹ್ಮಾನಂದಂ ಪ್ರಚಾರ

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಬಿ. ಎನ್. ಬಚ್ಚೇಗೌಡ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಆದರೆ, ಲೋಕಸಭಾ ಚುನಾವಣೆಯೇ ಬೇರೆ, ವಿಧಾನಸಭೆ ಚುನಾವಣೆಯೇ ಬೇರೆ ಎಂಬುದು ಎಲ್ಲಾ ಪಕ್ಷಗಳ ಕಾರ್ಯಕರ್ತರ ಅಭಿಪ್ರಾಯ.

ಚಿಕ್ಕಬಳ್ಳಾಪುರ: ಕೊನೆ ಕ್ಷಣದಲ್ಲಿ ಜೆಡಿಎಸ್ ಅಭ್ಯರ್ಥಿ ಬದಲುಚಿಕ್ಕಬಳ್ಳಾಪುರ: ಕೊನೆ ಕ್ಷಣದಲ್ಲಿ ಜೆಡಿಎಸ್ ಅಭ್ಯರ್ಥಿ ಬದಲು

ಪರಿಶಿಷ್ಟ ಜಾತಿ/ಪಂಗಡ, ಒಕ್ಕಲಿಗರು, ಬಲಿಜ ಸಮುದಾಯಗಳ ಮತಗಳು ಕ್ಷೇತ್ರದಲ್ಲಿ ನಿರ್ಣಾಯಕ. ಮೂರು ಪಕ್ಷಗಳ ಅಭ್ಯರ್ಥಿಗಳು ಒಕ್ಕಲಿಗ ಸಮುದಾಯದವರು. ಡಾ. ಕೆ. ಸುಧಾಕರ್ ವರ್ಚಸ್ಸು, ಬಿಜೆಪಿಯ ಚಿನ್ಹೆ ಜಯ ತಂದು ಕೊಡಲಿದೆಯೇ? ಕಾದು ನೋಡಬೇಕು.

ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ 'ಅನರ್ಹ' ಸುಧಾಕರ್ ಆಡಿಯೋ ಬಹಿರಂಗಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ 'ಅನರ್ಹ' ಸುಧಾಕರ್ ಆಡಿಯೋ ಬಹಿರಂಗ

ಡಾ. ಕೆ. ಸುಧಾಕರ್ ಬಿಜೆಪಿ ಅಭ್ಯರ್ಥಿ

ಡಾ. ಕೆ. ಸುಧಾಕರ್ ಬಿಜೆಪಿ ಅಭ್ಯರ್ಥಿ

2018ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಡಾ. ಕೆ. ಸುಧಾಕರ್ ಈ ಉಪ ಚನಾವಣೆಯಲ್ಲಿ ಬಿಜೆಪಿ ಹುರಿಯಾಳು. ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಶಂಕುಸ್ಥಾಪನೆ, ಮಂಚೇನಹಳ್ಳಿ ತಾಲೂಕು ರಚನೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದನ್ನು ಮುಂದಿಟ್ಟುಕೊಂಡು ಸುಧಾಕರ್ ಚುನಾವಣಾ ಕಣಕ್ಕಿಳಿದಿದ್ದಾರೆ. ಯಡಿಯೂರಪ್ಪ ಸಹ ಸುಧಾಕರ್ ಗೆಲ್ಲಿಸಬೇಕು ಎಂದು ಪಣ ತೊಟ್ಟಿದ್ದಾರೆ.

ಕಾಂಗ್ರೆಸ್‌ನಿಂದ ಎಂ. ಅಂಜನಪ್ಪ

ಕಾಂಗ್ರೆಸ್‌ನಿಂದ ಎಂ. ಅಂಜನಪ್ಪ

ಕಾಂಗ್ರೆಸ್‌ನಿಂದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಪ್ತ ಎಂ. ಅಂಜನಪ್ಪ ಅಭ್ಯರ್ಥಿ. ಸಮಾಜ ಸೇವೆಯ ಮೂಲಕ ಪ್ರಸಿದ್ಧಿ ಪಡೆದವರು. 2013ರಲ್ಲಿ ಅವರಿಗೆ ಸುಧಾಕರ್‌ ಕಾರಣದಿಂದಾಗಿಯೇ ಅಂಜನಪ್ಪಗೆ ಟಿಕೆಟ್ ಕೈ ತಪ್ಪಿತ್ತು. ಸುಧಾಕರ್ ವಿರುದ್ಧ ಇರುವ ಆಕ್ರೋಶ ಅಂಜನಪ್ಪರನ್ನು ಗೆಲುವಿನ ದಡ ಸೇರಿಸಲಿದೆಯೇ? ಕಾದು ನೋಡಬೇಕು.

ಎನ್. ರಾಧಾಕೃಷ್ಣ ಜೆಡಿಎಸ್ ಹುರಿಯಾಳು

ಎನ್. ರಾಧಾಕೃಷ್ಣ ಜೆಡಿಎಸ್ ಹುರಿಯಾಳು

ಜೆಡಿಎಸ್‌ನಿಂದ ಎನ್. ರಾಧಾಕೃಷ್ಣ ಹುರಿಯಾಳು. ಮಾಜಿ ಶಾಸಕ ಕೆ. ಪಿ. ಬಚ್ಚೇಗೌಡ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಮಾಜಿಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಗೆ ಸೋದರ ಸಂಬಂಧಿಯಾದ ಉದ್ಯಮಿ ಎನ್. ರಾಧಾಕೃಷ್ಣ ಬಿರುಸಿನ ಪ್ರಚಾರವನ್ನು ನಡೆಸುತ್ತಿದ್ದಾರೆ. ಗೆಲುವು ಯಾರಿಗೆ ಸಿಗಲಿದೆ? ಕಾದು ನೋಡಬೇಕು.

ಚುನಾವಣಾ ಕಣದ ಚಿತ್ರಣ

ಚುನಾವಣಾ ಕಣದ ಚಿತ್ರಣ

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 1,99,880 ಮತದಾರರು ಇದ್ದಾರೆ. 2018ರ ಚುನಾವಣೆಯಲ್ಲಿ ಬಿಜೆಪಿ ಪಡೆದ ಮತ ಕೇವಲ 5,576. ಜೆಡಿಎಸ್‌ನ ಕೆ. ಪಿ. ಬಚ್ಚೇಗೌಡ 51,575 ಮತ ಪಡೆದಿದ್ದರು. ಡಾ. ಕೆ. ಸುಧಾಕರ್ ಈ ಬಾರಿ ಕ್ಷೇತ್ರದಲ್ಲಿ ಕಮಲ ಅರಳಿಸಲು ಪ್ರಯತ್ನ ನಡೆಸಿದ್ದಾರೆ.

English summary
Chikkaballapur assembly seat by election picture. Dr.Sudhakara BJP candidate and M. Anjanappa from Congress. N. Radha Krishna JD(S) candidate for December 5, 2019 by elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X