ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಭೀತಿ: ಗೌರಿಬಿದನೂರಿನಲ್ಲಿ 1 ಸಾವಿರ ಮಂದಿಗೆ ಗೃಹದಿಗ್ಬಂಧನ

|
Google Oneindia Kannada News

ಚಿಕ್ಕಬಳ್ಳಾಪುರ, ಮಾರ್ಚ್ 31: ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ ಒಟ್ಟು 1 ಸಾವಿರ ಮಂದಿಯನ್ನು ಗೃಹದಿಗ್ಬಂಧನದಲ್ಲಿಡಲಾಗಿದೆ.

ಗೌರಿಬಿದನೂರಿನಲ್ಲಿ 9 ಮಂದಿಗೆ ಸೋಂಕು ದೃಢವಾಗಿದ್ದು, ಓರ್ವ ವೃದ್ಧೆ ಈಗಾಗಲೇ ಸೋಂಕಿಗೆ ಬಲಿಯಾಗಿದ್ದಾರೆ. ವೈರಸ್ ಸೋಂಕಿತರ ಮನೆಗಳಿರುವ ಹಿರೇಬಿದನೂರಿನ 132 ಮನೆಗಳಲ್ಲಿರುವ 872 ಮಂದಿಯನ್ನು ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗಿದ್ದು, ತಾಲೂಕಿನ ತೊಂಡೆಬಾವಿ ಗ್ರಾಮದಲ್ಲೂ ಸಹ 30 ಮನೆಗಳಲ್ಲಿರುವ ಸುಮಾರು 150ಕ್ಕೂ ಹೆಚ್ಚು ಮಂದಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.

ಉಡುಪಿಯಲ್ಲಿ ಮತ್ತೆ 2 ಪಾಸಿಟಿವ್, ಒಟ್ಟು 3 ಜನಕ್ಕೆ ಕೊರೊನಾಉಡುಪಿಯಲ್ಲಿ ಮತ್ತೆ 2 ಪಾಸಿಟಿವ್, ಒಟ್ಟು 3 ಜನಕ್ಕೆ ಕೊರೊನಾ

ಸೋಂಕಿತರ ಮನೆಗಳಿರುವ ಗ್ರಾಮದ ನಿವಾಸಿಗಳನ್ನು ಸಂಪೂರ್ಣವಾಗಿ ಹೋಂ ಕ್ವಾರಂಟೈನ್ ಗೆ ಗುರಿಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

1000 Villagers In Home Quarantine in Chikkaballapur

ಸೋಂಕಿತರ ಮನೆಗಳಿರುವ ಹಿರೇಬಿದನೂರಿನ 132 ಮನೆಗಳಲ್ಲಿರುವ 872 ಮಂದಿಯನ್ನು ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗುತ್ತಿದೆ. ಮತ್ತೊಂದೆಡೆ ತಾಲೂಕಿನ ತೊಂಡೆಬಾವಿ ಗ್ರಾಮದಲ್ಲೂ ಸಹ 30 ಮನೆಗಳಲ್ಲಿರುವ ಸುಮಾರು 150ಕ್ಕೂ ಹೆಚ್ಚು ಮಂದಿಯನ್ನು ಹೋಂ ಕ್ವಾರಂಟೈನ್ ಮಾಡಲಾಗುತ್ತಿದೆ. ಸೋಂಕಿತರ ಮನೆಗಳಿರುವ ಗ್ರಾಮದ ನಿವಾಸಿಗಳನ್ನು ಸಂಪೂರ್ಣವಾಗಿ ಹೋಂ ಕ್ವಾರಂಟೈನ್ ಗೆ ಗುರಿಪಡಿಸಲಾಗುತ್ತಿದೆ.

ಈಗಾಗಲೇ ಗೌರಿಬಿದನೂರು ತಾಲೂಕು ಆರೋಗ್ಯಾಧಿಕಾರಿ ರತ್ನಮ್ಮ ನೇತೃತ್ವದಲ್ಲಿ ಮನೆ ಮನೆಗಳಿಗೆ ತೆರಳಿ ಪ್ರತಿಯೊಬ್ಬ ಸದಸ್ಯರಿಗೂ ಕ್ವಾರಂಟೈನ್ ಸ್ಟಾಂಪಿಂಗ್ ಮಾಡಲಾಗುತ್ತಿದೆ. ಈ ಎಲ್ಲಾ ಮನೆಗಳಲ್ಲಿನ ಸದಸ್ಯರು ಯಾರೂ ಕೂಡ ಮನೆಗಳಿಂದ ಹೊರಬರುವಂತಿಲ್ಲ. ಇವರ ಮನೆಗಳಿಗೆ ಅಗತ್ಯ ಎಲ್ಲಾ ದಿನ ಬಳಕೆ ವಸ್ತುಗಳನ್ನು ದಾನಿಗಳಿಂದ ಪಡೆದು ಮನೆಗಳಿಗೆ ಕಳಿಸಿಕೊಡುವ ಕೆಲಸ ಮಾಡಲಾಗುತ್ತದೆ.

ಈ ಕೊರೊನಾ ವೈರಸ್ ಹರಡದಂತೆ ತಡೆಯುವ ಸಲುವಾಗಿ ಮೂಲತಃ ಗೌರಿಬಿದನೂರಿನವರಾದ ಹಿರಿಯ ಕೆಎಎಸ್ ಅಧಿಕಾರಿ ವರಪ್ರಸಾದರೆಡ್ಡಿಯನ್ನ ನೇಮಿಸಿದ್ದು, ಅವರ ಉಸ್ತುವಾರಿಯಲ್ಲಿ ಈ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ. ಅಂದಹಾಗೆ ಗೌರಿಬಿದನೂರಿನಲ್ಲಿ 9 ಮಂದಿಗೆ ಸೋಂಕು ದೃಢವಾಗಿದ್ದು, ಓರ್ವ ವೃದ್ಧೆ ಈಗಾಗಲೇ ಸೋಂಕಿಗೆ ಬಲಿಯಾಗಿದ್ದಾರೆ.

ಈಗಾಗಲೇ ಅಗತ್ಯ ದಿನಸಿ ವಸ್ತುಗಳನ್ನ ಸಂಗ್ರಹಿಸಲಾಗಿದ್ದು, ತರಕಾರಿಗಳನ್ನು ಸಹ ಪ್ಯಾಕ್ ಮಾಡಿ ಬೆಳಿಗ್ಗೆಯಿಂದಲೇ ಮನೆ ಮನೆಗಳಿಗೆ ವಿತರಿಸುವ ಕಾಯಕ ನಡೆಯಲಿದೆ. ಇವರ್ಯಾರು ಕೂಡ ಗೌರಿಬಿದನೂರು ನಗರಕ್ಕೂ ಕೂಡ ಪ್ರವೇಶ ಮಾಡುವಂತಿಲ್ಲ. ಇವರ ಗ್ರಾಮಗಳನ್ನೇ ಸಂಪೂರ್ಣ ಲಾಕ್ ಡೌನ್ ಮಾಡುವ ಮೂಲಕ ಕೊರೊನಾ ವೈರಸ್ ಹರಡದಂತೆ ತಡೆಯಲು ಜಿಲ್ಲಾಡಳಿತ ಹೊಸ ಯೋಜನೆ ರೂಪಿಸಿದೆ.

English summary
Coronavirus scare: 1000 Villagers In Home quarantine after Raise of Corona cases in Chikballapur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X