ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಂಗಮ್ಮ ದೇವಿ ಪ್ರಸಾದ ದುರಂತ, ಮೃತರ ಸಂಖ್ಯೆ 2ಕ್ಕೆ ಏರಿಕೆ

|
Google Oneindia Kannada News

ಚಿಕ್ಕಬಳ್ಳಾಪುರ, ಜನವರಿ 27 : ಗಂಗಮ್ಮ ದೇವಾಲಯದ ಪ್ರಸಾದ ಸೇವಿಸಿ ಮೃತಪಟ್ಟವರ ಸಂಖ್ಯೆ 2ಕ್ಕೆ ಏರಿಕೆಯಾಗಿದೆ. ಪ್ರಸಾದ ಸೇವಿಸಿದ 11ಕ್ಕೂ ಅಧಿಕ ಜನರು ಕೋಲಾರ ಮತ್ತು ಚಿಕ್ಕಬಳ್ಳಾಪುರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶನಿವಾರ ಕೋಲಾರದ ಆಸ್ಪತ್ರೆಯಲ್ಲಿ ಕವಿತಾ ಎನ್ನುವವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ರಾತ್ರಿ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸರಸ್ವತಮ್ಮ ಎಂಬುವವರು ಮೃತಪಟ್ಟಿದ್ದಾರೆ.

ಚಿಂತಾಮಣಿಯಲ್ಲಿ ಪ್ರಸಾದ ಸೇವಿಸಿ ಯುವತಿ ಸಾವು, 6 ಮಂದಿ ಅಸ್ವಸ್ಥ ಚಿಂತಾಮಣಿಯಲ್ಲಿ ಪ್ರಸಾದ ಸೇವಿಸಿ ಯುವತಿ ಸಾವು, 6 ಮಂದಿ ಅಸ್ವಸ್ಥ

56 ವರ್ಷದ ಸರಸ್ವತಮ್ಮ ಶಿಢ್ಲಘಟ್ಟ ತಾಲೂಕಿನ ಗಡಿಮಿಂಚೇನಹಳ್ಳಿಯ ನಿವಾಸಿ. ಊರ ಹಬ್ಬಕ್ಕೆಂದು ಮಗಳು ಗೌರಿ ಮನೆಗೆ ಬಂದಿದ್ದರು. ಆದರೆ, ಪ್ರಸಾದ ಸೇವಿಸಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

2 dead after consuming prasad at Chikkaballapura temple

ಇಬ್ಬರು ಪೊಲೀಸ್ ವಶಕ್ಕೆ : ಗಂಗಮ್ಮ ದೇವಿಗೆ ಹರಕೆ ಹೊತ್ತಿದ್ದ ಲಕ್ಷ್ಮಿ ಎಂಬುವವರು ಮನೆಯಲ್ಲಿ ಪ್ರಸಾದ ಸಿದ್ದಪಡಿಸಿಕೊಂಡು ಬಂದಿದ್ದರು. ಅಮರಾವತಿ ಎಂಬುವವರು ಭಕ್ತರಿಗೆ ಪ್ರಸಾದವನ್ನು ಹಂಚಿದ್ದರು.

2 dead after consuming prasad at Chikkaballapura temple

ಪ್ರಸಾದ ಸೇವಿಸಿ ಸಾವು ತಡೆಗೆ ಸರ್ಕಾರದಿಂದ ಮಾರ್ಗಸೂಚಿ: ಕುಮಾರಸ್ವಾಮಿ ಪ್ರಸಾದ ಸೇವಿಸಿ ಸಾವು ತಡೆಗೆ ಸರ್ಕಾರದಿಂದ ಮಾರ್ಗಸೂಚಿ: ಕುಮಾರಸ್ವಾಮಿ

'ಲಕ್ಷ್ಮಿ ಮತ್ತು ಅಮರಾವತಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಕಾಯುತ್ತಿದ್ದೇವೆ' ಎಂದು ಚಿಕ್ಕಬಳ್ಳಾಪುರ ಎಸ್ಪಿ ಕಾರ್ತಿಕ್ ರೆಡ್ಡಿ ಹೇಳಿದ್ದಾರೆ.

English summary
Two women dead after consuming prasad at Gangamma Devi temple in Chintamani of Chikkaballapur district. More than 11 people hospitalised.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X