ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಬಳ್ಳಾಪುರದಲ್ಲಿ 9 ಜನರಿಗೆ ಕೊರೊನಾ ಸೋಂಕು

|
Google Oneindia Kannada News

ಚಿಕ್ಕಬಳ್ಳಾಪುರ, ಮಾರ್ಚ್ 28: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಕೊರೊನಾ ಸೋಂಕು ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗಿತ್ತು. ಜಿಲ್ಲೆಯಾದ್ಯಂತ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಎಲ್ಲಾ ಹಂತಗಳಲ್ಲಿ ಪರಿಣಾಮಕಾರಿ ನಿಯಂತ್ರಣ ವಿಧಾನಗಳನ್ನು ಹಮ್ಮಿಕೊಳ್ಳಲಾಗಿದೆ.

ಜಿಲ್ಲೆಯಲ್ಲಿ 9 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಗೆ ಮಾರ್ಚ್ 28ರವರೆಗೆ ವಿದೇಶಗಳಿಂದ 197 ಜನರು ಬಂದಿದ್ದು, ಇವರ ಜೊತೆ 56ಜನ ಸಂಪರ್ಕಿಗಳು ಇದ್ದು ಒಟ್ಟು 253 ಜನ ಅವಲೋಕನದಲ್ಲಿ ಇರುತ್ತಾರೆ ಎಂದು ಜಿಲ್ಲಾಧಿಕಾರಿ ಆರ್ ಲತಾ ಅವರು ತಿಳಿಸಿರುತ್ತಾರೆ.

FACT CHECK: ಲಾಕ್ ಡೌನ್ ವೇಳೆ ಭಾರತದಲ್ಲಿ ಇಂಟರ್ನೆಟ್ ಬಂದ್?FACT CHECK: ಲಾಕ್ ಡೌನ್ ವೇಳೆ ಭಾರತದಲ್ಲಿ ಇಂಟರ್ನೆಟ್ ಬಂದ್?

ಎಲ್ಲಾ ಪ್ರಯಾಣಿಕರು ಗೃಹ ನಿರ್ಬಂಧನದಲ್ಲಿದ್ದು ದಿನ ಕ್ಷೇತ್ರ ಆರೋಗ್ಯ ಸಿಬ್ಬಂದಿಗಳು ಇವರ ಆರೋಗ್ಯದ ಬಗ್ಗೆ ನಿಗಾವಹಿಸುತ್ತಿದ್ದಾರೆ. 125 ಜನ 14 ದಿನಗಳೊಳಗಿನ ಕೊರೆಂಟೈನ್ ತಪಾಸಣೆ ಪಡೆಯುತ್ತಿರುತ್ತಾರೆ.

9 Covid19 Postive Cases In Chikkaballapur District

ಇನ್ನುಳಿದ 109 ಜನರು 14 ದಿನಗಳ ಕೊರೆಂಟೈನ್ ಅವಧಿಯನ್ನು ಪೂರ್ಣಗೊಳಿಸಿರುತ್ತಾರೆ. ಜಿಲ್ಲೆಯಲ್ಲಿ 9 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಒಬ್ಬ ಮಹಿಳೆ ಮೃತ ಪಟ್ಟಿರುತ್ತಾರೆ ಎಂದು ತಿಳಿಸಿದರು.

English summary
9 Covid19 Postive Cases In Chikkaballapur District. Chikkaballapur DC R Lata Confirms It On Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X